ಮತ್ತೆ ಏರಿದ ಚಿನ್ನದ ದರ: ರಾಜ್ಯದ ಪ್ರಮುಖ ನಗರಗಳಲ್ಲಿ ಇಂದಿನ ಬೆಳ್ಳಿ – ಬಂಗಾರ ಬೆಲೆ ಹೀಗಿದೆ!

0
Spread the love

ಬೆಂಗಳೂರು: ಫಳಫಳನೆ ಹೊಳೆಯುವ ಈ ಹಳದಿ ಲೋಹ ಚಿನ್ನ ಆಕರ್ಷಣೆಯ ಕೇಂದ್ರಬಿಂದು ಎಂದೆನಿಸಿದೆ. ಮಹಿಳೆಯರು ಹಾಗೂ ಪುರುಷರಿಗೂ ಚಿನ್ನವೆಂದರೆ ಅಚ್ಚು ಮೆಚ್ಚು ಎನ್ನಬಹುದು. ಯಾವುದೇ ಋತುವಿನಲ್ಲಿ ಚಿನ್ನದ ಖರೀದಿ ಎಂಬುದು ಸಹಜವಾಗಿ ಇದ್ದೆ ಇರುತ್ತದೆ.

Advertisement

ಭಾರತದಂತಹ ದೇಶದಲ್ಲಿ ಹಬ್ಬ ಹರಿದಿನ, ಮದುವೆ ಮತ್ತಿತರ ಶುಭ ಕಾರ್ಯಕ್ರಮಗಳಲ್ಲಿ ಚಿನ್ನದ ಅಂಗಡಿಗಳು ಗ್ರಾಹಕರಿಂದ ಸದಾ ಗಿಜಿಗಿಡುತ್ತಲೇ ಇರುತ್ತದೆ. ಪ್ರಪಂಚದಾದ್ಯಂತ ಚಿನ್ನಕ್ಕೆ ಯಾವಾಗಲೂ ಬೇಡಿಕೆ ಇರುತ್ತದೆ. ಹೂಡಿಕೆಯಲ್ಲಿ ಚಿನ್ನ ಪ್ರಮುಖ ಪಾತ್ರ ವಹಿಸುತ್ತದೆ.

ವಾರಾಂತ್ಯದಲ್ಲಿ ಬೆಲೆ ಏರಿಕೆಯಾಗಿದೆ. ಭಾರತದಲ್ಲಿ ಮಾತ್ರವಲ್ಲ, ಹೆಚ್ಚಿನ ದೇಶಗಳಲ್ಲಿ ಚಿನ್ನದ ಬೆಲೆ ತುಸು ಹೆಚ್ಚಳ ಆಗಿದೆ. ಜಾಗತಿಕ ಮಾರುಕಟ್ಟೆ ವರ್ತನೆಗೆ ಅನುಗುಣವಾಗಿ ಭಾರತದಲ್ಲಿ ಚಿನ್ನ, ಬೆಳ್ಳಿ ಬೆಲೆಗಳಲ್ಲಿ ಬದಲಾವಣೆಗಳಾಗಿವೆ. ಆಭರಣ ಚಿನ್ನದ ಬೆಲೆ 9,015 ರೂ ಇದ್ದದ್ದು 9,045 ರೂಗೆ ಏರಿದೆ. ಹತ್ತು ದಿನಗಳ ಹಿಂದೆ 8,575 ರೂ ಇದ್ದ ಚಿನ್ನದ ಬೆಲೆಯಲ್ಲಿ 470 ರೂನಷ್ಟು ಏರಿಕೆ ಆಗಿದೆ.

ಭಾರತದಲ್ಲಿ ಸದ್ಯ 10 ಗ್ರಾಮ್​ನ 22 ಕ್ಯಾರಟ್ ಚಿನ್ನದ ಬೆಲೆ 90,450 ರುಪಾಯಿ ಇದೆ. 24 ಕ್ಯಾರಟ್​ನ ಅಪರಂಜಿ ಚಿನ್ನದ ಬೆಲೆ 98,680 ರುಪಾಯಿ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 9,900 ರುಪಾಯಿ ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಮ್​ಗೆ 90,450 ರುಪಾಯಿ ಆಗಿದೆ, ಬೆಳ್ಳಿ ಬೆಲೆ 100 ಗ್ರಾಮ್​ಗೆ 9,900 ರುಪಾಯಿಯಲ್ಲಿ ಇದೆ.

ಭಾರತದಲ್ಲಿರುವ ಚಿನ್ನ ಮತ್ತು ಬೆಳ್ಳಿ ಬೆಲೆ (ಮೇ 11ಕ್ಕೆ)

  • 22 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 90,450 ರೂ
  • 24 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 98,680 ರೂ
  • 18 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 74,010 ರೂ
  • ಬೆಳ್ಳಿ ಬೆಲೆ 10 ಗ್ರಾಂಗೆ: 990 ರೂ

ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ

  • 22 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 90,450 ರೂ
  • 24 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 98,680 ರೂ
  • ಬೆಳ್ಳಿ ಬೆಲೆ 10 ಗ್ರಾಂಗೆ: 990 ರೂ

ವಿವಿಧ ನಗರಗಳಲ್ಲಿರುವ 22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಮ್​ಗೆ)

  • ಬೆಂಗಳೂರು: 90,450 ರೂ
  • ಚೆನ್ನೈ: 90,450 ರೂ
  • ಮುಂಬೈ: 90,450 ರೂ
  • ದೆಹಲಿ: 90,600 ರೂ
  • ಕೋಲ್ಕತಾ: 90,450 ರೂ
  • ಕೇರಳ: 90,450 ರೂ
  • ಅಹ್ಮದಾಬಾದ್: 90,500 ರೂ
  • ಜೈಪುರ್: 90,600 ರೂ
  • ಲಕ್ನೋ: 90,600 ರೂ
  • ಭುವನೇಶ್ವರ್: 90,450 ರೂ

 


Spread the love

LEAVE A REPLY

Please enter your comment!
Please enter your name here