HomeCrime Newsಭೀಕರವಾದ ಅಪಘಾತ: ಇಬ್ಬರು ಸ್ಥಳದಲ್ಲೇ ಸಾವು, ಓರ್ವನಿಗೆ ಗಂಭೀರ ಗಾಯ..!

ಭೀಕರವಾದ ಅಪಘಾತ: ಇಬ್ಬರು ಸ್ಥಳದಲ್ಲೇ ಸಾವು, ಓರ್ವನಿಗೆ ಗಂಭೀರ ಗಾಯ..!

For Dai;y Updates Join Our whatsapp Group

Spread the love

ದೊಡ್ಡಬಳ್ಳಾಪುರ: ಭೀಕರವಾದ ಅಪಘಾತ ಸಂಭವಿಸಿ ಇಬ್ಬರು ಸವಾರರು ಸ್ಥಳದಲ್ಲೇ ಸಾವನ್ನಪ್ಪಿ, ಓರ್ವನಿಗೆ ಗಂಭೀರವಾಗಿ ಗಾಯಗಳಾಗಿರುವ ಘಟನೆ ದೊಡ್ಡಬಳ್ಳಾಪುರ ತಾಲೂಕಿನ ಗುಂಡಮ್ಮಗೆರೆ ಕ್ರಾಸ್ ಸಮೀಪದ ನೆಲ್ಲುಕುಂಟೆ ಸರ್ಕಲ್ ಬಳಿ ತಡರಾತ್ರಿ ನಡೆದಿದೆ.

ಗುಂಡಮ್ಮಗೆರೆ ಗ್ರಾಮದ ವೆಂಕಟೇಶ್(45), ಶಿವಪುರ ಗ್ರಾಮದ ರಕ್ಷಿತ್ (25) ಮೃತ ದುರ್ದೈವಿಗಳಾಗಿದ್ದು, ಮುತ್ತೂರು ಗ್ರಾಮದ ವೆಂಕಟೇಶ್ (45)ಗೆ ಗಂಭೀರ ಗಾಯಗಳಾಗಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ.

ರಾತ್ರಿ ವೇಳೆ ಒಂದೇ ಬೈಕಿನಲ್ಲಿ‌ ಮೂರು ಜನ ಗುಂಡಮ್ಮಗೆರೆ ಕ್ರಾಸ್ ನಿಂದ ನೆಲ್ಲುಕುಂಟೆ ಕಡೆ ಹೋಗುವಾಗ ಆಯಾತಪ್ಪಿ ಮರಕ್ಕೆ ಡಿಕ್ಕಿ ಹೊಡೆದಿದ್ದು, ಸ್ಥಳದಲ್ಲೇ ಇಬ್ಬರು ಮೃತಪಟ್ಟಿದ್ದಾರೆ ಎಂದು ಮೂಲಗಳಿಂದ ತಿಳಿದುಬಂದಿದೆ. ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.


Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!