ಕೂಲಿಕಾರ್ಮಿಕರಿದ್ದ ಪಿಕಪ್ ವಾಹನ ಮರಕ್ಕೆ ಡಿಕ್ಕಿ: ಹಲವರು ಗಂಭೀರ!

0
Spread the love

ಚಿಕ್ಕೋಡಿ:- ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಕೋಹಳ್ಳಿ ಗ್ರಾಮದಲ್ಲಿ ಕೂಲಿಕಾರ್ಮಿಕರಿದ್ದ ಪಿಕಪ್ ವಾಹನ ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ ಹಲವರು ಗಂಭೀರ ಗಾಯಗೊಂಡ ಘಟನೆ ಜರುಗಿದೆ.

Advertisement

ಅಪಘಾತದ ರಭಸಕ್ಕೆ ವಾಹನದ ಮುಂಭಾಗ ಛಿದ್ರ-ಛಿದ್ರಗೊಂಡಿದ್ದು, ಪಿಕಪ್ ವಾಹನದಲ್ಲಿದ್ದವರಿಗೆ ಗಂಭೀರಗಾಯವಾಗಿದೆ. ಕೂಲಿ ಕಾರ್ಮಿಕರನ್ನ ವಾಪಾಸ್ ಕರೆತರುವಾಗ ಈ ದುರ್ಘಟನೆ ಜರುಗಿದೆ. ಸುಮಾರು 12 ಜನ ಕೂಲಿಕಾರ್ಮಿಕರು ಪ್ರಯಾಣಿಸುತ್ತಿದ್ದ ಪಿಕ್‌ಅಪ್ ವಾಹನ ಇದಾಗಿದ್ದು, ಘಟನೆಯಲ್ಲಿ ಮೂವರಿಗೆ ಗಂಭೀರಗಾಯವಾಗಿದೆ. ಗಾಯಗೊಂಡ ಗಾಯಾಳುಗಳನ್ನ ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಐಗಳಿ ಪೊಲೀಸ ಠಾಣಾ ವ್ಯಾಪ್ತಿಯಲ್ಲಿ ಘಟನೆ ಜರುಗಿದೆ.


Spread the love

LEAVE A REPLY

Please enter your comment!
Please enter your name here