Homecinemaಅದ್ದೂರಿಯಾಗಿ ನೆರವೇರಿತು ಮಂಜು ಪಾವಗಡ ನಿಶ್ಚಿತಾರ್ಥ: ಮದುವೆ ಯಾವಾಗ!?

ಅದ್ದೂರಿಯಾಗಿ ನೆರವೇರಿತು ಮಂಜು ಪಾವಗಡ ನಿಶ್ಚಿತಾರ್ಥ: ಮದುವೆ ಯಾವಾಗ!?

For Dai;y Updates Join Our whatsapp Group

ಬಿಗ್ ಬಾಸ್ 8ರ ವಿನ್ನರ್ ಮಂಜು ಪಾವಗಡ ಅವರ ಬಾಳಲ್ಲಿ ಹುಡುಗಿಯ ಆಗಮನ ಆಗಿದೆ. ಮಂಜು ಹಾಗೂ ಆ ಹುಡುಗಿಯ ನಿಶ್ಚಿತಾರ್ಥ ಕೂಡ ನೆರವೇರಿದೆ.

ಸೈಲೆಂಟ್ ಆಗಿ ಈ ಕಾರ್ಯಗಳು ನೆರವೇರಿವೆ. ಸೋಶಿಯಲ್ ಮೀಡಿಯಾದಲ್ಲಿ ಈ ಫೋಟೋಗಳು ಸಾಕಷ್ಟು ವೈರಲ್ ಆಗಿದೆ. ಅವರಿಗೆ ಎಲ್ಲರೂ ಶುಭಾಶಯ ಕೋರುತ್ತಿದ್ದಾರೆ.

ನಟ ಮಂಜು ಪಾವಗಡ ಅವರು ನಂದಿನಿ ಎಂಬುವವರ ಜೊತೆಗೆ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ. ಅದರ ಪೂರ್ವಭಾವಿಯಾಗಿ ಈಗ ಎಂಗೇಜ್‌ಮೆಂಟ್ ನಡೆದಿದೆ. ನಂದಿನಿ ಬೆಂಗಳೂರಿನಲ್ಲಿ ಕೆಲಸ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಗುರು-ಹಿರಿಯರು ಒಪ್ಪಿಗೆ ಮೇರೆಗೆ ಈ ಮದುವೆ ಮಾತುಕತೆ ನಡೆದಿದೆಯಂತೆ. ಸದ್ಯ ಮಂಜು ಪಾವಗಡ ಮತ್ತು ನಂದಿನಿ ಅವರ ನಿಶ್ಚಿತಾರ್ಥ ಸಮಾರಂಭ ನಡೆದಿದ್ದು, ಸಾಮಾಜಿಕ ಜಾಲತಾಣದಲ್ಲಿ ಅಭಿಮಾನಿಗಳು, ಆಪ್ತರು, ಹಿತೈಷಿಗಳು ಶುಭ ಹಾರೈಸಿದ್ದಾರೆ.

ಮಂಜು ಪಾವಗಡ ಮತ್ತು ನಂದಿನಿ ಅವರ ಮದುವೆಯು ಪಾವಗಡದಲ್ಲಿ ನಡೆಯಲಿದೆ. ನವೆಂಬರ್ 13 ಮತ್ತು 14ರಂದು ಈ ಕಲ್ಯಾಣ ಜರುಗಲಿದೆ ಎಂದು ಆಪ್ತಮೂಲಗಳು ಮಾಹಿತಿ ಹಂಚಿಕೊಂಡಿವೆ. ಈಚೆಗಷ್ಟೇ ಬೆಂಗಳೂರಿನಲ್ಲಿ ಹೊಸ ಮನೆಯೊಂದರ ಗೃಹಪ್ರವೇಶವನ್ನು ಮಂಜು ಮಾಡಿದ್ದರು. ಇದೀಗ ಮತ್ತೊಂದು ಶುಭ ಸುದ್ದಿ ಅವರ ಕಡೆಯಿಂದ ಸಿಕ್ಕಿದೆ.

Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img