ಅಕ್ರಮವಾಗಿ ಚಿನ್ನ ಸಾಗಾಟ ಮಾಡಲು ಯತ್ನಿಸಿದ ವ್ಯಕ್ತಿಯ ಬಂಧನ.!

0
Spread the love

ಬೆಂಗಳೂರು: ಅಕ್ರಮವಾಗಿ ಒಳ‌ ಉಡುಪಿನಲ್ಲಿ ಚಿನ್ನ ಅಡಗಿಸಿಟ್ಟುಕೊಂಡು ಸಾಗಾಟಕ್ಕೆ‌ ಯತ್ನಸಿದ ವ್ಯಕ್ತಿಯನ್ನು ಕೆಂಪೇಗೌಡ ಏರ್ಪೋಟ್ ‌ನಲ್ಲಿ ಕಸ್ಟಮ್ಸ್ ಅಧಿಕಾರಿಗಳು ಬಂಧಿಸಿದ್ದಾರೆ. ಕೋಲಲಾಂಪುರದಿಂದ ಬೆಂಗಳೂರಿಗೆ ಬಂದಿದ್ದ ಆರೋಪಿಯಾಗಿದ್ದು, ಆರೋಪಿಯಿಂದ 1.06 ಕೋಟಿ ಮೌಲ್ಯದ 1.49 ಕೆ.ಜಿ ತೂಕದ ಗೋಲ್ಡ್ ಬಾರ್ ಅನ್ನು ವಶಕ್ಕೆ ಪಡೆಯಲಾಗಿದೆ.

Advertisement

ಕೌಲಾಲಂಪುರದಿಂದ ಬಂದಿದ್ದ ಪ್ರಯಾಣಿಕ ತನ್ನ ಒಳ ಉಡುಪಿನಲ್ಲಿ ಮರೆಮಾಚಿ ಗೋಲ್ಡ್ ಬಾರ್ ಅನ್ನು ಇಟ್ಟಿರುವುದು ತಪಾಸಣೆ ವೇಳೆ ಬೆಳಕಿಗೆ ಬಂದಿದೆ. ಆರೋಪಿಯಿಂದ 1.06 ಕೋಟಿ ಮೌಲ್ಯದ 1499.64 ಗ್ರಾಂ ತೂಕದ ಗೋಲ್ಡ್ ಬಾರ್ ಅನ್ನು ವಶಕ್ಕೆ ಪಡೆಯಲಾಗಿದೆ. ಆರೋಪಿಯನ್ನು 15 ದಿನಗಳ ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದ್ದು, ಕಸ್ಟಮ್ಸ್ ಅಧಿಕಾರಿಗಳು ವಿಚಾರಣೆ ಮುಂದುವರೆಸಿದ್ದಾರೆ.


Spread the love

LEAVE A REPLY

Please enter your comment!
Please enter your name here