ಅಭಿಮಾನಿಗಳಿಗೆ ಕಳಂಕ ತರುವಂತ ಕೆಲಸ ಯಾವತ್ತೂ ಮಾಡೋದಿಲ್ಲ: ಕಿಚ್ಚ ಸುದೀಪ್

0
Spread the love

ಕಿಚ್ಚ ಸುದೀಪ್ ಇಂದು 51ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಕುಟುಂಬಸ್ಥರು ಮತ್ತು ಸ್ನೇಹಿತರ ಜೊತೆ ರಾತ್ರಿ 12.00 ಗಂಟೆಗೆ ಕೇಕ್​ ಕಟ್​ ಮಾಡಿ ಸಂಭ್ರಮಿಸಿದ್ದಾರೆ. ಈ ವೇಳೆ ಪತ್ನಿ ಪ್ರಿಯ, ಮಗಳು ಸಾನ್ವಿ ಕೂಡ ಭಾಗಿಯಾಗಿದ್ದರು. ಇವರ ಸಮ್ಮುಖದಲ್ಲಿ ಕೇಕ್​ ಕಟ್​ ಮಾಡಿ ಸಂಭ್ರವಿಸಿದ್ದಾರೆ. ಇನ್ನೂ ಜಯನಗರದ ಎಂಇಎಸ್ ಗ್ರೌಂಡ್‍ನಲ್ಲಿ ಅಭಿಮಾನಿಗಳ ಸಮ್ಮುಖದಲ್ಲಿ ಕೇಕ್ ಕತ್ತರಿಸಿ ಹುಟ್ಟುಹಬ್ಬ ಆಚರಿಸಿಕೊಂಡ ಅವರು, ಅಭಿಮಾನಿಗಳನ್ನುದ್ದೇಶಿಸಿ ಮಾತನಾಡಿದರು.

Advertisement

ಈ ವೇಳೆ, ಕ್ಯಾಮೆರಾ ನೋಡಿ ಇನ್ನೂ ಚಾಲ್ತಿಯಲ್ಲಿದೀವಿ ಎಂದು ಅನ್ಸುತ್ತೆ. ಅವ್ರು ತೋರಿಸೋ ಪ್ರೀತಿ ವ್ಯಕ್ತಿತ್ವದಿಂದ ನಾನು ಇಲ್ಲಿಯವರೆಗೆ ಬಂದಿದ್ದೇನೆ. ಹೋದಲ್ಲೆಲ್ಲ ತಲೆ ಎತ್ಕೊಂಡು ನಿಲ್ತೀವಿ ಅಂದ್ರೆ ಅವ್ರೇ ಕಾರಣ, ಅವ್ರಿಗೆ ಕಳಂಕ ತರುವಂತ ಕೆಲಸ ಯಾವತ್ತೂ ಮಾಡೋದಿಲ್ಲ. ವ್ಯಕ್ತಿತ್ವದಲ್ಲಿ ದೊಡ್ಡವರಾಗ್ಬೇಕು ಅಂದ್ರೆ ಸಿನಿಮಾನೇ ಮಾಡ್ಬೇಕಾಗಿಲ್ಲ. ನನ್ನ ಅಕ್ಕ ಪಕ್ಕದವರು ಚನ್ನಾಗಿದ್ದಾರೆ, ನನ್ನ ಸರಿ ತಪ್ಪು ತಿದ್ದೋರು ಒಳ್ಳೆಯವ್ರಾಗಿದ್ದಾರೆ. ಹಾಗಾಗಿಯೇ ನಾನು ಇಲ್ಲಿಗೆ ಬಂದು ನಿಂತಿದ್ದೇನೆ ಎಂದು ಸನ್ಮಾರ್ಗ ತೋರಿದವರನ್ನು ಸ್ಮರಿಸಿದ್ದಾರೆ.

 


Spread the love

LEAVE A REPLY

Please enter your comment!
Please enter your name here