ದೋಣಿ ಮಗುಚಿ ದುರಂತ: ವೈರಲ್ ವಿಡಿಯೋ ಬಗ್ಗೆ ಗೋವಾ ಪೊಲೀಸರು ಹೇಳಿದ್ದೇನು!?

0
Spread the love

ಗೋವಾ:- ಇಂದು ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ಒಂದು ಭಾರೀ ವೈರಲ್ ಆಗಿತ್ತು. ದೋಣಿ ಮಗುಚಿ ಪ್ರಯಾಣಿಕರೆಲ್ಲರೂ ಸಮುದ್ರ ಪಾಲಾಗುತ್ತಿರುವ ದೃಶ್ಯ ನಿಜಕ್ಕೂ ಮನಕಲಕುವಂತಿತ್ತು. ಅಲ್ಲದೇ ಈ ಘಟನೆ ಗೋವಾದಲ್ಲಿ ನಡೆದಿದೆ ಎನ್ನಲಾಗಿತ್ತು.

Advertisement

https://youtu.be/f_bjbkmjmeg

ಇದೀಗ ಘಟನೆಗೆ ಸಂಬಂಧಿಸಿದಂತೆ ಗೋವಾ ಪೊಲೀಸರೇ ಘಟನೆ ಬಗ್ಗೆ ಸ್ಪಷ್ಟನೆ ಕೊಟ್ಟಿದ್ದಾರೆ.

ಗೋವಾ ತೀರದಲ್ಲಿ ದೋಣಿ ಮಗುಚಿ ದುರಂತ ಸಂಭವಿಸಿದೆ ಎಂಬ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ವೀಡಿಯೊವನ್ನು ಪರಿಶೀಲಿಸಿದಾಗ ಮತ್ತು ಲಭ್ಯವಿರುವ ಆನ್‌ಲೈನ್ ಮಾಹಿತಿಯನ್ನು ಹುಡುಕಿದಾಗ, ವಿಡಿಯೋವು ಆಫ್ರಿಕಾದ ಕಾಂಗೋದ ಗೋಮಾದಲ್ಲಿ ನಡೆದ ಘಟನೆಗೆ ಸಂಬಂಧಿಸಿದೆ ಎಂದು ಕಂಡುಬಂದಿದೆ.

ಪರಿಶೀಲಿಸದ ಸುದ್ದಿಗಳನ್ನು ಹಂಚಿಕೊಳ್ಳುವುದನ್ನು ತಡೆಯಲು ಮತ್ತು ನಿಖರವಾದ ಮಾಹಿತಿಗಾಗಿ ಅಧಿಕೃತ ಮೂಲಗಳನ್ನು ಅವಲಂಬಿಸುವಂತೆ ನಾವು ಪ್ರತಿಯೊಬ್ಬರನ್ನು ಒತ್ತಾಯಿಸುತ್ತೇವೆ ಎಂದು ಗೋವಾ ಪೊಲೀಸರು ಮನವಿ ಮಾಡಿದ್ದಾರೆ.


Spread the love

LEAVE A REPLY

Please enter your comment!
Please enter your name here