ತಮಿಳು ಚಿತ್ರರಂಗದ ಖ್ಯಾತ ನಟ ಅಜಿತ್ ಕುಮಾರ್ ಅವರಿಗೆ ಸಿನಿಮಾದ ಜೊತೆಗೆ ರೇಸ್ ಮೇಲೆ ಎಲ್ಲಿಲ್ಲದ ಪ್ರೀತಿ. ಈಗಾಗಲೇ ರೇಸ್ ವೇಳೆ ಹಲವು ಭಾರಿ ಅಪಘಾತಕ್ಕೆ ಒಳಗಾಗಿದ್ದ ನಟ ಇದೀಗ ಮತ್ತೆ ಅಪಘಾತಕ್ಕೀಡಾಗಿದ್ದಾರೆ. ಕಾರ್ ರೇಸ್ ವೇಳೆ ಅಜಿತ್ ಕುಮಾರ್ ಕಾರ್ ಟಯರ್ ಸ್ಫೋಟಗೊಂಡು, ಅಪಘಾತಕ್ಕೀಡಾಗಿದೆ. ನೆದರ್ಲ್ಯಾಂಡ್ನಲ್ಲಿ ನಡೆಯುತ್ತಿರುವ ಯುರೋಪಿಯನ್ ಜಿಟಿ 4 ರೇಸ್ನಲ್ಲಿ ಈ ಅವಘಡ ಸಂಭವಿಸಿದ್ದು ಅಜಿತ್ ಕುಮಾರ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಕಾರಿನ ಟೈರ್ ಸಿಡಿಯುತ್ತಿದ್ದಂತೆ ತಕ್ಷಣ ಟ್ರ್ಯಾಕ್ ನಿಂದ ಹೊರಬಂದು ಕಾರನ್ನು ನಿಧಾನವಾಗಿ ತೆಗೆದುಕೊಂಡು ಹೋಗಿ ಅಜಿತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಟೈರ್ ಸ್ಫೋಟದಿಂದ ಕಾರಿನ ಮುಂಭಾಗವೂ ಹಾನಿಗೊಳಗಾಗಿದ್ದು, ಟೈರ್ ಸ್ಫೋಟಗೊಂಡ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.
ಇನ್ನೂ ಇದೇ ವರ್ಷ ಫೆಬ್ರವರಿಯಲ್ಲಿ ಸ್ಪೇನ್ನಲ್ಲಿ ನಡೆದ ರೇಸ್ನಲ್ಲಿ ನಟ ಅಜಿತ್ ಕುಮಾರ್ ಅವರ ಕಾರು ಅಪಘಾತಕ್ಕೀಡಾಗಿತ್ತು. ಸ್ಪೇನ್ನ ವೇಲೆನ್ಸಿಯಾದಲ್ಲಿ ನಡೆದ ರೇಸ್ನಲ್ಲಿ ಅಜಿತ್ ಭಾಗವಹಿಸಿದ್ದರು. ಈ ವೇಳೆ ಅವರ ಕಾರು ಇನ್ನೊಂದು ಕಾರಿಗೆ ಹಿಂಭಾಗದಿಂದ ಡಿಕ್ಕಿಯಾಗಿ, ಹಲವಾರು ಬಾರಿ ಪಲ್ಟಿಯಾಗಿ ನಿಂತಿತ್ತು. ಈ ಅಪಘಾತದ ವೀಡಿಯೊವನ್ನು ಅಜಿತ್ ಅವರ ವ್ಯವಸ್ಥಾಪಕ ಸುರೇಶ್ ಚಂದ್ರ ಎಕ್ಸ್ನಲ್ಲಿ ಹಂಚಿಕೊಂಡಿದ್ದರು.