ಬೆಂಗಳೂರು:-ಮೆಟ್ರೋ ಪ್ರಯಾಣಿಕರಿಗೆ ಬಿಗ್ ಶಾಕ್ ಎದುರಾಗಿದ್ದು, ಇಂದಿನಿಂದ ಮೆಟ್ರೋ ದರ ಏರಿಕೆಯಾಗಿದೆ ಎಂದು BMRCL ಮಾಹಿತಿ ನೀಡಿದೆ.
ಇಂದಿನಿಂದ ನಮ್ಮ ಮೆಟ್ರೋ ದಲ್ಲಿ ಪರಿಷ್ಕೃತ ದರ ಜಾರಿಯಾಗಿದೆ. ಪ್ರಯಾಣಿಕರಿಗೆ ಬಿಎಂಆರ್ಸಿಎಲ್ ಡಬಲ್ ರೇಟ್ ಟ್ರಬಲ್ ತಂದಿಟ್ಟಿದೆ.
ನಮ್ಮ ಮೆಟ್ರೋ ಪರಿಷ್ಕೃತ ದರ ಹೇಗಿದೆ ಗೊತ್ತಾ?
ಮೆಟ್ರೋ ಪ್ರಯಾಣ ದರ ಗರಿಷ್ಠ 90 ರೂ. ಕನಿಷ್ಠ 10 ರೂ. ಏರಿಕೆಯಾಗಿದೆ. ಭಾನುವಾರ ಹಾಗೂ ರಾಷ್ಟ್ರೀಯ ರಜಾ ದಿನಗಳಲ್ಲಿ ಏಕರೂಪ ಸ್ಮಾರ್ಟ್ ಕಾರ್ಡಿಗೆ 10% ರಿಯಾಯಿತಿ ಪ್ರಕಟಿಸಲಾಗಿದೆ. ಸ್ಮಾರ್ಟ್ ಕಾರ್ಡಿನಲ್ಲಿ ಕನಿಷ್ಠ 90 ರೂಪಾಯಿ ಬ್ಯಾಲೆನ್ಸ್ ಕಡ್ಡಾಯ ಮಾಡಲಾಗಿದೆ..
ಮೊದಲ 2 ಕಿಲೋ ಮೀಟರ್ ಪ್ರಯಾಣಕ್ಕೆ ಮುಂಚೆ 10 ರೂಪಾಯಿ ಇತ್ತು.. ಈಗ್ಲೂ 10 ರೂಪಾಯಿ.. 2 ರಿಂದ 4 ಕಿಲೋ ಮೀಟರ್ ಪ್ರಯಾಣಕ್ಕೆ ಮುಂಚೆ 15 ರೂಪಾಯಿ ಇದ್ರೆ ಈಗ 20 ರೂಪಾಯಿ.. 4 ರಿಂದ 6 ಕಿಲೋ ಮೀಟರ್ ಟ್ರಾವೆಲ್ ಮಾಡಿದ್ರೆ 20 ಕೊಡ್ಬೇಕಿತ್ತು.. ಈಗ 30 ರೂಪಾಯಿ ಕೊಡಲೇಬೇಕು.. 6 ರಿಂದ 8 ಕಿಲೋ ಮೀಟರ್ ಪ್ರಯಾಣದ ರೇಟ್ 25 ರೂಪಾಯಿನಿಂದ 40 ಆದ್ರೆ, 8-10 ಕಿ.ಮೀಗೆ 35 ರೂಪಾಯಿಯಿಂದ ₹50 ಆಗಿದೆ.. ಇನ್ನು, 10ರಿಂದ 15 ಕಿಲೋ ಮೀಟರ್ಗೆ 40 ರಿಂದ 60 ರೂಪಾಯಿ ಆಗಿದ್ರೆ, 15 ರಿಂದ 20 ಕಿಲೋ ಮೀಟರ್ಗೆ 50 ರೂಪಾಯಿಯಿಂದ 70 ರೂಪಾಯಿ ಆಗಿದೆ.. ಅತ್ತ, 20 ರಿಂದ 25 ಕಿಲೋ ಮೀಟರ್ಗೆ 60 ಇತ್ತು.. ಈಗ 80 ರೂಪಾಯಿ ಆಗಿದೆ. ಲಾಸ್ಟ್.. 25 ರಿಂದ 30 ಕಿಲೋ ಮೀಟರ್ 60 ರೂಪಾಯಿ ಇದ್ರೆ, 90 ರೂಪಾಯಿಗೆ ಜಂಪ್ ಆಗಿದೆ.
ಇನ್ನು, ಬೆಲೆ ಏರಿಕೆಯಿಂದ ತತ್ತರಿಸಿರುವ ರಾಜ್ಯದ ಜನರಿಗೆ ಸಿದ್ದು ಸರ್ಕಾರ ಮತ್ತೊಮ್ಮೆ ಬರೆ ಎಳೆದಿದೆ ಅಂತ ಜೆಡಿಎಸ್ ಕಿಡಿಕಾರಿದೆ.