ಬಿಗ್ ಬಾಸ್ ಸೀಸನ್ 11 ವೀಕ್ಷಕರಿಗೆ ಸಖತ್ ಮನರಂಜನೆ ಕೊಡುತ್ತಿದ್ದು, ಸ್ಪರ್ಧಿಗಳು ಜಿದ್ದಾಜಿದ್ದಿನ ಹೋರಾಟ ಕೊಡುತ್ತಿದ್ದಾರೆ.
ಇನ್ನೂ ಈ ಸೀಸನ್ ನಲ್ಲಿ ಗೆಳೆಯ-ಗೆಳತಿಯಂದೇ ಮಾತನಾಡುವ ಮಂಜು, ಗೌತಮಿ ಸ್ನೇಹ ಹೈಲೈಟ್ ಆಗಿತ್ತು. ಆದರೆ ಈ ವಾರ ಇವರಿಬ್ಬರ ಸ್ನೇಹದಲ್ಲಿ ಬಿರುಕು ಬಿಟ್ಟಿರುವ ಹಾಗೆ ಕಾಣುತ್ತಿದೆ.
ಬಿಗ್ಬಾಸ್ ಶುರುವಾದಾಗಿನಿಂದ ಈ ಇಬ್ಬರು ಇಲ್ಲಿಯವರೆಗೂ ಜೋಡಿಯಾಗೇ ಇದ್ದರು. ಆದರೆ ಏಕಾಏಕಿ ಈ ಇಬ್ಬರ ಮಧ್ಯೆ ಬಿರುಕು ಮೂಡಿದೆ. ಬಿಗ್ಬಾಸ್ ಮನೆಯಲ್ಲಿ ಮಂಜು ಹಾಗೂ ಗೌತಮಿ ಜಾಧವ್ ಗೆಳತನದ ಎಂತದ್ದು ಎಂದು ಎಲ್ಲರಿಗೂ ಗೊತ್ತೇ ಇದೆ. ಗೆಳತಿ ಗೆಳತಿ ಎನ್ನುತ್ತಲೇ ಗೌತಮಿಗೆ ಸಪೋರ್ಟ್ ಮಾಡಿಕೊಂಡು ಬರುತ್ತಿದ್ದ ಮಂಜು ಸದ್ಯ ಶಾಕ್ನಲ್ಲಿದ್ದಾರೆ. ಪ್ರತಿಯೊಂದು ವಿಚಾರಲ್ಲೂ ಗೆಳತಿ ಬಗ್ಗೆ ವಹಿಸಿಕೊಂಡು ಮಾತಾಡುತ್ತಿದ್ದ ಮಂಜು ಸದ್ಯ ಗೌತಮಿ ಖಡಕ್ ಮಾತಿಗೆ ಕಕ್ಕಾಬಿಕ್ಕಿಯಾಗಿದ್ದಾರೆ.
ಪ್ರತಿ ವಿಚಾರಕ್ಕೂ ಮಂಜಣ್ಣ ಮೇಲೆ ಗೌತಮಿ ಕೋಪಗೊಳ್ಳುತ್ತಿದ್ದಾರೆ. ಕ್ಯಾಪ್ಟನ್ ಪಟ್ಟ ಸಿಗುತ್ತಿದ್ದಂತೆ ಗೌತಮಿ ಬದಲಾಗಿ ಬಿಟ್ರಾ ಎಂಬ ಅನುಮಾನ ವಿಕ್ಷಕರಿಗೆ ಮೂಡಿತ್ತು. ಆದರೆ ಈಗ ಮತ್ತೆ ಗೌತಮಿ ನೀವು ನನ್ನ ಜೊತೆಗೆ ಇರಬೇಡಿ. ನೀವು ಇದ್ದರೆ ನಮಗೆ ಕಿರಿಕಿರಿ ಆಗುತ್ತೆ ಅಂತ ಹೇಳಿದ್ದಾರೆ.
ಈ ಮಾತನ್ನು ಕೇಳಿಸಿಕೊಂಡ ಮಂಜಣ್ಣ ಅಲ್ಲಿಂದ ಎದ್ದು ಹೇಗಿದ್ದಾರೆ. ಇದಾದ ಬಳಿಕ ಮತ್ತೆ ಗೌತಮಿ ಬಳಿ ಬಂದು ಗೆಳತಿ ಅಂತ ಮಾತಾಡಿದ್ದಾರೆ. ಸದ್ಯ ಮುಂದಿನ ದಿನಗಳಲ್ಲಿ ಗೌತಮಿ ಆಟ ಚೇಂಚ್ ಆಗುತ್ತಾ ಅಥವಾ ಮತ್ತೆ ಗೆಳೆಯ ಅಂತ ಮಂಜು ಅವರ ಹಿಂದೆ ಹೋಗುತ್ತಾರಾ ಅಂತ ಕಾದು ನೋಡಬೇಕಾಗಿದೆ.