ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳ ಬೀಳ್ಕೊಡುಗೆ

0
Spread the love

ವಿಜಯಸಾಕ್ಷಿ ಸುದ್ದಿ, ಗದಗ: ಸ್ಥಳೀಯ ಬಿಂಕದಕಟ್ಟಿಯ ಶ್ರೀರಾಮ ಕರುಣಾನಂದ ಶಿಕ್ಷಣ ಸಂಸ್ಥೆಯ ಆಂಗ್ಲ ಮಾಧ್ಯಮ ಪ್ರೌಢಶಾಲೆಯಲ್ಲಿ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭವನ್ನು ಏರ್ಪಡಿಸಲಾಗಿತ್ತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಿ.ಡಿ. ರಂಗಪ್ಪನವರ ವಹಿಸಿದ್ದರು. ಅತಿಥಿಗಳಾಗಿ ಶಾಲೆಯ ಮುಖ್ಯೋಪಾಧ್ಯಾಯರಾದ ರಾಘವೇಂದ್ರ ಕೆ.ಆರ್ ಪಾಲ್ಗೊಂಡಿದ್ದರು.

Advertisement

9ನೇ ತರಗತಿಯ ವಿದ್ಯಾರ್ಥಿಗಳಾದ ರೇಣುಕಾ ಮತ್ತು ಅನೀಶಾ ಪ್ರಾರ್ಥಿಸಿದರು. ಅನೀಶ ದೊಡ್ಮನಿ ಸ್ವಾಗತ ಭಾಷಣ ಮಾಡಿದಳು. ಶಾಲೆಯ ಸಹ ಶಿಕ್ಷಕರಾದ ಅನುಪಮಾ ಬ.ಹೊಂಬಳ, ನಾಗರತ್ನ ತಳವಾರ್, ಸದಾನಂದ ಸಂಶಿಮಠ ಶಾಲೆಯ ಅನುಭವಗಳು ಮತ್ತು ಸಾಧನೆಯ ಕುರಿತು ಮಾತನಾಡಿದರು. ಸನಾ ಮುಲ್ಲಾ ಕಾರ್ಯಕ್ರಮ ನಿರೂಪಿಸಿದಳು. ರೇಣುಕಾ ಪಾಟೀಲ್ ವಂದಿಸಿದಳು.


Spread the love

LEAVE A REPLY

Please enter your comment!
Please enter your name here