ಗುಲ್ಬರ್ಗಾ: ವಕ್ಫ್ ಅನ್ನೋ ಹೆಸರು ಕೇಳಿದ್ರೆ ಸಾಕು ರಾಜ್ಯದ ಜನರು ಅದರಲ್ಲೂ ರೈತರು ಬೆಚ್ಚಿಬೀಳ್ತಿದ್ದಾರೆ. ಇನ್ನೂ ಮಕ್ಕಳ ಕೈಯಲ್ಲಿ ಪೆನ್ನು ಕೊಡುವ ಬದಲು, ತಲ್ವಾರ್ ಕೊಡಿ ಎಂದು ಕಲಬುರಗಿಯ ಮರುಳಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಪ್ರಚೋದನಕಾರಿ ಭಾಷಣ ಹಿನ್ನಲೆ ಸ್ವಾಮೀಜಿಯ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
ಭಾಷಣ ಮಾಡುವ ಭರದಲ್ಲಿ ಸ್ವಾಮೀಜಿ ಅಲ್ಪಸಂಖ್ಯಾತರು ಯಾರು ಬರುತ್ತಾರೊ ಅವರನ್ನು ಕಡಿಯುತ್ತೇವೆ ಎಂದು ಹೇಳುತ್ತಿದ್ದಾರೆ. ಭಾರತವನ್ನು, ಪಾಕಿಸ್ತಾನ ಮಾಡುತ್ತೇವೆ ಎಂದು ಹೊರಟ್ಟಿದ್ದಾರೆ. ಇನ್ನು ನಾವು ಎಚ್ಚೆತ್ತುಕೊಳ್ಳದೆ ಇದ್ದರೆ ಈ ದೇಶ ಇರೊದಿಲ್ಲ. ಆದ್ದರಿಂದ ಇನ್ನು ಮುಂದೆ ಮಕ್ಕಳ ಕೈಯಲ್ಲಿ ಪೆನ್ನು ಕೊಡುವ ಬದಲು ತಲ್ವಾರ್ ಕೊಡೋಣ, ವಕ್ಫ್ ಕಾಯ್ದೆ ರದ್ದಾಗದಿದ್ದರೆ ಜೀವ ತೆಗೆಯಲು,
ಜೀವ ಕೊಡಲು ಸಿದ್ದರಿದ್ದೇವೆ ಎಂದು ತೋರಿಸೋಣ ಎಂದು ಪೋಲಿಸರ ಮುಂದೆಯೆ ವಿವಾದಾತ್ಮಕವಾಗಿ ಸ್ವಾಮೀಜಿ ಭಾಷಣ ಮಾಡಿದರು. ಸ್ವಾಮೀಜಿಯ ಹೇಳಿಕೆಯ ಆಧಾರದ ಮೇಲೆ ಅಫಜಲಪುರ ಪೊಲೀಸ್ ಠಾಣೆಯಲ್ಲಿ ಸ್ವಯಂಪ್ರೇರಿತ ದೂರು ದಾಖಲಾಗಿದೆ. ಭಾರತೀಯ ನ್ಯಾಯ ಸಂಹಿತೆ ಕಾಯಿದೆ 299, 353/2 ಅಡಿಯಲ್ಲಿ ಎಫ್ಐಆರ್ ದಾಖಲಿಸಲಾಗಿದೆ.