ಭೋಗಿ ಹಬ್ಬ ಆಚರಣೆ

0
Spread the love

ವಿಜಯಸಾಕ್ಷಿ ಸುದ್ದಿ, ನರೇಗಲ್ಲ: ಮಕರ ಸಂಕ್ರಾಂತಿಯ ಹಿಂದಿನ ದಿನ ಬರುವ ಭೋಗಿ ಹಬ್ಬವನ್ನು ನರೇಗಲ್ಲ ಹೋಬಳಿಯಾದ್ಯಂತ ಸೋಮವಾರ ಶೃದ್ಧಾ ಭಕ್ತಿಗಳಿಂದ ಆಚರಿಸಲಾಯಿತು. ಧನುರ್ಮಾಸದಲ್ಲಿ ಬರುವ ಭೋಗಿ ಹಬ್ಬ ವಿಶೇಷತೆಯಿಂದ ಕೂಡಿದ್ದು, ಸುಮಂಗಲೆಯರು ವೈದಿಕ ಮುತ್ತೈದೆಯರಿಗೆ ಮರದ ಬಾಗಿನ ನೀಡುವ ಮೂಲಕ ಈ ಹಬ್ಬವನ್ನು ಆಚರಿಸಿದರು.

Advertisement

ಸೂರ್ಯ ದಕ್ಷಿಣಾಯನದಿಂದ ಉತ್ತರಾಯಣದ ಕಡೆಗೆ ಚಲಿಸುವ ಮಹಾ ಪರ್ವವೇ ಸಂಕ್ರಮಣ ಎನಿಸಿಕೊಳ್ಳುತ್ತದೆ. ಆತ ಮಕರ ರಾಶಿಯಲ್ಲಿ ಈ ಪ್ರವೇಶವನ್ನು ಮಾಡುವುದರಿಂದ ಈ ಪುಣ್ಯ ಕಾಲವನ್ನು ಮಕರ ಸಂಕ್ರಮಣ ಎಂದು ಕರೆಯಲಾಗುತ್ತದೆ. ಮಕರ ಸಂಕ್ರಮಣದ ಮೊದಲ ಹಬ್ಬ ಭೋಗಿ ಹಬ್ಬವಾಗಿದೆ. ಅಂದು ಬೆಳಿಗ್ಗೆ ಸುಮಂಗಲೆಯರು ನಿತ್ಯದ ಜೀವನಕ್ಕೆ ಬೇಕಾಗುವ ದವಸ-ಧಾನ್ಯಗಳನ್ನು ಮೊರದಲ್ಲಿ ಇರಿಸಿ ದಾನ ಕೊಡುವುದೇ ಭೋಗಿ ಹಬ್ಬದ ವೈಶಿಷ್ಟ್ಯತೆಯಾಗಿದೆ.


Spread the love

LEAVE A REPLY

Please enter your comment!
Please enter your name here