ವಿಜಯಸಾಕ್ಷಿ ಸುದ್ದಿ, ಹುಬ್ಬಳ್ಳಿ
ವ್ಯಾಕ್ಸಿನ್ ಪಡೆದುಕೊಂಡವರಲ್ಲಿ ಕರೆಂಟ್ ಉತ್ಪತ್ತಿಯಾಗುತ್ತಿರುವ ವಿಚಿತ್ರ ಘಟನೆ ನಡೆದಿದೆ.
ವ್ಯಾಕ್ಸಿನ್ ಪಡೆದವರ ದೇಹದಲ್ಲಿ ಈ ರೀತಿಯಾಗುತ್ತಿರುವ ವಿಚಿತ್ರ ಘಟನೆ ನಡೆದಿದೆ. ಈ ಅಚ್ಚರಿಯ ಘಟನೆ ನಗರದ ಬಸವೇಶ್ವರ ನಗರದಲ್ಲಿ ನಡೆದಿದೆ. ಕೋವಿಶೀಲ್ಡ್ ಪಡೆದ ಯುವಕ, ಯುವತಿಯ ದೇಹದಲ್ಲಿ ಕರೆಂಟ್ ಉತ್ಪತ್ತಿಯಾಗುತ್ತಿದೆ. ಹೀಗೆ ವ್ಯಾಕ್ಸಿನ್ ಪಡೆದುಕೊಂಡವರಿಂದ ಈ ರೀತಿಯ ವಿಚಿತ್ರ ಘಟನೆ ನಡೆಯುತ್ತಿದೆ. ಇವರಿಬ್ಬರ ದೇಹದಿಂದ 9 ವ್ಯಾಟ್ ನ ಬಲ್ಬ್ ಉರಿಯುತ್ತಿವೆ.
ವ್ಯಾಕ್ಸಿನ್ ಹಾಕಿಸಿಕೊಂಡ ಅಣ್ಣ ಮತ್ತು ತಂಗಿಯ ದೇಹದಲ್ಲಿ ಕರೆಂಟ್ ಕಾಣಿಸಿಕೊಂಡಿದೆ. ವ್ಯಾಕ್ಸಿನ್ ಹಾಕಿದ ತೋಳಿಗೆ ಬಲ್ಬ್ ತಾಗಿಸಿದರೆ ಬಲ್ಬ್ ಉರಿಯುತ್ತಿದೆ. ಸುಮಂತ ಹಾಗೂ ಆತನ ತಂಗಿಯ ದೇಹದಲ್ಲಿ ಕರೆಂಟ್ ಉತ್ಪತ್ತಿಯಾಗುತ್ತಿದೆ. ವ್ಯಾಕ್ಸಿನ ಹಾಕಿಸಿಕೊಂಡ ಕೆಲವೇ ಗಂಟೆಗಳಲ್ಲಿ ಚಮತ್ಕಾರ ನಡೆದಿದೆ.
ಇವರ ದೇಹದಲ್ಲಿ ಕರೆಂಟ್ ಉತ್ಪತ್ತಿಯಾಗುತ್ತಿರುವುದಕ್ಕೆ ಯವುದೇ ವೈಜ್ಞಾನಿಕ ಕಾರಣ ತಿಳಿದು ಬಂದಿಲ್ಲ. ಇದು ಕಾಕತಾಳಿಯ ಇರಬಹುದು ಎಂದು ಹಲವರು ಅಭಿಪ್ರಾಯ ಪಡುತ್ತಿದ್ದಾರೆ. ವೈಜ್ಞಾನಿಕವಾಗಿ ಪರಿಶೀಲನೆ ಮಾಡಿದ ನಂತರವೇ ವಿದ್ಯುತ್ ನ ಉತ್ಪತ್ತಿಯ ಕುರಿತು ಸಂಪೂರ್ಣವಾಗಿ ತಿಳಿದು ಬರಲು ಸಾಧ್ಯ.



