HomeGadag Newsಬಸ್ ನಿಲುಗಡೆಗೆ ಆಗ್ರಹಿಸಿ ಮನವಿ

ಬಸ್ ನಿಲುಗಡೆಗೆ ಆಗ್ರಹಿಸಿ ಮನವಿ

For Dai;y Updates Join Our whatsapp Group

ವಿಜಯಸಾಕ್ಷಿ ಸುದ್ದಿ, ಹರಪನಹಳ್ಳಿ : ವಿದ್ಯಾರ್ಥಿಗಳಿಗೆ, ಹಿರಿಯ ನಾಗರಿಕರಿಗೆ, ಗರ್ಭಿಣಿಯರಿಗೆ ತೊಂದರೆಯಾಗುತ್ತಿದ್ದು, ದಾವಣಗೆರೆ ಮಾರ್ಗವಾಗಿ ಚಲಿಸುತ್ತಿರುವ ಬಸ್‌ಗಳನ್ನು ನಿಲುಗಡೆ ಮಾಡಬೇಕು ಎಂದು ಉಪನ್ಯಾಸಕ ಕೊಟ್ರೇಶ್ ಆಗ್ರಹಿಸಿದರು.

ತಾಲೂಕಿನ ಜಿಟ್ಟನಕಟ್ಟಿ ಗ್ರಾಮದಲ್ಲಿ ಬುಧವಾರ ಕರವೇ ಹಾಗೂ ತಲುವಾಗಲು, ಗುಂಡಗತ್ತಿ, ಬಾಲೇನಹಳ್ಳಿ ಗ್ರಾಮಸ್ಥರ ಸಹಯೋಗದೊಂದಿಗೆ ದಾವಣಗೆರೆ ಮಾರ್ಗವಾಗಿ ಚಲಿಸುತ್ತಿರುವ ತಡೆರಹಿತ ವಾಹನಗಳನ್ನು ನಿಲುಗಡೆ ಮಾಡಬೇಕು ಎಂದು ಆಗ್ರಹಿಸಿ ಸಾರಿಗೆ ವ್ಯವಸ್ಥಾಪಕಿ ಮಂಜುಳ ಅವರಿಗೆ ಮನವಿ ಸಲ್ಲಿಸಿ ಮಾತನಾಡಿದರು.

ಬಸ್ ನಿಲುಗಡೆ ಕೋರಿ ಹಲವಾರು ಬಾರಿ ಸಂಬಂಧಿಸಿದ ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿದೆ. ಅಧಿಕಾರಿಗಳ ನಿರ್ಲಕ್ಷ್ಯದಿಂದ ಗ್ರಾಮಸ್ಥರು, ವಿದ್ಯಾರ್ಥಿಗಳು ತೊಂದರೆಯನ್ನು ಅನುಭವಿಸಬೇಕಾಗಿದೆ. ಕೂಡಲೇ ಬಸ್ ನಿಲುಗಡೆ ಮಾಡಬೇಕು ಎಂದು ಕರವೇ ತಾಲೂಕು ಅಧ್ಯಕ್ಷ ಗಿರಜ್ಜಿ ನಾಗರಾಜ ಆಗ್ರಹಿಸಿದರು.

ಮನವಿ ಸ್ವೀಕರಿಸಿ ಮಾತನಾಡಿದ ಸಾರಿಗೆ ವ್ಯವಸ್ಥಾಪಕಿ ಮಂಜುಳ, ಸೋಮವಾರದಿಂದ ಬಸ್ ನಿಲುಗಡೆ ಮಾಡುವ ವ್ಯವಸ್ಥೆ ಮಾಡುತ್ತೇವೆ ಎಂದು ಭರವಸೆ ನೀಡಿದರು. ಅರಸೀಕೆರೆ ಠಾಣೆಯ ಪಿಎಸ್‌ಐ ಕೆ. ರಂಗಯ್ಯ, ಜಾತಪ್ಪ, ಬಿ. ಬಸವರಾಜ, ಹೇಮಂತ, ವಾಗೀಶ, ಕೊಟ್ರೇಶ್, ಪರಮೇಶಪ್ಪ, ಬಣಕಾರ ಬಸವರಾಜ, ಟಿ.ಎಂ. ರುದ್ರಯ್ಯ, ಬಿ. ಲೋಹಿತಪ್ಪ, ಮುಖ್ಯ ಶಿಕ್ಷಕ ತಿರುಪತಿ, ದರ್ಶನ್, ಸಿದ್ದೇಶ್ ಹಾಗೂ ಗ್ರಾಮಸ್ಥರು ಇದ್ದರು.

LEAVE A REPLY

Please enter your comment!
Please enter your name here

E-Paper

E-paper

Must Read

spot_img