ಕ್ಯಾನ್ಸರ್ ರೋಗಿಗಳಿಗೆ ಒಂದು ಆರೋಗ್ಯಕರ ಮತ್ತು ಪೌಷ್ಟಿಕ ಆಹಾರ ತುಂಬಾ ಮುಖ್ಯ ಮತ್ತು ಅದು ಅವರ ಚೇತರಿಕೆಯ ವಿಷಯದಲ್ಲಿ ಬಹುದೊಡ್ಡ ಪಾತ್ರವನ್ನು ವಹಿಸುತ್ತದೆ. ಇವುಗಳಲ್ಲಿ ಟೊಮೆಟೊ ಎಲ್ಲಾ ರೀತಿಯ ಅಡುಗೆಗೂ ತನ್ನ ರುಚಿಯನ್ನು ನೀಡುವುದಲ್ಲದೆ, ಅನೇಕ ಆರೋಗ್ಯ ಪ್ರಯೋಜನಗಳನ್ನು ಸಹ ನೀಡುತ್ತದೆ. ನಮಗೆ ಈ ತರಕಾರಿ ಬಗ್ಗೆ ಸರಿಯಾಗಿ ತಿಳಿದಿಲ್ಲದಿರಬಹುದು ಆದರೆ ಇದರಲ್ಲಿರುವ ವಿವಿಧ ರೀತಿಯ ಪೋಷಕಾಂಶಗಳು ನಮ್ಮ ಆರೋಗ್ಯವನ್ನು ಕಾಪಾಡಲು ಸಹಾಯ ಮಾಡುತ್ತದೆ. ಅಧಿಕ ರಕ್ತದೊತ್ತಡದ ಅಪಾಯ ಇರುವವರು ಕೂಡ ಈ ತರಕಾರಿಯನ್ನು ಯಾವುದೇ ರೀತಿಯ ಭಯವಿಲ್ಲದೆಯೇ ಸೇವನೆ ಮಾಡಬಹುದು.
ಚರ್ಮಕ್ಕೆ ಒಳ್ಳೆಯದು:
ದೈನಂದಿನ ಆಹಾರದಲ್ಲಿಈ ತರಕಾರಿಯನ್ನು ನಮ್ಮ ಆಹಾರದಲ್ಲಿ ಸೇರಿಸುವ ಮೂಲಕ ಹೃದಯವನ್ನು ಆರೋಗ್ಯಕರವಾಗಿ ಕಾಪಾಡಿಕೊಳ್ಳಬಹುದು. ಟೊಮೆಟೊ ಸೇವನೆಯು ಚರ್ಮಕ್ಕೆ ಒಳ್ಳೆಯದು. ಇದರಲ್ಲಿ ಕಡಿಮೆ ಕ್ಯಾಲೊರಿಗಳಿದ್ದು ಹೆಚ್ಚಿನ ನೀರಿನ ಅಂಶವಿರುವುದರಿಂದ ದೇಹಕ್ಕೆ ಉತ್ತಮ ಆಹಾರವಾಗಿದೆ ಎಂದು ತಜ್ಞರು ಕೂಡ ಹೇಳುತ್ತಾರೆ. ನಿಯಮಿತವಾಗಿ ಟೊಮೆಟೊ ಸೇವನೆ ಮಾಡಿದರೆ ಇದರಲ್ಲಿ ಅಡಕವಾಗಿರುವ ಫೈಬರ್ ಅಂಶವು ನಿಮಗೆ ದೀರ್ಘಕಾಲದ ವರೆಗೆ ಹಸಿವಾಗಲು ಬಿಡುವುದಿಲ್ಲ. ಹಾಗಾಗಿ ಆರೋಗ್ಯಕ್ಕೆ ಹಾನಿಕಾರಕವಾಗಿರುವ ತಿಂಡಿಯನ್ನು ತಿನ್ನಲು ಅವಕಾಶವಿರುವುದಿಲ್ಲ.
ಕ್ಯಾನ್ಸರ್ ಗಳ ಅಪಾಯವನ್ನು ಕಡಿಮೆ ಮಾಡುತ್ತೆ:
ಈ ತರಕಾರಿಯಲ್ಲಿರುವ ಲೈಕೋಪೀನ್, ಪೊಟ್ಯಾಸಿಯಮ್ ಮತ್ತು ವಿಟಮಿನ್ ಸಿ, ಬಿಪಿಯನ್ನು ನಿಯಂತ್ರಿಸಲು ಮತ್ತು ಅಪಧಮನಿಯ ಕಾರ್ಯವನ್ನು ಸುಧಾರಿಸಲು ಉಪಯುಕ್ತವಾಗಿವೆ. ಇದರಲ್ಲಿರುವ ‘ಲೈಕೋಪೀನ್’ ಕೆಲವು ರೀತಿಯ ಕ್ಯಾನ್ಸರ್ ಗಳ ಅಪಾಯವನ್ನು ಕಡಿಮೆ ಮಾಡುವ ಗುಣಲಕ್ಷಣಗಳನ್ನು ಹೊಂದಿದೆ. ವಿಶೇಷವಾಗಿ, ಇದು ಪ್ರಾಸ್ಟೇಟ್ ಕ್ಯಾನ್ಸರ್ ಅಪಾಯವನ್ನು ಕಡಿಮೆ ಮಾಡುವಲ್ಲಿ ಪರಿಣಾಮಕಾರಿಯಾಗಿದೆ. ಅದಲ್ಲದೆ ಇದರಲ್ಲಿ ಬೀಟಾ-ಕ್ಯಾರೋಟಿನ್, ಪ್ರಾಸ್ಟೇಟ್ ಕ್ಯಾನ್ಸರ್ ಗೆಡ್ಡೆ ಬೆಳೆಯುವುದನ್ನು ತಡೆಯುತ್ತದೆ. ನಿಯಮಿತವಾಗಿ ಟೊಮೆಟೊ ಸೇವಿಸುವುದರಿಂದ ನಿಮ್ಮ ಚರ್ಮ ಮತ್ತು ಕೂದಲು ಆರೋಗ್ಯವಾಗಿರುತ್ತದೆ. ಚರ್ಮವನ್ನು ರಕ್ಷಿಸಲು ಟೊಮೆಟೊ ತುಂಬಾ ಉಪಯುಕ್ತವಾಗಿದೆ.