ಬೆಂಗಳೂರು:- ನಿರ್ಮಾಣ ಹಂತದ ಕಟ್ಟಡದಲ್ಲಿ ಯುವ ಉದ್ಯಮಿಗೆ ಚಾಕು ಇರಿದಿರುವ ಘಟನೆ ಬೆಂಗಳೂರಿನ ಬಿಜಿಎಸ್ ಲೇಔಟ್‌ನಲ್ಲಿ ಜರುಗಿದೆ. ಘಟನೆ ಬಳಿಕ ಗನ್ ಮ್ಯಾನ್ ಎಸ್ಕೇಪ್ ಆಗಿದ್ದು, ಪೊಲೀಸರಿಂದ ತಲಾಷ್ ನಡೆದಿದೆ.
ಹತ್ಯೆಯಾದ ಉದ್ಯಮಿಯನ್ನು 37 ವರ್ಷದ ಲೋಕನಾಥ್ ಸಿಂಗ್ ಎಂದು ಗುರುತಿಸಲಾಗಿದೆ. ಲೋಕನಾಥ್ ಸಿಂಗ್‌ಗೆ ಇದೇ ತಿಂಗಳು ಮದುವೆ ನಿಶ್ವಯವಾಗಿತ್ತು. ಇದೀಗ ಕುತ್ತಿಗೆ ಭಾಗಕ್ಕೆ ಚಾಕುವಿನಿಂದ ಇರಿದು ಉದ್ಯಮಿಯನ್ನು ಕೊಲೆ ಮಾಡಲಾಗಿದೆ. ಘಟನೆಯಲ್ಲಿ ಲೋಕನಾಥ್ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಘಟನೆ ಸಂಬಂಧ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ಮುಂದುವರಿದಿದೆ.



