ಬೆಳಗಾವಿ: ಬೆಳಗಾವಿ ಮಾರ್ಕೆಟ್ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿ ಪ್ರಯಾಣಿಕರ ಚಿನ್ನದ ಒಡವೆ ಕದಿಯುತ್ತಿದ್ದ ಕಳ್ಳಿಯರ ಗ್ಯಾಂಗ್ ಅನ್ನು ಅರೆಸ್ಟ್ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಬೆಳಗಾವಿ ನಗರದ ವಡ್ಡರವಾಡಿಯ ನಿವಾಸಿಗಳಾದ ಅನಿತಾ ಚೌಗಲೆ (58), ನಿಶಾ ಲೊಂಡೆ (25), ಗಿಡ್ಡಿ ಲೊಂಡೆ (35) ಬಂಧಿತ ಆರೋಪಿಗಳಾಗಿದ್ದು,
Advertisement
ಮಾರ್ಕೆಟ್ ಎಸಿಪಿ ಸಂತೋಷ ಸತ್ಯನಾಯಕ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿ ಮೂವರು ಖತರ್ನಾಕ್ ಕಳ್ಳಿಯರನ್ನು ಅರೆಸ್ಟ್ ಮಾಡಿದ್ದಾರೆ. ಹುಬ್ಬಳ್ಳಿ ಮೂಲದ ಕಾಂಚನ್ ಗೌಡರ ಎಂಬುವರ ಚಿನ್ನ ಕಳ್ಳತನ ಆಗಿತ್ತು.
ಈ ಬಗ್ಗೆ ಮಾರ್ಕೆಟ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಕೇಸ್ ದಾಖಲಿಸಿಕೊಂಡ ಮಾರ್ಕೆಟ್ ಪೊಲೀಸರು ಕಳ್ಳಿಯರನ್ನ ಬಂಧಿಸಿ ಜೈಲಿಗಟ್ಟಿದ್ದಾರೆ. ಆರೋಪಿಗಳಿಂದ 12 ಲಕ್ಷ 70 ಸಾವಿರ ಮೌಲ್ಯದ 143 ಗ್ರಾಂ ಚಿನ್ನದ ಒಡವೆ ಜಪ್ತಿ ಮಾಡಲಾಗಿದೆ.