ತಾಯಿಯಾಗುತ್ತಿರುವ ಸಂಭ್ರಮದಲ್ಲಿ ಕಿಯಾರಾ ಅಡ್ವಾಣಿ: ಬಿಗ್‌ ಬಜೆಟ್‌ ಸಿನಿಮಾದಿಂದ ಹೊರ ಬಂದ ನಟಿ

0
Spread the love

ಖ್ಯಾತ ನಟಿ ಕಿಯಾರಾ ಅಡ್ವಾಣಿ ಅಮ್ಮನಾಗುತ್ತಿರುವ ಸಂಭ್ರಮದಲ್ಲಿದ್ದಾರೆ. ಇತ್ತೀಚೆಗಷ್ಟೇ ನಟಿ ತಾವು ತಾಯಿಯಾಗುತ್ತಿರುವ ಸುದ್ದಿಯನ್ನು ತಿಳಿಸಿದ್ದಾರೆ. ಸದ್ಯ ಯಶ್‌ ನಟನೆಯ ಟಾಕ್ಸಿಕ್‌ ಸಿನಿಮಾದಲ್ಲಿ ತೊಡಗಿಕೊಂಡಿದ್ದು ಈ ಮಧ್ಯೆ ಮಹತ್ವದ ಸಿನಿಮಾವೊಂದರ ಅವಕಾಶ ನಟಿಯ ಕೈ ತಪ್ಪಿದೆ ಎನ್ನಲಾಗುತ್ತಿದೆ.

Advertisement

ಕಿಯಾರಾ ಅಡ್ವಾಣಿಗೆ ಸಖತ್‌ ಡಿಮ್ಯಾಂಡ್‌ ಇದ್ದು ಹಲವು ಸಿನಿಮಾಗಳಲ್ಲಿ ನಟಿ ತೊಡಗಿಕೊಂಡಿದ್ದಾರೆ. ಸದ್ಯ ಯಶ್‌ ನಟನೆಯ ಟಾಕ್ಸಿಕ್‌ ಸಿನಿಮಾದ ಜೊತೆಗೆ ಹೃತಿಕ್ ರೋಷನ್, ಜೂನಿಯರ್​ ಎನ್​ಟಿಆರ್​ ನಟನೆಯ ‘ವಾರ್​ 2’ ಸಿನಿಮಾ ಕೂಡ ಕಿಯಾರಾ ಅಡ್ವಾಣಿ ಕೈಯಲ್ಲಿದೆ. ಜೊತೆಗೆ ʼಡಾನ್‌ 3’ ಚಿತ್ರದಲ್ಲಿ ನಟಿಸುವ ಬಗ್ಗೆ ಮಾತುಕತೆ ನಡೆದಿತ್ತು. ಆದ್ರೆ ನಟಿ ತಾಯಿಯಾಗುತ್ತಿರುವ ಹಿನ್ನೆಲೆಯಲ್ಲಿ ʼಡಾನ್‌ 3’  ಸಿನಿಮಾದ ಅವಕಾಶ ಕೈ ತಪ್ಪಿದೆ ಎಂಬ ಸುದ್ದಿ ಹರಿದಾಡುತ್ತಿದೆ.

ಫರ್ಹಾನ್ ಅಖ್ತರ್​ ‘ಡಾನ್ 3’ ಸಿನಿಮಾಗೆ ನಿರ್ದೇಶನ ಮಾಡುತ್ತಿದ್ದು, ನಾಯಕನಾಗಿ ರಣವೀರ್ ಸಿಂಗ್ ಕಾಣಿಸಿಕೊಳ್ತಿದ್ದಾರೆ. ರಣವೀರ್‌ ಗೆ ಜೋಡಿಯಾಗಿ ಕಿಯಾರಾ ಅಡ್ವಾನಿ ನಟಿಸುತ್ತಾರೆ ಎನ್ನಲಾಗಿತ್ತು. ಆದರೆ ಪ್ರೆಗ್ನೆಂಟ್ ಆದ ಬಳಿಕ ಶೂಟಿಂಗ್​ನಲ್ಲಿ ಭಾಗಿಯಾಗುವುದು ಕಷ್ಟ ಎಂಬ ಕಾರಣಕ್ಕೆ ಕಿಯಾರಾ ಅಡ್ವಾಣಿ ಅವರು ‘ಡಾನ್ 3’ ಪಾತ್ರವರ್ಗದಿಂದ ಹೊರನಡೆದಿದ್ದಾರೆ ಎಂದು ಸುದ್ದಿಯಾಗಿದೆ. ಸದ್ಯ ಕಿನಾರಾ ಜಾಗಕ್ಕೆ ಮತ್ತೊಬ್ಬ ನಟಕಿಯ ಹುಡುಕಾಟದಲ್ಲಿ ಚಿತ್ರತಂಡ ತೊಡಗಿಕೊಂಡಿದೆ ಎನ್ನಲಾಗುತ್ತಿದೆ.


Spread the love

LEAVE A REPLY

Please enter your comment!
Please enter your name here