ಬಿಬಿಎಂಪಿ ಕಾರ್ಯಕ್ಕೆ ಫುಲ್ ಮಾರ್ಕ್ಸ್ ಕೊಟ್ಟ ಟಿಮ್ ಡೇವಿಡ್: RCB ಸ್ಪೋಟಕ ಬ್ಯಾಟರ್ ಹೇಳಿದ್ದೇನು?

0
Spread the love

2025ರ ಐಪಿಎಲ್ ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಭಾಗವಾಗಿರುವ ಟಿಮ್ ಡೇವಿಡ್ ಉತ್ತಮ ಆಟ ಆಡುತ್ತಿದ್ದು, ತಂಡಕ್ಕೆ ಉತ್ತಮ ಫಿನಿಶರ್ ಸಿಕ್ಕಿದ್ದಾರೆ ಎಂದು ಅಭಿಮಾನಿಗಳು ಖುಷ್ ಆಗಿದ್ದಾರೆ. ಆಡಿರುವ 11 ಪಂದ್ಯದಲ್ಲಿ ಒಂದೆರಡು ಪಂದ್ಯ ಬಿಟ್ಟರೆ ಉಳಿದ ಪಂದ್ಯಗಳ ಗೆಲುವಿನಲ್ಲಿ ಟಿಮ್ ಡೇವಿಡ್ ಪ್ರಮುಖ ಪಾತ್ರ ವಹಿಸಿದ್ದಾರೆ. ಏಕೆಂದರೆ ಅದ್ಭುತ ಫಿನಿಶಿಂಗ್ ಕೊಡುತ್ತಿರುವ ಟಿಮ್ ಡೇವಿಡ್ ಅವರು, RCB ಅಭಿಮಾನಿಗಳ ಫೇವರಿಟ್ ವಿದೇಶಿ ಬ್ಯಾಟ್ಸಮನ್ ಆಗಿದ್ದಾರೆ.

Advertisement

ಇಂತಹ ಸ್ಪೋಟಕ ವಿದೇಶಿ ಬ್ಯಾಟರ್ ಟಿಮ್ ಡೇವಿಡ್ ಅವರು, ಇದೀಗ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಕಾರ್ಯವನ್ನು ಶ್ಲಾಘಿಸಿದ್ದಾರೆ. ಎಸ್, ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಬ್ಯಾಟ್ಸ್‌ಮನ್ ಟಿಮ್ ಡೇವಿಡ್, ಆರ್​ಸಿಬಿಯ ಮಿಸ್ಟರ್ ನಾಗ್ಸ್​ ಶೋನಲ್ಲಿ ಮಾತನಾಡಿದ್ದು, ಬೃಹತ್ ಬೆಂಗಳೂರು ಮಹಾನಗರ ಪಾಲಿಗೆಯ ಸಾರ್ವಜನಿಕ ಪಾರ್ಕ್​ನ ಸೌಲಭ್ಯಗಳನ್ನು ಶ್ಲಾಘಿಸಿದ್ದಾರೆ.

ಮೊದಲಿಗೆ ಮಿಸ್ಟರ್ ನಾಗ್ಸ್ ಅವರು, ನೀವು ಈಗ ಸಿಂಗಾಪೂರ್​ನಲ್ಲಿ ಇಲ್ಲ, ಅಲ್ಲಿನ ಯಾವ ಕೆಲಸವನ್ನು ಬೆಂಗಳೂರಿನಲ್ಲಿ ಮಾಡುತ್ತೀರಾ ಎಂದು ಟಿಮ್ ಡೇವಿಡ್ ಗೆ ಪ್ರಶ್ನಿಸಿದ್ದಾರೆ. ಇದಕ್ಕೆ ಉತ್ತರಿಸಿರುವ ಟಿಮ್ ಡೇವಿಡ್, ನಾನು ಸಿಂಗಾಪುರ್​ನಲ್ಲಿದ್ದ ಸಾಕಷ್ಟು ವ್ಯಾಯಾಮಗಳನ್ನು ಮಾಡುತ್ತಿದ್ದೆ. ಇಲ್ಲಿ ಬಂದ ಮೇಲೆ ಆರ್​ಸಿಬಿ ತಂಡದ ಕಂಡೀಷನಿಂಗ್ ತರಬೇತುದಾರ ಬಸು ಶಂಕರ್ ಒಂದು ದಿನ ಬೆಳಿಗ್ಗೆ ನನ್ನನ್ನು ಬಿಬಿಎಂಪಿ ಪಾರ್ಕ್‌ಗೆ ಕರೆದೊಯ್ದಿದ್ದರು. ಈ ವೇಳೆ ನಾನು ಅಲ್ಲಿ ವ್ಯಾಯಾಮ, ವಾಕಿಂಗ್, ಶೋಲ್ಡರ್ ವರ್ಕೌಟ್​ಗಳನ್ನು ಮಾಡಿದ್ದೆ.

ಸಿಂಗಾಪೂರ್​ನಲ್ಲಿ ಇರುವಂತೆ ಬೆಂಗಳೂರಿನಲ್ಲಿಯೂ ಬಿಬಿಎಂಪಿ ಪಾರ್ಕ್​ನಲ್ಲಿ ಓಪನ್ ಜಿಮ್​ಗಳಿವೆ ಎಂದು ಟಿಮ್ ಡೇವಿಡ್ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಸೌಲಭ್ಯಗಳ ಬಗ್ಗೆ ಮಾತನಾಡಿದ್ದಾರೆ. ಈ ವಿಡಿಯೋ ಕ್ಲಿಪ್​ ಅನ್ನು ಬಿಬಿಎಂಪಿಯ ಅಧಿಕೃತ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ.

ಅಂದಹಾಗೆ ಟಿಮ್ ಡೇವಿಡ್ ಮೂಲತಃ ಸಿಂಗಾಪೂರ್​ನವರು ಎನ್ನಲಾಗಿದೆ.


Spread the love

LEAVE A REPLY

Please enter your comment!
Please enter your name here