HomeGadag Newsಜೈನ ಮುನಿಗಳಿಗೆ ಶ್ರದ್ಧಾ-ಭಕ್ತಿಯ ಸ್ವಾಗತ

ಜೈನ ಮುನಿಗಳಿಗೆ ಶ್ರದ್ಧಾ-ಭಕ್ತಿಯ ಸ್ವಾಗತ

For Dai;y Updates Join Our whatsapp Group

ವಿಜಯಸಾಕ್ಷಿ ಸುದ್ದಿ, ಗದಗ : ರಾಜ್ಯದ ಹಳೇಬಿಡು ಸಮೀಪವಿರುವ ಜೈನರಗುತ್ತಿಯಲ್ಲಿ ಜರುಗಲಿರುವ ಐತಿಹಾಸಿಕ ಪಂಚಕಲ್ಯಾಣಕ  ಪ್ರತಿಷ್ಠಾ ಮಹಾಮಹೋತ್ಸವ ಹಾಗೂ ಮಹಾಯಜ್ಞದಲ್ಲಿ ಪಾಲ್ಗೊಳ್ಳಲು ಮಹಾರಾಷ್ಟ್ರದ ಇಚಲಕರಂಜಿಯ ನಾಂದನಿಯಿಂದ ಗದಗ ಮಾರ್ಗವಾಗಿ ಪಾದಯಾತ್ರೆ ಕೈಗೊಂಡಿರುವ ದಿಗಂಬರ ಜೈನ ಮುನಿಗಳ ತಂಡ ಮಂಗಳವಾರ ಮುಂಜಾನೆ ಗದಗ ನಗರಕ್ಕೆ ಆಗಮಿಸಿತು.
ನರಗುಂದ ಹೊಂಬಳ ಮಾರ್ಗವಾಗಿ ನಗರಕ್ಕೆ ಆಗಮಿಸಿದ ಚರ್ಯ ಶಿರೋಮಣಿ ಆಚಾರ್ಯ ಶ್ರೀ 108 ವಿಶುದ್ಧ ಸಾಗರ ಮಹಾರಾಜರ ನೇತೃತ್ವದಲ್ಲಿ 20 ಜೈನ ಮುನಿಗಳನ್ನು ಮುಳಗುಂದ ನಾಕಾ ಬಳಿ ಗದಗ ಜಿಲ್ಲಾ ದಿಗಂಬರ ಜೈನ್ ಸಂಘದ ಪದಾಧಿಕಾರಿಗಳು, ದಿಗಂಬರ ಸಮಾಜಬಾಂಧವರು ಶೃದ್ಧಾಭಕ್ತಿಯೊಂದಿಗೆ ಬರಮಾಡಿಕೊಂಡರು.
ಇಲ್ಲಿನ ಆದಿತ್ಯ ನಗರದಲ್ಲಿರುವ ಶಾಂತಿನಾಥ ದಿಗಂಬರ ಜೈನ ಮಂದಿರಕ್ಕೆ ಭೇಟಿ ನೀಡಿದ ಮುನಿಗಳ ತಂಡವು ನಗರದ ಹೊರವಲಯದಲ್ಲಿರುವ ಮಹೇಶ ಪಬ್ಲಿಕ್ ಸ್ಕೂಲ್‌ನ ಪ್ರಾಂಗಣದಲ್ಲಿ ಕೆಲ ಕಾಲ ಕಳೆದು ಪ್ರಾರ್ಥನೆ, ಧರ್ಮಬೋಧನೆ, ಪ್ರಸಾದ ಬಳಿಕ ಮಧ್ಯಾಹ್ನ ಡಂಬಳ, ಮುಂಡರಗಿ ಮಾರ್ಗವಾಗಿ ಪಾದಯಾತ್ರೆ ಮುಂದುವರೆಸಿದರು.
ಗದಗ ಜಿಲ್ಲಾ ದಿಗಂಬರ ಜೈನ್ ಸಂಘದ ಗೌರವ ಅಧ್ಯಕ್ಷ ಡಾ.ಅಪ್ಪಣ್ಣ ಹಂಜೆ, ಅಧ್ಯಕ್ಷ ಪಿ.ಎ. ಕುಲಕರ್ಣಿ, ಉಪಾಧ್ಯಕ್ಷ ಎಂ.ಟಿ. ಕಬ್ಬಿಣ, ಪ್ರಧಾನ ಕಾರ್ಯದರ್ಶಿ ಪ್ರಕಾಶ ಮುತ್ತಿನ, ಸಹ ಕಾರ್ಯದರ್ಶಿ ನಾಗರಾಜ ತುಕೋಳ, ಖಜಾಂಚಿ ಶಂಕ್ರಪ್ಪ ನಾವಳ್ಳಿ, ಆನಂದ ಬಸ್ತಿ, ಕುಬೇರಪ್ಪ ಮಲ್ಲಾಡದ, ಹನಮಂತಗೌಡ ಮತಗಟ್ಟಿ, ಅಶೋಕ ಮುತ್ತಿನ, ಸಂಜೀವ ಪಾಂಡ್ರೆ, ಯಶವಂತ ಸಿದ್ಧಣ್ಣವರ, ಸಂಜಯ ನಾವಳ್ಳಿ, ಸುಮನ್ ಮುತ್ತಿನ, ಪ್ರೀತಿ ನಾವಳ್ಳಿ, ನಿರ್ಮಲಾ ಸಿದ್ಧಣ್ಣವರ, ಮಧುಮತಿ ಕಬ್ಬಿಣ, ಸುಪ್ರಿಯಾ ನಾವಳ್ಳಿ, ಶೋಭಾ ಇಂಚಲ, ಮಂಜುಳಾ ಕಬ್ಬಿಣ ಮುಂತಾದವರು ಉಪಸ್ಥಿತರಿದ್ದರು.
ಚರ್ಯ ಶಿರೋಮಣಿ ಆಚಾರ್ಯ ಶ್ರೀ 108 ವಿಶುದ್ಧ ಸಾಗರ ಮಹಾರಾಜರ ನೇತೃತ್ವದ ೨೦ ಜೈನ ಮುನಿಗಳ ತಂಡ ಮುಂಡರಗಿ ರೋಡನ  ಮಹೇಶ ಪಬ್ಲಿಕ್ ಸ್ಕೂಲ್ ಆಗಮಿಸಿದ ಸಂದರ್ಭದಲ್ಲಿ ಶಾಲೆಯ ಕಾರ್ಯದರ್ಶಿ ಮಹಾಂತೇಶ ಬಾತಾಖಾನಿ, ಪ್ರೊ.ಶೈಲಜಾ ಮುದೇನಗುಡಿ, ವೀರೇಶ ಮುದೇನಗುಡಿ ಮತ್ತು ಪರಿವಾರದವರು ಭಕ್ತಿಯಿಂದ ಬರಮಾಡಿಕೊಂಡು ಅಗತ್ಯ ವ್ಯವಸ್ಥೆ ಕಲ್ಪಿಸಿದರು.
615 ಕಿ.ಮೀ ಪಾದಯಾತ್ರೆ
ನ. 3ರಂದು ನಾಂದನಿಯಿಂದ ಆರಂಭಗೊಂಡ ಜೈನ ಮುನಿಗಳ ಈ ಪಾದಯಾತ್ರೆ ನ. 27ರಂದು ಜೈನರಗುತ್ತಿ ತಲುಪಿದರೆ ಒಟ್ಟು 615 ಕಿ.ಮೀ ಕ್ರಮಿಸಿದಂತಾಗುವದು. ಪ್ರತಿ ದಿನಕ್ಕೆ 24ರಿಂದ 26 ಕಿ.ಮೀ ಪಾದಯಾತ್ರೆ ಜರುಗಿಸುವಂತೆ ಯೋಜನೆ ರೂಪಿಸಲಾಗಿದೆ. ನ. 28ರಿಂದ ಡಿ. 4ರವರೆಗೆ ನಡೆಯುವ ಕಾರ್ಯಕ್ರಮದ ಬಳಿಕ ಪುನಃ ಬೇರೆ ಮಾರ್ಗವಾಗಿ ನಾಂದನಿ ತಲುಪುವದು.

LEAVE A REPLY

Please enter your comment!
Please enter your name here

E-Paper

E-paper

Must Read

spot_img