HomeIndia Newsಆಕಾಶ್ ಆನಂದ್ʼಗೆ ಮತ್ತೆ ಶಾಕ್: BSP ಪಕ್ಷದಿಂದ ಸೋದರಳಿಯನನ್ನು 2ನೇ ಬಾರಿಗೆ ಹೊರಹಾಕಿದ ಮಾಯಾವತಿ

ಆಕಾಶ್ ಆನಂದ್ʼಗೆ ಮತ್ತೆ ಶಾಕ್: BSP ಪಕ್ಷದಿಂದ ಸೋದರಳಿಯನನ್ನು 2ನೇ ಬಾರಿಗೆ ಹೊರಹಾಕಿದ ಮಾಯಾವತಿ

For Dai;y Updates Join Our whatsapp Group

ಲಕ್ನೋ: ಬಹುಜನ ಸಮಾಜ ಪಕ್ಷದ (BSP) ಮುಖ್ಯಸ್ಥೆ ಹಾಗೂ ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಮಾಯಾವತಿ ಅವರು ತಮ್ಮ ಸೋದರಳಿಯ ಆಕಾಶ್ ಆನಂದ್ ಅವರನ್ನು ಪಕ್ಷದಿಂದ ಎರಡನೇ ಬಾರಿಗೆ ಹೊರಹಾಕಿದ್ದಾರೆ.

ಕಳೆದ ವಾರವಷ್ಟೇ ಆಕಾಶ್ ಆನಂದ್ ಅವರನ್ನು ಬಿಎಸ್‌ಪಿಯ ರಾಷ್ಟ್ರೀಯ ಸಂಯೋಜಕ ಸ್ಥಾನದಿಂದ ಮಾಯಾವತಿ ತೆಗೆದುಹಾಕಿದ್ದರು. ಇದೀಗ ಪಕ್ಷದಿಂದಲೂ ವಜಾಗೊಳಿಸಿರುವುದಾಗಿ ಘೋಷಿಸಿದ್ದಾರೆ.

ಆಕಾಶ್ ಆನಂದ್ ಅವರಿಗೆ ಇನ್ನಷ್ಟು ರಾಜಕೀಯ ಪ್ರಬುದ್ಧತೆ ಹಾಗೂ ಅನುಭವದ ಅಗತ್ಯವಿದೆ. ಈ ಹಂತದಲ್ಲಿ ಅವರಿಗೆ ಪಕ್ಷದ ಪ್ರಮುಖ ಜವಾಬ್ದಾರಿಗಳನ್ನು ವಹಿಸುವುದು ಸೂಕ್ತವಲ್ಲ ಎಂದು ಮಾಯಾವತಿ ಕಳೆದ ವಾರ ಹೇಳಿದ್ದರು.

ಇದೇ ವೇಳೆ, ತಮ್ಮ ಕಿರಿಯ ಸೋದರಳಿಯ ಇಶಾನ್ ಆನಂದ್ ಅವರನ್ನು ಪಕ್ಷದ ಪ್ರಮುಖ ನಾಯಕರಿಗೆ ಮಾಯಾವತಿ ಪರಿಚಯಿಸಿದ್ದರು. ಈ ಬೆಳವಣಿಗೆಯ ನಡುವೆಯೇ ಆಕಾಶ್ ಆನಂದ್ ಅವರ ರಾಜಕೀಯ ಭವಿಷ್ಯದ ಕುರಿತು ಹಲವು ಚರ್ಚೆಗಳು ಆರಂಭವಾಗಿವೆ.

2024ರ ಮೇ ತಿಂಗಳಲ್ಲಿ ಲೋಕಸಭಾ ಚುನಾವಣಾ ಪ್ರಚಾರದ ಸಂದರ್ಭದಲ್ಲಿ ಮಾಯಾವತಿ ಅವರು ಆಕಾಶ್ ಆನಂದ್ ಅವರನ್ನು ಬಿಎಸ್‌ಪಿಯ ರಾಷ್ಟ್ರೀಯ ಸಂಯೋಜಕ ಸ್ಥಾನದಿಂದ ತೆಗೆದುಹಾಕಿದ್ದರು. ಅಲ್ಲದೆ, ಇನ್ನು ಮುಂದೆ ಆಕಾಶ್ ಆನಂದ್ ಅವರು ತಮ್ಮ ಉತ್ತರಾಧಿಕಾರಿಯಾಗಿರುವುದಿಲ್ಲ ಎಂದು ಘೋಷಿಸಿದ್ದರು.

ಆದರೆ 2024ರ ಆಗಸ್ಟ್‌ನಲ್ಲಿ ಮಾಯಾವತಿ ಅವರು ಆಕಾಶ್ ಆನಂದ್ ಅವರನ್ನು ಮತ್ತೆ ಪಕ್ಷದ ರಾಷ್ಟ್ರೀಯ ಸಂಯೋಜಕರನ್ನಾಗಿ ನೇಮಿಸಿದ್ದರು. ಬಳಿಕ ಹರಿಯಾಣ, ಮಹಾರಾಷ್ಟ್ರ, ಜಾರ್ಖಂಡ್ ಹಾಗೂ ದೆಹಲಿಯಲ್ಲಿ ನಡೆದ ವಿಧಾನಸಭಾ ಚುನಾವಣೆಗಳ ಪ್ರಚಾರವನ್ನು ಮುನ್ನಡೆಸುವ ಜವಾಬ್ದಾರಿಯನ್ನೂ ಅವರಿಗೆ ನೀಡಲಾಗಿತ್ತು.

ಇದೀಗ ಮತ್ತೆ ಆಕಾಶ್ ಆನಂದ್ ಅವರನ್ನು ಪಕ್ಷದಿಂದಲೇ ಹೊರಹಾಕಿರುವ ಮಾಯಾವತಿ ಅವರ ನಿರ್ಧಾರ ಬಿಎಸ್‌ಪಿಯೊಳಗಿನ ರಾಜಕೀಯದಲ್ಲಿ ಮಹತ್ವದ ಬೆಳವಣಿಗೆಯಾಗಿ ಪರಿಣಮಿಸಿದೆ.

Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img