ವಿಜಯಸಾಕ್ಷಿ ಸುದ್ದಿ, ಗದಗ : ಶಾಲಾ ಶಿಕ್ಷಣ ಇಲಾಖೆ (ಪದವಿಪೂರ್ವ) ಗದಗ, ಕೆ.ಎಚ್. ಪಾಟೀಲ ಸೆಂಟರ್ ಫಾರ್ ಹ್ಯೂಮನ್ ಎಕ್ಸಲೆನ್ಸ್, ಸ್ವಾಮಿ ವಿವೇಕಾನಂದ ಪಿಯು ವಿಜ್ಞಾನ ಕಾಲೇಜು ಹುಲಕೋಟಿ ಇವರುಗಳ ಸಂಯುಕ್ತ ಆಶ್ರಯದಲ್ಲಿ ಗದಗ ಜಿಲ್ಲಾ ಮಟ್ಟದ ಕ್ರೀಡಾಕೂಟದಲ್ಲಿ ಭಾಗವಹಿಸಿದ ನಗರದ ಮನೋರಮಾ ಕಾಲೇಜಿನ ಪ್ರಥಮ ಪಿಯುಸಿ ವಿದ್ಯಾರ್ಥಿ ಕಿರಣಕುಮಾರ ಕೊಟ್ಟೂರಶೆಟ್ಟರ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾನೆ.
ಮಹಾವಿದ್ಯಾಲಯಕ್ಕೆ ಕೀರ್ತಿ ತಂದ ವಿದ್ಯಾರ್ಥಿಯ ಸಾಧನೆಯನ್ನು ಸಂಸ್ಥೆಯ ಚೇರಮನ್ ಎನ್.ಎಮ್. ಕುಡತರಕರ, ಪ್ರಾಚಾರ್ಯ ಬಿ.ಎಸ್. ಹಿರೇಮಠ, ಸಂಸ್ಥೆಯ ಕಾರ್ಯದರ್ಶಿ ಮಂಜುನಾಥ ಕುಡತರಕರ, ಆಡಳಿತಾಧಿಕಾರಿ ಕಿಶೋರ ಮುದಗಲ್ಲ, ಸಂಸ್ಥೆಯ ನಿರ್ದೇಶಕರಾದ ಸಂಜಯ ಕುಡತರಕರ, ಚೇತನ ಕುಡತರಕರ, ಸಂಯೋಜಕರಾದ ಪ್ರೊ. ಶಾಹಿದಾ ಶಿರಹಟ್ಟಿ, ಬಿಸಿಎ ವಿಭಾಗದ ಸಂಯೋಜಕರಾದ ಸವಿತಾ ಪೂಜಾರ, ಬಿಕಾಂ ವಿಬಾಗದ ಸಂಯೋಜಕರಾದ ಅಲ್ವಿನಾ ಡಿ, ಬಿಬಿಎ ವಿಭಾಗದ ಸಂಯೋಜಕರಾದ ಚೈತ್ರಾ ಡಿ, ದೈಹಿಕ ನಿರ್ದೇಶಕರಾದ ಖಯುಮ ಎಂ.ನವಲೂರ, ಆಫೀಸ್ ಸುಪರಿಡೆಂಟ್ ಉಮಾ ದಿನ್ನಿ ಹಾಗೂ ಸಿಬ್ಬಂದಿ ವರ್ಗದವರು ಶ್ಲಾಘಿಸಿದ್ದಾರೆ.



