ಬೆಂಗಳೂರು:- ನಗರದ ಹಲವೆಡೆ ಶುಕ್ರವಾರ ಭಾರೀ ಮಳೆಯಾಗಿದೆ. ಟೌನ್ ಹಾಲ್, ಮೈಸೂರು ಬ್ಯಾಂಕ್ ಸರ್ಕಲ್, ಮೆಜೆಸ್ಟಿಕ್ ಮಲ್ಲೇಶ್ವರಂ ಸೇರಿ ಬೆಂಗಳೂರಿನ ಹಲವೆಡೆ ನಿನ್ನೆ ಸಂಜೆ ಮಳೆರಾಯ ಧರೆಗೆ ಇಳಿದಿದ್ದಾನೆ.
ಬಿಸಿಲಿನ ತಾಪದಿಂದ ಬೆಂದಿದ್ದ ರಾಜಧಾನಿ ಜನರು ಸಂಜೆಯ ಮಳೆಯಿಂದ ತಂಪಾದರು. ಬಿಸಿಲಿನಿಂದ ಕಾದು ಕೆಂಡದಂತಾಗಿದ್ದ ಸಿಲಿಕಾನ್ ಸಿಟಿಯ ರಸ್ತೆಗಳು ತಣ್ಣಗಾದವು. ಏಕಾಏಕಿ ಮಳೆಯಿಂದ ಸಂಜೆ ಹೊತ್ತು ಮನೆಗಳಿಗೆ ತೆರಳುತ್ತಿರುವ ಬೈಕ್ ಸವಾರರು ಪರದಾಡಿದರು.
ಎಷ್ಟು ದಿನ ಮಳೆ, ಎಲ್ಲೆಲ್ಲಿ?
ಏಪ್ರಿಲ್ 17ರವರೆಗೂ ಉತ್ತರ ಕರ್ನಾಟಕದ ಬೆಳಗಾವಿ, ಧಾರವಾಡ, ಗದಗ ಮತ್ತು ಹಾವೇರಿ ಜಿಲ್ಲೆಗಳಲ್ಲಿ ಮಳೆಯಾಗುವ ಸಾಧ್ಯತೆ ಇದೆ. ಅದರಂತೆ ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಾಮರಾಜನಗರ, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ಚಿತ್ರದುರ್ಗ, ದಾವಣಗೆರೆ, ಹಾಸನ, ಕೊಡಗು, ಕೋಲಾರ, ದುಂಡ್ಯ, ಮೈಸೂರು, ರಾಮನಗರ, ಶಿವಮೊಗ್ಗ ಮತ್ತು ತುಮಕೂರು ಜಿಲ್ಲೆಗಳಲ್ಲಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ಕೊಟ್ಟಿದೆ.



