ಶುಭ ಶುಕ್ರವಾರವೇ ಚಿನ್ನದಂತ ಸುದ್ದಿ.. ಗೋಲ್ಡ್ ದರ ಭರ್ಜರಿ ಇಳಿಕೆ: ಇಲ್ಲಿದೆ ಇಂದಿನ ದರ ಪಟ್ಟಿ!

0
Spread the love

ಗೋಲ್ಡ್ ಪ್ರಿಯರಿಗೆ ಚಿನ್ನದಂತ ಸುದ್ದಿ ಸಿಕ್ಕಿದೆ. ಚಿನ್ನದ ದರ ಭರ್ಜರಿ ಇಳಿಕೆ ಕಂಡಿದ್ದು, ನೀವೇನಾದರೂ ಗೋಲ್ಡ್ ಖರೀದಿಸಬೇಕು ಎಂದುಕೊಂಡಿದ್ರೆ ಶುಭ ಶುಕ್ರವಾರವಾದ ಇಂದೇ ಹೋಗಿ ಖರೀದಿಸಿ. ಎಸ್, ಚಿನ್ನದ ಬೆಲೆ ಮತ್ತೆ ಕುಸಿಯತೊಡಗಿದೆ. ಇಂದು ಆಭರಣ ಚಿನ್ನದ ಬೆಲೆ ಗ್ರಾಮ್​​ಗೆ 85 ರೂ ಇಳಿಕೆ ಕಂಡಿದೆ. ಈ ವಾರದ ಐದು ದಿನದಲ್ಲಿ ನಾಲ್ಕು ದಿನ ಚಿನ್ನದ ಬೆಲೆ ಇಳಿದಿರುವುದು ವಿಶೇಷ. ಅತಿರೇಕಕ್ಕೆ ಹೋಗಿದ್ದ ಅದರ ಬೆಲೆ ಈಗ ಬಹುತೇಕ ಸಹಜ ಸ್ಥಿತಿಗೆ ಮರಳಿದೆ.

Advertisement

ಭಾರತದಲ್ಲಿ ಸದ್ಯ 10 ಗ್ರಾಮ್​ನ 22 ಕ್ಯಾರಟ್ ಚಿನ್ನದ ಬೆಲೆ 89,850 ರುಪಾಯಿ ಇದೆ. 24 ಕ್ಯಾರಟ್​ನ ಅಪರಂಜಿ ಚಿನ್ನದ ಬೆಲೆ 98,020 ರುಪಾಯಿ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 10,800 ರುಪಾಯಿ ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಮ್​ಗೆ 89,850 ರುಪಾಯಿ ಆಗಿದೆ, ಬೆಳ್ಳಿ ಬೆಲೆ 100 ಗ್ರಾಮ್​ಗೆ 10,800 ರುಪಾಯಿಯಲ್ಲಿ ಇದೆ.

ಭಾರತದಲ್ಲಿರುವ ಚಿನ್ನ ಮತ್ತು ಬೆಳ್ಳಿ ಬೆಲೆ (ಜೂನ್ 27ಕ್ಕೆ):-

22 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 89,850 ರೂ.

24 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 98,020 ರೂ.

18 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 73,520 ರೂ.

ಬೆಳ್ಳಿ ಬೆಲೆ 10 ಗ್ರಾಂಗೆ: 1,080 ರೂ.

ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ:-

22 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 89,850 ರೂ.

24 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 98,020 ರೂ.

ಬೆಳ್ಳಿ ಬೆಲೆ 10 ಗ್ರಾಂಗೆ: 1,080 ರೂ.


Spread the love

LEAVE A REPLY

Please enter your comment!
Please enter your name here