HomeGadag Newsಚಿತ್ರಕಲಾ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಣೆ

ಚಿತ್ರಕಲಾ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಣೆ

For Dai;y Updates Join Our whatsapp Group

Spread the love

ವಿಜಯಸಾಕ್ಷಿ ಸುದ್ದಿ, ಲಕ್ಕುಂಡಿ: ಗ್ರಾಮ ಪಂಚಾಯಿತಿ ಹಾಗೂ ಲಕ್ಕುಂಡಿಯ ಕಲಾತ್ಮಕ ಕಲಾವಿದರ ಬಳಗ ಇವರ ಸಹಯೋಗದಲ್ಲಿ ಬಾಪೂಜಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಗ್ರಾ.ಪಂ ಮಟ್ಟದ ಚಿತ್ರಕಲೆ ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಿಸಲಾಯಿತು.

ಪ್ರಾಥಮಿಕ ಹಾಗೂ ಪ್ರೌಢಶಾಲಾ ಮಕ್ಕಳಿಗೆ ಏರ್ಪಡಿಸಿದ್ದ ಚಿತ್ರಕಲೆ ಸ್ಪರ್ಧೆಯಲ್ಲಿ 2ರಿಂದ 4ನೇ ತರಗತಿ ವಿಭಾಗದಲ್ಲಿ ಬಾಪೂಜಿ ಕಿರಿಯ ಪ್ರಾಥಮಿಕ ಶಾಲೆಯ ಮಧು ಪೂಜಾರ ಪ್ರಥಮ, ಸರಕಾರಿ ಉರ್ದು ಪ್ರಾಥಮಿಕ ಶಾಲೆಯ ಫಲಕನಾಜ ದ್ವಿತೀಯ, ಬಂದಾನವಾಜ ಬರದ್ವಾಡ ತೃತೀಯ, 5ರಿಂದ 7ನೇ ತರಗತಿ ವಿಭಾಗದಲ್ಲಿ ಎಸ್‌ಎಸ್‌ವಿಕೆ ಶಾಲೆಯ ಗೀತಾ ಅರಹುಣಸಿ ಪ್ರಥಮ, ಉರ್ದು ಶಾಲೆಯ ಇಸ್ಮಾಯಿಲ್ ಕದಡಿ ದ್ವಿತೀಯ, ಶಶಾಂಕ ಸಿದ್ದರಾಮಶಟ್ಟಿ ತೃತೀಯ, 8ರಿಂದ 10ನೇ ತರಗತಿ ವಿಭಾಗದಲ್ಲಿ ಕಿತ್ತೂರ ರಾಣಿ ಚನ್ನಮ್ಮ ವಸತಿ ಶಾಲೆಯ ಭೂಮಿಕಾ ಲಮಾಣಿ ಪ್ರಥಮ, ಸೌಮ್ಯ ಮಾದರ ದ್ವಿತೀಯ, ಜಿಜಿಹೆಚ್ ಶಾಲೆಯ ಹೇಮಲತಾ ಕುಲಕರ್ಣಿ ತೃತೀಯ ಸ್ಥಾನ ಪಡೆದರು.

ಸ್ಪರ್ಧಾ ವಿಜೇತರಿಗೆ ಹಾಗೂ ಭಾಗವಹಿಸಿದ ಎಲ್ಲಾ ಮಕ್ಕಳಿಗೂ ಗ್ರಾ.ಪಂ ಅಧ್ಯಕ್ಷ ಕೆ.ಎಸ್. ಪೂಜಾರ, ಉಪಾಧ್ಯಕ್ಷೆ ಪುಷ್ಪಾ ಪಾಟೀಲ ಪ್ರಶಸ್ತಿಪತ್ರ ಹಾಗೂ ಬಹುಮಾನಗಳನ್ನು ವಿತರಿಸಿ ಅಭಿನಂದಿಸಿದರು. ಈ ಸಂದರ್ಭದಲ್ಲಿ ಗ್ರಾ.ಪಂ ಸದಸ್ಯರಾದ ರಜಿಯಾಬೇಗಂ ತಹಸೀಲ್ದಾರ, ಆಮೀನಾ ಹುಬ್ಬಳ್ಳಿ, ಸಾಹಿತಿ ನೀಲಕಂಠ ಮುಕ್ಕಣ್ಣವರ, ಆರ್.ಬಿ. ಬರದ್ವಾಡ, ಲಕ್ಕುಂಡಿಯ ಕಲಾತ್ಮಕ ಕಲಾವಿದ ಬಳಗದವರು ಹಾಜರಿದ್ದರು.

ನಿರ್ಣಾಯಕರಾಗಿ ವಿಜಯ ಕಲಾ ಮಂದಿರದ ಪ್ರಾಚಾರ್ಯ ಬಿ.ಎಲ್. ಚವ್ಹಾಣ, ಪಿ.ಬಿ. ಬಂಡಿ, ಎಸ್.ವಿ. ಗುಂಜಳ, ಬಸವರಾಜ ನೆಲಜೇರಿ, ನಂದಾ ಪತ್ತಾರ, ಸುಮಲತಾ ಕವಲೂರ ಕಾರ್ಯ ನಿರ್ವಹಿಸಿದರು.

ರಮೇಶ ಹಾದಿಮನಿ ಸ್ವಾಗತಿಸಿದರು. ಬಸವರಾಜ ಗರ್ಜಪ್ಪನವರ, ರಫಿಯಾ ದಂಡಿನ ನಿರೂಪಿಸಿದರು, ಎಸ್.ವಿ. ಗರ್ಜಪ್ಪನವರ ವಂದಿಸಿದರು.


Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!