ವಿಜಯಸಾಕ್ಷಿ ಸುದ್ದಿ, ಗದಗ: ಈ ವರ್ಷ ಜೂನ್ 25ಕ್ಕೆ ತುರ್ತು ಪರಿಸ್ಥಿತಿ ಘೋಷಣೆಯಾಗಿ 50 ವರ್ಷಗಳು ಗತಿಸಿದ ಪ್ರಯುಕ್ತ ಭಾರತೀಯ ಜನತಾ ಪಾರ್ಟಿ ಗದಗ ಜಿಲ್ಲಾ ಯುವ ಮೋರ್ಚಾ ವತಿಯಿಂದ ಜಿಲ್ಲೆಯ ಮಂಡಲ ಮಟ್ಟದಿಂದ ಆಯ್ಕೆಯಾದ ಯುವಕ ಮತ್ತು ಯುವತಿಯರಿಗೆ ಅಂದಿನ ಕರಾಳ ದಿನಗಳು, ಮಾರಣಾಂತಿಕ ಹಲ್ಲೆ, ಹೋರಾಟ ಮತ್ತು ಸಂವಿಧಾನ ದುರ್ಬಳಕೆಯಾದ ಸಂಗತಿಗಳ ಮಾಹಿತಿಯನ್ನು ನೀಡಲು ಗದಗ ನಗರದ ರಾಜೀವಗಾಂಧಿ ನಗರದಲ್ಲಿರುವ ಡಾ. ಬಿ.ಎಫ್. ದಂಡಿನ ಕಾನೂನು ಕಾಲೇಜಿನ ಆಡಿಟೊರಿಯಂನಲ್ಲಿ ಜೂನ್ 26ರ ಬೆಳಿಗ್ಗೆ 10.30 ಗಂಟೆಗೆ ತುರ್ತು ಪರಿಸ್ಥಿತಿ ಅಣಕು ಸಂಸತ್ತು ಏರ್ಪಡಿಸಲಾಗಿದೆ.
ಕಾರ್ಯಕ್ರಮದಲ್ಲಿ ಶಾಸಕರು, ಮಾಜಿ ಸಚಿವರಾದ ಸಿ.ಸಿ. ಪಾಟೀಲ, ಬಿಜೆಪಿ ಗದಗ ಜಿಲ್ಲಾಧ್ಯಕ್ಷ ತೋಟಪ್ಪ(ರಾಜು) ಕುರುಡಗಿ, ಶಾಸಕ ಡಾ. ಚಂದ್ರು ಲಮಾಣಿ, ಮಾಜಿ ಸಚಿವರಾದ ಕಳಕಪ್ಪ ಬಂಡಿ, ವಿ.ಪ ಸದಸ್ಯ ಎಸ್.ವ್ಹಿ. ಸಂಕನೂರ, ಬಿಜೆಪಿ ಯುವ ಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿ ಸಂದೀಪ್ ರವಿ, ಶ್ರೇಯಸ್ ನಕಾಡೆ, ಅಮರೇಶ ರೈತನಗರ, ಭಾರ್ಗವಿ ದ್ರಾವಿಡ್, ಅಡವಿಸ್ವಾಮಿ, ರವಿ ದಂಡಿನ ಮುಂತಾದವರು ಭಾಗವಹಿಸುವರು ಎಂದು ಬಿಜೆಪಿ ಗದಗ ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷ ಸಂತೋಷ ಅಕ್ಕಿ ತಿಳಿಸಿದರು.
ಈ ಸಂದರ್ಭದಲ್ಲಿ ಬಿಜೆಪಿ ಗದಗ ಜಿಲ್ಲಾಧ್ಯಕ್ಷ ತೋಟಪ್ಪ(ರಾಜು) ಕುರುಡಗಿ, ಪಕ್ಷದ ಪ್ರಮುಖರಾದ ಎಂ.ಎಸ್. ಕರೀಗೌಡ್ರ, ರಾಘವೇಂದ್ರ ಯಳವತ್ತಿ, ಗದಗ ನಗರ ಯುವ ಮೋರ್ಚಾ ಅಧ್ಯಕ್ಷ ನವೀನ ಕೊಟೆಕಲ್, ಪ್ರಧಾನ ಕಾರ್ಯದರ್ಶಿಗಳಾದ ಬಸವರಾಜ ನರೆಗಲ್, ವಿರೇಶಪ್ರಭು ಗದಗಿನ, ಮುಂಡರಗಿ ಯುವ ಮೋರ್ಚಾ ಅಧ್ಯಕ್ಷ ಶಿವಕುಮಾರ ಕುರಿ, ನವೀನ ಕುರ್ತಕೋಟಿ, ಶಶಿಧರಗೌಡ ಕಳ್ಳಿ, ವಿನಾಯಕ ಹೊರಕೇರಿ, ಪ್ರವೀಣ ಹಡಪದ, ರಜತ್ ಬಿಮ್ಕರ, ಸಾಗರ ಪಾಪನಾಳ, ಕಾರ್ತಿಕ ಶಿಗ್ಲಿಮಠ, ಆನಂದ ಗಡಗೇರಿ ಮುಂತಾದವರಿದ್ದರು.



