ಕಲಬುರಗಿ:- ಗುಂಡಿಕ್ಕಿ ಗ್ರಾಮ ಪಂಚಾಯತಿ ಮಾಜಿ ಸದಸ್ಯನ ಬರ್ಬರ ಹತ್ಯೆ ನಡೆದಿರುವ ಘಟನೆ ಕಲಬುರಗಿ ಜಿಲ್ಲೆಯ ಆಳಂದ ತಾಲ್ಲೂಕಿನ ವಾಗ್ದಾರಿ ರಸ್ತೆಯ ಖಾನಾಪುರ ಬಳಿ ಜರುಗಿದೆ.
50 ವರ್ಷದ ವಿಶ್ವನಾಥ್ ಜಮಾದಾರ ಕೊಲೆಯಾದ ಮಾಜಿ ಗ್ರಾಂ ಸದಸ್ಯ ಎನ್ನಲಾಗಿದೆ. ವಿಶ್ವನಾಥದ ಜಮಾದಾರ್ ಅವರು, ಪಡುಸಾವಳಿಯಿಂದ ಆಳಂದ ಪಟ್ಟಣಕ್ಕೆ ಬೈಕ್ ನಲ್ಲಿ ಬರ್ತಿದ್ದರು. ಈ ವೇಳೆ ಬೈಕ್ ನಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು ಮೂರು ಬಾರಿ ಫೈರಿಂಗ್ ಮಾಡಿ ಕೊಲೆ ಮಾಡಿದ್ದಾರೆ.
ಸ್ಥಳಕ್ಕೆ ಕಲಬುರಗಿ ಎಸ್ ಪಿ ಅಡ್ಡೂರು ಶ್ರೀನಿವಾಸಲು ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ. ಘಟನೆ ಸಂಬಂಧ ಆಳಂದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.



