ಗದಗ:- ಜಿಲ್ಲೆಯ ಲಕ್ಷ್ಮೇಶ್ವರ ಪಟ್ಟಣದ ಬೆಣ್ಣೆಪೇಟೆಯಲ್ಲಿ ಸಾಲಬಾಧೆ ತಾಳಲಾರದೇ ಮರಕ್ಕೆ ನೇಣು ಹಾಕಿಕೊಂಡು ರೈತ ಆತ್ಮಹತ್ಯೆ ಮಾಡಿಕೊಂಡ ಘಟನೆ ಜರುಗಿದೆ.
54 ವರ್ಷದ ಶಂಕ್ರಣ್ಣ ಗೋಡಿ ಆತ್ಮಹತ್ಯೆ ಮಾಡಿಕೊಂಡ ರೈತ ಎಂದು ತಿಳಿದು ಬಂದಿದೆ. ರೈತ ಹಲವು ಬ್ಯಾಂಕ್ ಗಳಲ್ಲಿ ಸುಮಾರು10 ಲಕ್ಷ ರೂ ಸಾಲ ಮಾಡಿದ್ದ. ಆದರೆ ಅತೀವೃಷ್ಠಿಯಿಂದ ತಾನು ಬೆಳೆದ ಬೆಳೆಯೆಲ್ಲಾ ಹಾನಿಗೊಳಗಾಗಿದೆ.
ಐದು ಎಕರೆ ಜಮೀನಿನಲ್ಲಿ ಬೆಳೆದಿದ್ದ ಹೆಸರು, ಹತ್ತಿ, ಶೇಂಗಾ, ಮೆಣಸಿನಕಾಯಿ ಬೆಳೆ ನಾಶವಾಗಿದ್ದು, ಟ್ರಾಕ್ಟರ್ ಗಾಗಿ, ಬೆಳೆಗಾಗಿ, ಮತ್ತು ಆಸ್ಪತ್ರೆ ವೆಚ್ಚಕ್ಕಾಗಿ ರೈತ ಸಾಲ ಮಾಡಿದ್ದ.
ವರ್ಷದಿಂದ ವರ್ಷಕ್ಕೆ ಸಾಲ ಹೆಚ್ಚಾಗುತ್ತಿದ್ದರಿಂದ ರೈತ ಬಹಳ ಬೇಸತ್ತಿದ್ದ. ಹೀಗಾಗಿ ಈ ವರ್ಷವೂ ಆಗಿರುವ ಬೆಳೆಹಾನಿಗೆ ಬೇಸತ್ತು ತನ್ನ ಜಮೀನಿನಲ್ಲಿ ನೇಣಿಗೆ ಶರಣಾಗಿದ್ದಾರೆ.
ಘಟನೆ ಸಂಬಧ ಲಕ್ಷ್ಮೇಶ್ವರ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.



