ವಿಜಯಸಾಕ್ಷಿ ಸುದ್ದಿ, ಗದಗ: ಇಲ್ಲಿನ ಶಿವಾನಂದ ನಗರದ ಬಸವ ಸಮುದಾಯ ಭವನದಲ್ಲಿ ಮೇ. 4ರ ಮುಂಜಾನೆ 10 ಗಂಟೆಗೆ ನಡೆಯಲಿರುವ ಬಸವದಳದ 1644ನೇ ಶರಣ ಸಂಗಮದಲ್ಲಿ ಬಸವಾದಿ ಶರಣರ ವೇಷ-ಭೂಷಣ ಸ್ಪರ್ಧೆ ಹಾಗೂ ಕರ್ನಾಟಕದ ಸಾಂಸ್ಕೃತಿಕ ನಾಯಕ, ವಿಶ್ವಗುರು ಬಸವಣ್ಣನವರ 920ನೇ ಜಯಂತಿ ಅಂಗವಾಗಿ ಉಪನ್ಯಾಸ ಕಾರ್ಯಕ್ರಮ ನೆರವೇರಲಿದೆ.
ಅಧ್ಯಕ್ಷತೆಯನ್ನು ಶರಣ ವಿ.ಕೆ. ಕರೇಗೌಡ್ರ ವಹಿಸುವರು. ಶರಣ ಅಶೋಕ ಬ.ಬರಗುಂಡಿ ಉಪನ್ಯಾಸ ನೀಡುವರು. ನಗರಸಭೆ ಸದಸ್ಯೆ, ಶರಣೆ ವಿದ್ಯಾವತಿ ಅಮರನಾಥ ಗಡಗಿ ಪಾಲ್ಗೊಳ್ಳುವರು.
ಬಸವದಳದ ಸದಸ್ಯರು, ಶರಣ ಸಾಹಿತ್ಯಾಭಿಮಾನಿಗಳು ಹಾಗೂ ಆಸಕ್ತರು ಭಾಗವಹಿಸಬೇಕೆಂದು ಸಂಘಟಿಕರ ಪರವಾಗಿ ಪ್ರಕಾಶ ಅಸುಂಡಿಯವರು ವಿನಂತಿಸಿದ್ದಾರೆ.



