• About
  • Advertise
  • Privacy & Policy
  • Contact
Thursday, October 22, 2026
Vijaya Sakshi News
Advertisement
  • Home
  • Gadag News
  • Dharwad
  • Crime News
  • Entertainment
  • Districts
    • Bagalkot
    • Belgaum
    • Bellary
    • Bengaluru City
    • Bengaluru News
    • Bengaluru Rural
    • Bidar
    • Chamarajanagar
    • Chikkaballapur
    • Chikkamagaluru
    • Chitradurga
    • Davanagere
    • Hassan
    • Haveri
    • hubballi
    • Kalaburagi
    • Kodagu
No Result
View All Result
  • Home
  • Gadag News
  • Dharwad
  • Crime News
  • Entertainment
  • Districts
    • Bagalkot
    • Belgaum
    • Bellary
    • Bengaluru City
    • Bengaluru News
    • Bengaluru Rural
    • Bidar
    • Chamarajanagar
    • Chikkaballapur
    • Chikkamagaluru
    • Chitradurga
    • Davanagere
    • Hassan
    • Haveri
    • hubballi
    • Kalaburagi
    • Kodagu
No Result
View All Result
Vijaya Sakshi News
  • Home
  • Gadag News
  • Karnataka News
  • Crime News
  • Politics News
  • Bengaluru News
  • Entertainment
  • Life Style
  • Sports News
Home Karnataka News

ಮುಡಾ ಹಗರಣ: ಅಖಾಡಕ್ಕಿಳಿದ ಸಿದ್ದು ಹೆಂಡ್ತಿ, ಮೊದಲ ಬಾರಿಗೆ ಬಹಿರಂಗ ಪತ್ರ ಬರೆದ ಪಾರ್ವತಿ!

Vijaya Sakshi by Vijaya Sakshi
September 30, 2024
in Karnataka News
0
ಮುಡಾ ಹಗರಣ: ಅಖಾಡಕ್ಕಿಳಿದ ಸಿದ್ದು ಹೆಂಡ್ತಿ, ಮೊದಲ ಬಾರಿಗೆ ಬಹಿರಂಗ ಪತ್ರ ಬರೆದ ಪಾರ್ವತಿ!
0
SHARES
0
VIEWS
Share on FacebookShare on Twitter

ಬೆಂಗಳೂರು:- ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಮೊದಲ ಬಾರಿಗೆ ಸಿದ್ದರಾಮಯ್ಯ ಪತ್ನಿ ಪಾರ್ವತಿ ಅವರು ಮೊದಲ ಬಾರಿಗೆ ಬಹಿರಂಗ ಪತ್ರ ಬರೆದಿದ್ದಾರೆ.

ಮುಡಾ ಪ್ರಕರಣದಲ್ಲಿ ಸಿಎಂ ಸಿದ್ದರಾಮಯ್ಯ ಅವರ ವಿರುದ್ಧ FIR ದಾಖಲಾದ ಮೇಲೆ ಮೈಸೂರು ಲೋಕಾಯುಕ್ತ ತನಿಖೆ ನಡೆಸಲಾಗುತ್ತಿದೆ. ಈ ಬೆಳವಣಿಗೆಯ ಮಧ್ಯೆ ಸಿಎಂ ಪತ್ನಿ ಪಾರ್ವತಿ ಅವರು ಬಹಿರಂಗ ಪತ್ರ ಬರೆದು ಮುಡಾಗೆ ಸಂಬಂಧಿಸಿದ ಎಲ್ಲಾ ಆರೋಪಗಳ ಬಗ್ಗೆ ಸಮಗ್ರ ತನಿಖೆ ನಡೆಸುವಂತೆ ಆಗ್ರಹಿಸಿದ್ದಾರೆ.

ನನ್ನ ಪತಿಯಾಗಿರುವ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ತಮ್ಮ 40 ವರ್ಷದ ಸುದೀರ್ಘ ರಾಜಕಾರಣದಲ್ಲಿ ಯಾವುದೇ ಸಣ್ಣ ಕಳಂಕವೂ ಅಂಟಿಕೊಳ್ಳದಂತಹ ನೈತಿಕತೆಯನ್ನು ವ್ರತದಂತೆ ಪಾಲಿಸಿಕೊಂಡು ಬಂದವರು.

ರಾಜಕೀಯವೂ ಸೇರಿದಂತೆ ಸಾರ್ವಜನಿಕ ಜೀವನದಲ್ಲಿ ಕಾಣಿಸಿಕೊಂಡು ಅವರಿಗೆ ಮುಜುಗರ ಉಂಟು ಮಾಡಬಾರದು ಎಂಬ ನಿರ್ಧಾರಕ್ಕೆ ಬದ್ಧಳಾಗಿ ಬದುಕಿದವಳು. ನಾನೆಂದೂ ಮನೆ, ಆಸ್ತಿ, ಚಿನ್ನ, ಸಂಪತ್ತನ್ನು ಬಯಸಿದವಳಲ್ಲ.

ಯಾವುದೇ ಕಾರಣಕ್ಕೂ ನನ್ನಿಂದ ಅವರ ರಾಜಕೀಯ ಜೀವನಕ್ಕೆ ಒಂದು ಸಣ್ಣ ಹನಿಯಷ್ಟೂ ಕಳಂಕ ತಟ್ಟಬಾರದೆಂದು ಎಚ್ಚರಿಕೆಯಿಂದ ನಡೆದುಕೊಂಡವಳು. ನನ್ನ ಪತಿಗೆ ರಾಜ್ಯದ ಜನತೆ ಹರಿಸುತ್ತಾ ಬಂದ ಪ್ರೀತಿ ಅಭಿಮಾನಗಳನ್ನು ದೂರದಿಂದಲೇ ಕಂಡು ಸಂತೋಷ ಮತ್ತು ಹೆಮ್ಮೆ ಪಟ್ಟವಳು.

ಹೀಗಿದ್ದರೂ ಮೈಸೂರಿನ ಮುಡಾ ನಿವೇಶನಕ್ಕೆ ಸಂಬಂಧಿಸಿದಂತೆ ಕೇಳಿಬಂದ ಆರೋಪಗಳಿಂದ ನಾನು ಘಾಸಿಗೊಂಡಿದ್ದೇನೆ. ನನ್ನ ಸ್ವಂತ ಸೋದರ ಅರಿಶಿನ – ಕುಂಕುಮದ ಭಾಗವಾಗಿ ಕೊಟ್ಟ ಜಮೀನಿನ ಬಾಬು ಪಡೆದ ನಿವೇಶನಗಳು ಇಷ್ಟೊಂದು ರಾದ್ಧಾಂತವಾಗುತ್ತದೆ.

ಇದರಿಂದ ನನ್ನ ಪತಿಯವರು ಅನ್ಯಾಯವಾಗಿ ಆರೋಪಗಳನ್ನು ಎದುರಿಸುವಂತಾಗಬಹುದು ಎನ್ನುವುದನ್ನು ನಾನು ಊಹಿಸಿದವಳೂ ಅಲ್ಲ.
ನನಗೆ ಈ ನಿವೇಶನ, ಮನೆ, ಆಸ್ತಿ, ಸಂಪತ್ತು ಯಾವುದೂ ಕೂಡ ನನ್ನ ಪತಿಯ ಗೌರವ, ಘನತೆ, ಮರ್ಯಾದೆ ಮತ್ತು ಅವರ ನೆಮ್ಮದಿಗಿಂತ ದೊಡ್ಡದಲ್ಲ. ಇಷ್ಟು ವರ್ಷಗಳ ಕಾಲ ಅಧಿಕಾರದಲ್ಲಿದ್ದ ಅವರಿಂದ ಏನನ್ನೂ ನನಗಾಗಲೀ, ನನ್ನ ಕುಟುಂಬಕ್ಕಾಗಲೀ ಬಯಸದೇ ಇದ್ದ ನನಗೆ ಈ ನಿವೇಶನಗಳು ತೃಣಕ್ಕೆ ಸಮ.

ಈ ಹಿನ್ನೆಲೆಯಲ್ಲಿ ವಿವಾದಕ್ಕೆ ಕಾರಣವಾಗಿರುವ ಮುಡಾದ 14 ನಿವೇಶನಗಳನ್ನು ವಾಪಸ್ ಮಾಡಲು ನಿರ್ಧರಿಸಿದ್ದೇನೆ. ಈ ಬಗ್ಗೆ ನನ್ನ ಪತಿಯವರ ಅಭಿಪ್ರಾಯ ಏನಿದೆ ಎನ್ನುವುದು ನನಗೆ ತಿಳಿದಿಲ್ಲ. ನನ್ನ ಮಗನ ಬಳಿಯಾಗಲಿ, ನನ್ನ ಕುಟುಂಬದ ಇತರ ಸದಸ್ಯರ ಬಳಿಯಾಗಲಿ ಇದರ ಬಗ್ಗೆ ನಾನು ಚರ್ಚಿಸಿಲ್ಲ. ಇದು ನಾನು ನನ್ನ ಆತ್ಮ ಸಾಕ್ಷಿಯ ಕರೆಗೆ ಓಗೊಟ್ಟು ಪ್ರಜ್ಞಾಪೂರ್ವಕವಾಗಿ ಕೈಗೊಂಡಿರುವ ತೀರ್ಮಾನ.

ಈ ಹಂತದಲ್ಲಿ ಇಂತಹ ನಿರ್ಧಾರಕ್ಕೆ ಏಕೆ ಬಂದಿರಿ? ಎಂದು ಯಾರಾದರೂ ಕೇಳಬಹುದು. ಆರೋಪ ಕೇಳಿ ಬಂದ ದಿನವೇ ನಾನು ಈ ನಿರ್ಧಾರ ಮಾಡಿದ್ದೆ. ಆದರೆ, ಈ ಮುಡಾ ನಿವೇಶನ ಹಂಚಿಕೆಯ ಆರೋಪವನ್ನು ರಾಜಕೀಯ ದುರುದ್ದೇಶದಿಂದ ಮಾಡಲಾಗಿದ್ದು, ಈ ಅನ್ಯಾಯದ ವಿರುದ್ಧ ಹೋರಾಡಬೇಕು. ಅವರ ಸಂಚಿಗೆ ನಾವು ಬಲಿಯಾಗಬಾರದು ಎಂದು ಕೆಲವು ಹಿತೈಷಿಗಳು ಹೇಳಿದ ಕಾರಣಕ್ಕೆ ನಿವೇಶನ ವಾಪಸು ಮಾಡಬೇಕೆಂಬ ನಿರ್ಧಾರವನ್ನು ಕೈ ಬಿಟ್ಟಿದ್ದೆ.

ನನ್ನ ಈ ನಿರ್ಧಾರ ಅಚಲವಾಗಿದ್ದು, ಈ ನಿವೇಶನಗಳನ್ನು ವಾಪಸು ನೀಡುವುದರ ಜೊತೆಗೆ ಮುಡಾಕ್ಕೆ ಸಂಬಂಧಿಸಿದ ಎಲ್ಲಾ ಆರೋಪಗಳ ಬಗ್ಗೆ ಸಮಗ್ರ ತನಿಖೆ ಮಾಡಬೇಕೆಂದು ಆಗ್ರಹಿಸುತ್ತೇನೆ. ಕೊನೆಯದಾಗಿ, ಎಲ್ಲಾ ರಾಜಕೀಯ ಪಕ್ಷದ ನಾಯಕರು ಮತ್ತು ಮಾಧ್ಯಮ ಕ್ಷೇತ್ರದ ಬಂಧುಗಳಲ್ಲಿ ನನ್ನ ವಿನಮ್ರ ವಿನಂತಿ.

ದಯವಿಟ್ಟು ರಾಜಕೀಯ ಕ್ಷೇತ್ರದಿಂದ ದೂರವಿದ್ದು, ತಮ್ಮ ಪಾಡಿಗೆ ತಾವಿರುವ ರಾಜಕೀಯ ಕುಟುಂಬದ ಹೆಣ್ಣು ಮಕ್ಕಳನ್ನು ರಾಜಕೀಯ ದ್ವೇಷ ಸಾಧನೆಗಾಗಿ ವಿವಾದದ ಕಣಕ್ಕೆ ಎಳೆದು ತಂದು ಅವರ ಘನತೆ, ಗೌರವಗಳಿಗೆ ಹಾನಿ ಮಾಡಬೇಡಿ ಎಂದು ಹೇಳಿದ್ದಾರೆ.

Tags: BangalorekannadanewsKarnatakaMuda scandalParvathisiddaramaiahVijayasakshivijayasakshinews
Previous Post

ಯತ್ನಾಳ್ ಹೇಳಿಕೆಗೆ ನಾನು ಕಾಮೆಂಟ್ ಮಾಡುವುದಿಲ್ಲ: ಶೆಟ್ಟರ್!

Next Post

ಚಿಕ್ಕಬಳ್ಳಾಪುರದ ಖಾಸಗಿ ಲಾಡ್ಜ್​​ನಲ್ಲಿ ಮಹಿಳೆ ಮೃತದೇಹ ಪತ್ತೆ!

Vijaya Sakshi

Vijaya Sakshi

Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

Next Post
ಚಿಕ್ಕಬಳ್ಳಾಪುರದ ಖಾಸಗಿ ಲಾಡ್ಜ್​​ನಲ್ಲಿ ಮಹಿಳೆ ಮೃತದೇಹ ಪತ್ತೆ!

ಚಿಕ್ಕಬಳ್ಳಾಪುರದ ಖಾಸಗಿ ಲಾಡ್ಜ್​​ನಲ್ಲಿ ಮಹಿಳೆ ಮೃತದೇಹ ಪತ್ತೆ!

Leave a Reply Cancel reply

Your email address will not be published. Required fields are marked *

Stay Connected test

  • 24k Followers
  • 99 Subscribers
  • Trending
  • Comments
  • Latest
ಕೃಷಿ ಹೊಂಡದಲ್ಲಿ ಮಹಿಳೆಯ ಶವ ಪತ್ತೆ ಪ್ರಕರಣಕ್ಕೆ ಟ್ವಿಸ್ಟ್‌: ಎರಡೂವರೆ ತಿಂಗಳ ಬಳಿಕ ಆರೋಪಿ ಅರೆಸ್ಟ್‌

ಕೃಷಿ ಹೊಂಡದಲ್ಲಿ ಮಹಿಳೆಯ ಶವ ಪತ್ತೆ ಪ್ರಕರಣಕ್ಕೆ ಟ್ವಿಸ್ಟ್‌: ಎರಡೂವರೆ ತಿಂಗಳ ಬಳಿಕ ಆರೋಪಿ ಅರೆಸ್ಟ್‌

October 21, 2026
Gadaga Breaking: 2.80 ಲಕ್ಷದ ಹಣಕ್ಕಾಗಿ ಸ್ನೇಹಿತನ ಹತ್ಯೆ? 11 ದಿನಗಳ ಬಳಿಕ ಬಯಲಾಯ್ತು ಕೊಲೆ ರಹಸ್ಯ!

Gadaga Breaking: 2.80 ಲಕ್ಷದ ಹಣಕ್ಕಾಗಿ ಸ್ನೇಹಿತನ ಹತ್ಯೆ? 11 ದಿನಗಳ ಬಳಿಕ ಬಯಲಾಯ್ತು ಕೊಲೆ ರಹಸ್ಯ!

October 21, 2026

ಸೊಲ್ಲಾಪುರದಿಂದ ಗಾಂಜಾ ಪೂರೈಕೆ, ಗದಗದಲ್ಲಿ ಮಾರಾಟ: ಗಂಗಿಮಡಿಯ ಇಬ್ಬರು ಸೇರಿ ನಾಲ್ವರ ಬಂಧನ

October 18, 2026
ಹೆತ್ತ ಮಕ್ಕಳಿಗಿಂತ ಪ್ರಿಯಕರನೇ ಮುಖ್ಯವಾಯ್ತಾ? ಅಕ್ರಮ ಸಂಬಂಧ ವಿರೋಧಿಸಿದ್ದ ಅವಳಿ ಮಕ್ಕಳ ಭೀಕರ ಹತ್ಯೆ!

ಹೆತ್ತ ಮಕ್ಕಳಿಗಿಂತ ಪ್ರಿಯಕರನೇ ಮುಖ್ಯವಾಯ್ತಾ? ಅಕ್ರಮ ಸಂಬಂಧ ವಿರೋಧಿಸಿದ್ದ ಅವಳಿ ಮಕ್ಕಳ ಭೀಕರ ಹತ್ಯೆ!

October 21, 2026
Single Post Template – Fast News

ದೇವಸ್ಥಾನದಲ್ಲಿ 3 ಕೊಲೆ: ಹುಂಡಿಗಳ್ಳರ ಅಮಾನುಷ ಕೃತ್ಯ

0
Single Post Template – Fast News

ಕೋಡಿಹಳ್ಳಿಯವರಿಗೆ ಇಷ್ಟೊಂದು ಅಜ್ಞಾನ ಇದೆ ಅಂತ ಗೊತ್ತಿರಲಿಲ್ಲ: ಬಿ.ಸಿ.ಪಾಟೀಲ

0
Single Post Template – Fast News

ಕತ್ತಲಲ್ಲಿ ಕ್ವಾರಂಟೈನ್ ಸೆಂಟರ್; ಪರದಾಡಿದ ಕೊವಿಡ್ ರೋಗಿಗಳು!

0
Single Post Template – Fast News

ನಗರಸಭೆ ಆಯುಕ್ತರ ಕುರ್ಚಿ ಮಾರಾಟವಾಯ್ತೆ?
ಉಸ್ತುವಾರಿ ಸಚಿವರು ತಮ್ಮ ಹಠ ಸಾಧಿಸಿಯೇ ಬಿಟ್ಟರೆ?

0
ನಾಳೆ ಅಮಿತ್ ಶಾ ಭೇಟಿಗೆ ಸಮಯ ನಿಗದಿ: ಕುತೂಹಲ ಕೆರಳಿಸಿದ ಆರ್ ಅಶೋಕ್ ನಡೆ!

ನಾಳೆ ಅಮಿತ್ ಶಾ ಭೇಟಿಗೆ ಸಮಯ ನಿಗದಿ: ಕುತೂಹಲ ಕೆರಳಿಸಿದ ಆರ್ ಅಶೋಕ್ ನಡೆ!

October 22, 2026
ಪ್ಯಾರಾ ಏಷ್ಯನ್ ಗೇಮ್ಸ್‌ನಲ್ಲಿ ಬೆಳಗಾವಿ ಯುವಕನಿಗೆ ಕಂಚಿನ ಪದಕ!

ಪ್ಯಾರಾ ಏಷ್ಯನ್ ಗೇಮ್ಸ್‌ನಲ್ಲಿ ಬೆಳಗಾವಿ ಯುವಕನಿಗೆ ಕಂಚಿನ ಪದಕ!

October 22, 2026
ಇನ್‌ಸ್ಟಾಗ್ರಾಮ್‌ಗೆ ಸೋನಿಯಾ ಗಾಂಧಿ ಎಂಟ್ರಿ: ಮೊದಲ ಪೋಸ್ಟ್‌ನಲ್ಲೇ ಆತ್ಮಚರಿತ್ರೆಯ ಕವರ್ ರಿವೀಲ್!

ಇನ್‌ಸ್ಟಾಗ್ರಾಮ್‌ಗೆ ಸೋನಿಯಾ ಗಾಂಧಿ ಎಂಟ್ರಿ: ಮೊದಲ ಪೋಸ್ಟ್‌ನಲ್ಲೇ ಆತ್ಮಚರಿತ್ರೆಯ ಕವರ್ ರಿವೀಲ್!

October 22, 2026
ದಸರಾ ಸಂಭ್ರಮದ ನಡುವೆ ರಕ್ತಪಾತ: ಅಂಬಾರಿ ನೋಡಲು ಬಂದಿದ್ದ ಯಲ್ಲಪ್ಪನ ಭೀಕರ ಕೊಲೆ!

ದಸರಾ ಸಂಭ್ರಮದ ನಡುವೆ ರಕ್ತಪಾತ: ಅಂಬಾರಿ ನೋಡಲು ಬಂದಿದ್ದ ಯಲ್ಲಪ್ಪನ ಭೀಕರ ಕೊಲೆ!

October 22, 2026

Recent News

We bring you the best Premium WordPress Themes that perfect for news, magazine, personal blog, etc. Check our landing page for details.

Browse by Category

Recent News

ನಾಳೆ ಅಮಿತ್ ಶಾ ಭೇಟಿಗೆ ಸಮಯ ನಿಗದಿ: ಕುತೂಹಲ ಕೆರಳಿಸಿದ ಆರ್ ಅಶೋಕ್ ನಡೆ!

ನಾಳೆ ಅಮಿತ್ ಶಾ ಭೇಟಿಗೆ ಸಮಯ ನಿಗದಿ: ಕುತೂಹಲ ಕೆರಳಿಸಿದ ಆರ್ ಅಶೋಕ್ ನಡೆ!

October 22, 2026
ಪ್ಯಾರಾ ಏಷ್ಯನ್ ಗೇಮ್ಸ್‌ನಲ್ಲಿ ಬೆಳಗಾವಿ ಯುವಕನಿಗೆ ಕಂಚಿನ ಪದಕ!

ಪ್ಯಾರಾ ಏಷ್ಯನ್ ಗೇಮ್ಸ್‌ನಲ್ಲಿ ಬೆಳಗಾವಿ ಯುವಕನಿಗೆ ಕಂಚಿನ ಪದಕ!

October 22, 2026
  • About
  • Advertise
  • Privacy & Policy
  • Contact

Vijaya Sakshi 2026 CREATED BY Kalahamsa Infotech. PREMIUM WEBSITE SOLUTIONS.

  • E Paper
  • WhatsApp Group
  • E Paper
  • E Paper
error: Content is protected !!
Join WhatsApp Read E-Paper
f 𝕏 WhatsApp Copy Link