HomeGadag Newsಗದಗ ಜಿಲ್ಲಾ ವಾಣಿಜ್ಯೋದ್ಯಮ ಸಂಸ್ಥೆ ನೂತನ ಪದಾಧಿಕಾರಿಗಳ ಆಯ್ಕೆ

ಗದಗ ಜಿಲ್ಲಾ ವಾಣಿಜ್ಯೋದ್ಯಮ ಸಂಸ್ಥೆ ನೂತನ ಪದಾಧಿಕಾರಿಗಳ ಆಯ್ಕೆ

For Dai;y Updates Join Our whatsapp Group

ವಿಜಯಸಾಕ್ಷಿ ಸುದ್ದಿ, ಗದಗ : ಗದಗ ಜಿಲ್ಲಾ ವಾಣಿಜ್ಯೋದ್ಯಮ ಸಂಸ್ಥೆಯಲ್ಲಿ ಜರುಗಿದ ಆಡಳಿತ ಮಂಡಳಿಯ ಸಭೆಯಲ್ಲಿ 2024-2025ನೇ ಸಾಲಿಗೆ ನೂತನ ಪದಾಧಿಕಾರಿಗಳನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು.

ಸಂಸ್ಥೆಯ ಎಲ್ಲಾ ಮಾಜಿ ಅಧ್ಯಕ್ಷರುಗಳ ಪರವಾಗಿ ಮೋಹನ ತೋಟಪ್ಪ ಕೋಟಿ ಸಭೆಯಲ್ಲಿ ಆಯ್ಕೆಯನ್ನು ಪ್ರಸ್ತಾಪಿಸಿದರು. ನಂತರ ಆಡಳಿತ ಮಂಡಳಿ ಸದಸ್ಯರು ಸರ್ವಾನುಮತದಿಂದ ಒಪ್ಪಿಗೆ ಸೂಚಿಸಿದರು. ನೂತನ ಅಧ್ಯಕ್ಷರಾಗಿ ತಾತನಗೌಡ ಎಸ್.ಪಾಟೀಲ, ಪ್ರಥಮ ಉಪಾಧ್ಯಕ್ಷರಾಗಿ ಶರಣಬಸಪ್ಪ ಎಸ್.ಗುಡಿಮನಿ, ದ್ವಿತೀಯ ಉಪಾಧ್ಯಕ್ಷರಾಗಿ ವ್ಹಿ.ಎಸ್. ಮಾಟದಿನ್ನಿ, ತೃತೀಯ ಉಪಾಧ್ಯಕ್ಷರಾಗಿ ಎಸ್.ಆರ್. ನಾಲತ್ವಾಡಮಠ ಆಯ್ಕೆಯಾದರು.

ಗೌರವ ಕಾರ್ಯದರ್ಶಿಗಳಾಗಿ ಅಶೋಕಗೌಡ ಕೆ.ಪಾಟೀಲ, ಸಹ ಗೌರವ ಕಾರ್ಯದರ್ಶಿಗಳಾಗಿ ಸೋಮನಾಥ ಕೆ.ಜಾಲಿ, ರಾಘವೇಂದ್ರ ಎಸ್.ಕಾಲವಾಡ, ಕೋಶಾಧ್ಯಕ್ಷರಾಗಿ ಸಂಜಯ ಬಾಗಮಾರ ಇವರು ಆಯ್ಕೆಯಾಗಿದ್ದಾರೆಂದು ಸಂಸ್ಥೆಯ ಗೌರವ ಕಾರ್ಯದರ್ಶಿ ಅಶೋಕಗೌಡ ಕೆ.ಪಾಟೀಲ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here

E-Paper

E-paper

Must Read

spot_img