ಗದಗ: ಗದಗ ನಗರದ ಇತಿಹಾಸ ಪ್ರಸಿದ್ಧ ಕಿಲ್ಲಾ ಶ್ರೀ ಜೋಡ ಹನಮಂತ ದೇವಸ್ಥಾನದ ವಿವಿಧ ಕಾಮಗಾರಿ ಹಾಗೂ ಜೀರ್ಣೋದ್ಧಾರ ಕಾರ್ಯಕ್ಕೆ ಸಚಿವರಾದ ಎಚ್.ಕೆ. ಪಾಟೀಲರು 20 ಲಕ್ಷ ರೂಪಾಯಿಗಳನ್ನು ಧಾರ್ಮಿಕ ದತ್ತಿ ಇಲಾಖೆಯಿಂದ ಬಿಡುಗಡೆ ಮಾಡಿದ ಪತ್ರವನ್ನು ನೀಡಿದರು. ಈ ಸಂದರ್ಭದಲ್ಲಿ ಮಾಜಿ ಶಾಸಕ ಡಿ.ಆರ್. ಪಾಟೀಲ, ಯುಮ ಮುಖಂಡ ಕೃಷ್ಣಗೌಡ ಪಾಟೀಲ, ಟ್ರಸ್ಟಿಗಳಾದ ವಿಶ್ವನಾಥ ರಾಮನಕೊಪ್ಪ, ಪ್ರಮೋದ ರಾಯ್ಕರ್, ರಾಮಣ್ಣಾ ಬಾಕಳೆ, ಮಂಜುನಾಥ ಯಾಳಗಿಶೆಟ್ಟರ, ಆನಂದ ಸರ್ವದೆ, ಅಂಬಾಲಾಲಸಾ ಖೋಡೆ, ನಿರಂಜನ ಓಝಾ, ಬಸವರಾಜ ಪೂಜಾರ, ಪರಶುರಾಮ ದಲಬಂಜನ ಮುಂತಾದವರು ಇದ್ದರು.



