ಬೆಂಗಳೂರು: ಗೆಳತಿ ನೋಡಲು ಬೆಂಗಳೂರಿಗೆ ಬಂದು ನಕ್ಸಲ್ವೊಬ್ಬ ಲಾಕ್ ಆಗಿರುವ ಘಟನೆ ನಡೆದಿದೆ. ಹರಿಯಾಣ ಮೂಲದ ಅನಿರುದ್ದ್ ಬಂಧಿತ ನಕ್ಸಲ್ ಆಗಿದ್ದು, ಸಿಪಿಐ ಮಾವೋವಾದಿಗಳ ಪರವಾಗಿ ಕೆಲಸ ಮಾಡುತ್ತಿದ್ದ ಆರೋಪಿಯನ್ನು ಸಿಸಿಬಿಯ ಎಟಿಸಿಯಿಂದ ಈತನನ್ನು ಬಂಧಿಸಲಾಗಿದೆ.
ಅನಿರುದ್ದ್ ರಾಜನ್ ಗೆಳತಿಯನ್ನು ನೋಡಲು 3-4 ದಿನದ ಹಿಂದೆ ಬೆಂಗಳೂರಿಗೆ ಬಂದಿದ್ದನು. ಅನಿರುದ್ದ್ ರಾಜನ್ ಗುರುವಾರ ಬೆಳಗ್ಗೆ 8 ಗಂಟೆಗೆ ಚೆನ್ನೈಗೆ ಹೋಗಲು ಕೆಎಸ್ಆರ್ಟಿಸಿ ಬಸ್ ನಿಲ್ದಾಣಕ್ಕೆ ಬಂದಿದ್ದನು. ಈ ವೇಳೆ ಆತನ ಮೇಲೆ ನಿಗಾ ಇಟ್ಟಿದ್ದ ಎಟಿಸಿ ತಂಡ ಬಂಧಿಸಿದೆ.
ತನಿಖೆ ವೇಳೆ, ಅನಿರುದ್ದ್ ರಾಜನ್ ಹಣ ಸಂಗ್ರಹ, ಗುಪ್ತ ಸಭೆಗಳನ್ನು ನಡೆಸಿರುವುದು ಪತ್ತೆಯಾಗಿದೆ. ನಕ್ಸಲ್ ಅನಿರುದ್ದ್, ವಿಕಾಸ್ ಘಾಡ್ಗೆ ಎಂಬ ಹೆಸರಿನಲ್ಲಿ ನಕಲಿ ಆಧಾರ್ ಕಾರ್ಡ್ ಹೊಂದಿದ್ದಾನೆ. ಆರೋಪಿ ಅನಿರುದ್ದ್ ರಾಜನ್ನಿಂದ 2 ಬ್ಯಾಗ್, ಪೆನ್ಡ್ರೈವ್ಗಳು, ಟ್ಯಾಬ್ ವಶಕ್ಕೆ ಪಡೆಯಲಾಗಿದೆ. ಅನಿರುದ್ದ ರಾಜನ್ ವಿರುದ್ಧ ಯುಎಪಿಎ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ. ಸದ್ಯ ಆರೋಪಿಯನ್ನ ಕಸ್ಟಡಿಗೆ ಪಡೆದು ಹೆಚ್ಚಿನ ವಿಚಾರಣೆ ನಡೆಸಲಾಗುತ್ತಿದೆ.