ಹೋಟೆಲ್ ಡಿಸ್‌ಪ್ಲೇ ಬೋರ್ಡ್ʼನಲ್ಲಿ ಕನ್ನಡಿಗರ ಬಗ್ಗೆ ಅವಾಚ್ಯ ಪದ: ದೂರು ದಾಖಲು

0
Spread the love

ಬೆಂಗಳೂರು: ಕನ್ನಡ ಕೇವಲ ಒಂದು ಭಾಷೆಯಾಗಿರದೆ, ಒಂದು ಜೀವಂತ ಸಂಸ್ಕೃತಿಯ ಪ್ರತೀಕವಾಗಿದೆ. ಕನ್ನಡಿಗರಿಗೆ ತಮ್ಮ ಭಾಷೆಯ ಮೇಲಿನ ಪ್ರೀತಿಯು ಗಾಢವಾದುದು ಮತ್ತು ಇದಕ್ಕೆ ಯಾವುದೇ ಅವಮಾನವಾದರೆ ಸಹಿಸಿಕೊಳ್ಳಲು ಸಾಧ್ಯವಿಲ್ಲ. ಆದರೆ, ಇತ್ತೀಚಿನ ದಿನಗಳಲ್ಲಿ ಬೆಂಗಳೂರಿನ ಈ ಸಾಮರಸ್ಯದ ಸಂಸ್ಕೃತಿಗೆ ಧಕ್ಕೆ ತರುವ ಘಟನೆಗಳು ದಾಖಲಾಗುತ್ತಿವೆ.

Advertisement

ಇದೀಗ ಮತ್ತೊಮ್ಮೆ ಕನ್ನಡಿಗರಿಗೆ ಅವಮಾನವಾಗಿದೆ. ಹೌದು ಮಡಿವಾಳ ಪೊಲೀಸ್ ಠಾಣೆ ಲಿಮಿಟ್ಸ್ ನಲ್ಲಿ ಬರುವ ಕೋರಮಂಗಲದಲ್ಲಿರುವ ಜಿಎಸ್ ಸೂಟ್ಸ್ ಹೋಟೆಲ್ ಡಿಸ್‌ಪ್ಲೇ ಬೋರ್ಡ್​ನಲ್ಲಿ ಕನ್ನಡಿಗರ ಬಗ್ಗೆ ಆಕ್ಷೇಪಾರ್ಹ ಪದ ಬಳಕೆ ಮಾಡಿ ಅವಮಾನ ಮಾಡಿರು ಘಟನೆ ನಡೆದಿದೆ. ಈ ಬಗ್ಗೆ ಭಾರೀ ವಿರೋಧ ವ್ಯಕ್ತವಾಗಿದೆ.

ಬೋರ್ಡ್ ಮೇಲೆ “KANNAGIDA M***” ಎಂದು ಬರೆಯಲಾಗಿದ್ದು, ಇದು ಅತಿರೇಕದ ವರ್ತನೆಯಂತೆ ಕಂಡಿದೆ. ಡಿಸ್‌ಪ್ಲೇ ಬೋರ್ಡ್ ನಲ್ಲಿ ಕನ್ನಡಿಗರ ಬಗ್ಗೆ ಅವಾಚ್ಯ ಪದಗಳಿಂದ ಅವಹೇಳನ ಮಾಡಲಾಗಿದೆ. ನಿನ್ನೆ ರಾತ್ರಿ ಈ ಬರಹ ಕಂಡುಬಂದಿದೆ. ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿದೆ.

ಈ ಘಟನೆ ಮಡಿವಾಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿರುವ ಹೋಟೆಲ್ ನಲ್ಲಿ ನಡೆದಿದೆ. ಮಾಹಿತಿ ತಿಳಿದು ಸ್ಥಳಕ್ಕೆ ತೆರಳಿದ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಬೋರ್ಡ್​ನಲ್ಲಿ ಬೇಕಂತಲೇ ಈ ರೀತಿ ಬರೆದು ಹಾಕಿದ್ದಾರೆ ಎನ್ನಲಾಗ್ತಿದೆ. ಈ ಕುರಿತು ಪೊಲೀಸರು ಕೂಡ ತನಿಖೆ ನಡೆಸುತ್ತಿದ್ದಾರೆ.


Spread the love

LEAVE A REPLY

Please enter your comment!
Please enter your name here