• About
  • Advertise
  • Privacy & Policy
  • Contact
Thursday, October 29, 2026
Vijaya Sakshi News
Advertisement
  • Home
  • Gadag News
  • Dharwad
  • Crime News
  • Entertainment
  • Districts
    • Bagalkot
    • Belgaum
    • Bellary
    • Bengaluru City
    • Bengaluru News
    • Bengaluru Rural
    • Bidar
    • Chamarajanagar
    • Chikkaballapur
    • Chikkamagaluru
    • Chitradurga
    • Davanagere
    • Hassan
    • Haveri
    • hubballi
    • Kalaburagi
    • Kodagu
  • E Paper
No Result
View All Result
  • Home
  • Gadag News
  • Dharwad
  • Crime News
  • Entertainment
  • Districts
    • Bagalkot
    • Belgaum
    • Bellary
    • Bengaluru City
    • Bengaluru News
    • Bengaluru Rural
    • Bidar
    • Chamarajanagar
    • Chikkaballapur
    • Chikkamagaluru
    • Chitradurga
    • Davanagere
    • Hassan
    • Haveri
    • hubballi
    • Kalaburagi
    • Kodagu
  • E Paper
No Result
View All Result
Vijaya Sakshi News
  • Home
  • Gadag News
  • Karnataka News
  • Crime News
  • Politics News
  • Bengaluru News
  • Entertainment
  • Life Style
  • Sports News
Home Gadag News

ಜು.19ರಂದು ರಕ್ತ ಸಂಗ್ರಹಣಾ ಘಟಕದ ಕಾರ್ಯಾರಂಭ

Vijaya Sakshi News Desk by Vijaya Sakshi News Desk
July 17, 2025
in Gadag News, Uncategorized
ಜು.19ರಂದು ರಕ್ತ ಸಂಗ್ರಹಣಾ ಘಟಕದ ಕಾರ್ಯಾರಂಭ
0
SHARES
2
VIEWS
Share on Facebook

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಪಟ್ಟಣದ ಸಮುದಾಯ ಅರೋಗ್ಯ ಕೇಂದ್ರದಲ್ಲಿ ಜು.19ರಂದು ರಕ್ತ ಸಂಗ್ರಹಣಾ ಘಟಕ ಕಾರ್ಯಾರಂಭಗೊಳ್ಳಲಿದೆ. ಕಳೆದ 10 ವರ್ಷಗಳ ಹಿಂದೆ ಕಾರ್ಯಾರಂಭವಾಬೇಕಿದ್ದ ರಕ್ತ ಸಂಗ್ರಹಣಾ ಘಟಕ ಅನೇಕ ಕಾರಣಗಳಿಂದ ನೆನೆಗುದಿಗೆ ಬಿದ್ದಿತ್ತು.

ಲಕ್ಷ್ಮೇಶ್ವರ ಸೇರಿ ನೆರೆಯ ಸವಣೂರ, ಶಿಗ್ಗಾಂವ, ಕುಂದಗೋಳ, ಶಿರಹಟ್ಟಿ ತಾಲೂಕಿನಿಂದ ನಿತ್ಯ ನೂರಾರು ರೋಗಿಗಳು ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರಕ್ಕೆ ಚಿಕಿತ್ಸೆಗೆ ಬರುತ್ತಾರೆ. ಕೈಗಾ-ಇಳಕಲ್, ಕಲ್ಮಲಾ-ಶಿಗ್ಗಾಂವ, ಮಂಗಸೂಳಿ- ಲಕ್ಷ್ಮೇಶ್ವರ ರಾಜ್ಯ ಹೆದ್ದಾರಿಗೆ ಹೊಂದಿಕೊಂಡಿರುವ ಈ ಆಸ್ಪತ್ರೆಯ ವ್ಯಾಪ್ತಿಯಲ್ಲಿ ನಿತ್ಯವೂ ಅಪಘಾತ ಪ್ರಕರಣಗಳು ನಡೆದ ಸಂದರ್ಭದಲ್ಲಿ ರಕ್ತದ ಅವಶ್ಯಕತೆ ಸಾಕಷ್ಟಿರುತ್ತದೆ. ಅಲ್ಲದೇ ಪ್ರತಿ ತಿಂಗಳು ಕನಿಷ್ಠ 50ಕ್ಕೂ ಹೆಚ್ಚು ಹೆರಿಗೆಗಳಾಗುತ್ತವೆ. ಮೂಲವ್ಯಾಧಿ, ಗಂಟುರೋಗ, ಹರ್ನಿಯಾ ಇತರೇ ಸಣ್ಣಪುಟ್ಟ ಶಸ್ತ್ರ ಚಿಕಿತ್ಸೆಗಳು ನಡೆಯುತ್ತಿರುತ್ತವೆ.

ಪಟ್ಟಣ ಸೇರಿ ಸುತ್ತಲಿನ ತಾಲೂಕಿನಿಂದ ಹತ್ತಾರು ಖಾಸಗಿ ಆಸತ್ರೆಗಳಲ್ಲಿ ಚಿಕಿತ್ಸೆಗೊಳಪಡುವ ರೋಗಿಗಳಿಗೆ ಈ ಬ್ಲಡ್ ಬ್ಯಾಂಕ್‌ನಿಂದ ಸಾಕಷ್ಟು ಉಪಯೋಗವಾಗಲಿದೆ. ಅಗತ್ಯ, ತುರ್ತು ಸಂದರ್ಭದಲ್ಲಿ ರೋಗಿಗಳೊಂದಿಗೆ ಹುಬ್ಬಳ್ಳಿ, ಗದುಗಿಗೆ ಹೋಗಲೇಬೇಕಾದ ಅನಿವಾರ್ಯತೆ ಇತ್ತು. ಅನೇಕ ಸಲ ತುರ್ತು ರಕ್ತ ಸಿಗದೇ ಜೀವ ಹೋದ ಸಂದರ್ಭಗಳೂ ಇವೆ. ಈ ಭಾಗದ ಜನರಿಂದ ಬ್ಲಡ್ ಬ್ಯಾಂಕ್ ಪ್ರಾರಂಭದ ಬಗ್ಗೆ ಬೇಡಿಕೆ ಇತ್ತು. ಇದೀಗ ಇದೇ ಆಸ್ಪತ್ರೆಯಲ್ಲಿ ವೈದ್ಯರಾಗಿ ಸೇವೆ ಸಲ್ಲಿಸಿದ ಶಾಸಕ ಡಾ. ಚಂದ್ರು ಲಮಾಣಿ ಅವರ ಪ್ರಯತ್ನ ಮತ್ತು ವೈದ್ಯಾಧಿಕಾರಿ ಡಾ. ಶ್ರೀಕಾಂತ ಕಾಟೇವಾಲೆ ಅವರ ಇಚ್ಛಾಶಕ್ತಿಯಿಂದ ಜನೋಪಯೋಗಕ್ಕೆ ಅಣಿಯಾಗುತ್ತಿದೆ.

ಜಿಲ್ಲೆಯ ಕೆಲ ತಾಲೂಕು ಆಸ್ಪತ್ರೆಗಳಲ್ಲಿಯೂ ಬ್ಲಡ್ ಬ್ಯಾಂಕ್ ಕಾರ್ಯಾರಂಭ ಮಾಡುತ್ತಿಲ್ಲ. ಆದರೆ ಲಕ್ಷ್ಮೇಶ್ವರದ ಸಮುದಾಯದ ಅರೋಗ್ಯ ಕೇಂದ್ರದಲ್ಲಿ 50 ಯೂನಿಟ್ ಸಾಮರ್ಥ್ಯದ, ಆಧುನಿಕ ತಂತ್ರಜ್ಞಾನದ ಜೀವ ರಕ್ಷಕ ರಕ್ತ ಸಂಗ್ರಹಣಾ ಘಟಕ ಪ್ರಾರಂಭಗೊಳ್ಳುತ್ತಿರುವುದು ಸಾರ್ವಜನಿಕರಲ್ಲಿ ನೆಮ್ಮದಿ ಮೂಡಿಸಿದೆ. ತಪಾಸಣೆ ಘಟಕ ಯಂತ್ರ, ಇನ್ಕ್ಯೂಬೇಟರ್, ಮೈಕ್ರೋಸ್ಕೋಪ್, ಸೆಂಟರ್ ಫ್ಯೂಸ್ ಸೇರಿ ಪೂಕರ ಉಪಕರಣಗಳು ಲಭ್ಯವಿದೆ. ಜನರೇಟರ್, ಸೋಲಾರ್ ವ್ಯವಸ್ಥೆಯೂ ಇದಕ್ಕಿದೆ. ಇದಕ್ಕಾಗಿ ವೈಧ್ಯಾಧಿಕಾರಿ ಡಾ. ಶ್ರೀಕಾಂತ ಕಾಟೇವಾಲೆ ವಿಶೇಷ ತರಬೇತಿ ಪಡೆದಿದ್ದಾರೆ. ನುರಿತ ಲ್ಯಾಬ್ ಟೆಕ್ನಿಷಿಯನ್ ವಿಜಯ ಮಾಂಡ್ರೆ ಹಲವು ವರ್ಷದಿಂದ ಇದೇ ಆಸ್ಪತ್ರೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ಸರ್ಕಾರಿ ಆಸ್ಪತ್ರೆ ಅಷ್ಟೇ ಅಲ್ಲದೇ ನಮ್ಮ ಭಾಗದ ಖಾಸಗಿ ಆಸ್ಪತ್ರೆಗಳಲ್ಲಿ ನಡೆಯುವ ಹೆರಿಗೆ, ಅಪಘಾತ, ಶಸ್ತ್ರಚಿಕಿತ್ಸೆಯಂತಹ ಅನೇಕ ಸಂದರ್ಭಗಳಲ್ಲಿ ರಕ್ತದ ಅವಶ್ಯಕತೆ ಸಾಕಷ್ಟಿದೆ. ತುರ್ತು ಸಂದರ್ಭದಲ್ಲಿ ಕಿಮ್ಸ್ ಮತ್ತು ಜಿಮ್ಸ್ ಗೆ ಕಳುಹಿಸಲೇಬೇಕಾಗಿತ್ತು. ಇದೀಗ ನಮ್ಮ ಆಸ್ಪತ್ರೆಯಲ್ಲಿ ರಕ್ತ ಸಂಗ್ರಹಣಾ ಘಟಕ ಪ್ರಾರಂಭಗೊಳ್ಳುತ್ತಿರುವುದರಿಂದ ರೋಗಿಗಳಿಗೆ ಅನಕೂಲವಾಗಿದೆ. ರಕ್ತ ಸಂಗ್ರಹಣಾ ಘಟಕದ ಉದ್ಘಾಟನೆಯ ದಿನ ಆಸ್ಪತ್ರೆಯಲ್ಲಿಯೇ ಪತ್ರಕರ್ತರ ಸಂಘದಿಂದ ರಕ್ತದಾನ ಶಿಬಿರ ಹಮ್ಮಿಕೊಂಡಿರುವುದು ಸಂತಸ ತಂದಿದೆ.

– ಡಾ. ಶ್ರೀಕಾಂತ ಕಾಟೇವಾಲೆ.

ಸಮುದಾಯ ಆರೋಗ್ಯ ಕೇಂದ್ರದ ಆಡಳಿತಾಧಿಕಾರಿ.

Tags: blood bankBreakingNewsKarnatakaVijayasakshivijayasakshinews
ShareSendShare
Previous Post

ಅಪರ ಆಯುಕ್ತರಾಗಿ ಡಾ.ಈಶ್ವರ ಉಳ್ಳಾಗಡ್ಡಿ ವರ್ಗಾವಣೆ

Next Post

ಭೀಕರ ಮಳೆಗೆ ಜಲಸ್ಫೋಟ ಸಂಭವಿಸಿ ಗುಡ್ಡ ಕುಸಿತ: ಅಪಾಯದಲ್ಲಿ ಹಲವು ಮನೆಗಳು!

Vijaya Sakshi News Desk

Vijaya Sakshi News Desk

Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

Next Post
ಭೀಕರ ಮಳೆಗೆ ಜಲಸ್ಫೋಟ ಸಂಭವಿಸಿ ಗುಡ್ಡ ಕುಸಿತ: ಅಪಾಯದಲ್ಲಿ ಹಲವು ಮನೆಗಳು!

ಭೀಕರ ಮಳೆಗೆ ಜಲಸ್ಫೋಟ ಸಂಭವಿಸಿ ಗುಡ್ಡ ಕುಸಿತ: ಅಪಾಯದಲ್ಲಿ ಹಲವು ಮನೆಗಳು!

Stay Connected test

  • 24k Followers
  • 99 Subscribers
  • Trending
  • Comments
  • Latest

ಪೊಲೀಸ್ ವೇಷದಲ್ಲಿ ಅಮಾಯಕರಿಗೆ ಬೆದರಿಕೆ: ಸಂಜಯ ಕೊಪ್ಪದ ಬಂಧನಕ್ಕೆ ಸರ್ಕಾರದ ಮುದ್ರೆ

October 24, 2026
ಧಾರಾಕಾರ ಮಳೆಗೆ ತತ್ತರಿಸಿದ ಗದಗ: ಸಿಡಿಲು ಬಡಿದು ಕುರಿಗಾಯಿ ಸಾವು, 5 ಆಡುಗಳು ಬಲಿ

ಧಾರಾಕಾರ ಮಳೆಗೆ ತತ್ತರಿಸಿದ ಗದಗ: ಸಿಡಿಲು ಬಡಿದು ಕುರಿಗಾಯಿ ಸಾವು, 5 ಆಡುಗಳು ಬಲಿ

October 23, 2026
Crime News: ಅರಣ್ಯ ಇಲಾಖೆ ನೌಕರ ವಿಠಲ್ ಜೋನಿ ಆತ್ಮಹತ್ಯೆ: ಕಾರಣ ನಿಗೂಢ

Crime News: ಅರಣ್ಯ ಇಲಾಖೆ ನೌಕರ ವಿಠಲ್ ಜೋನಿ ಆತ್ಮಹತ್ಯೆ: ಕಾರಣ ನಿಗೂಢ

October 25, 2026
ಗದಗದಲ್ಲಿ ಜೆಸಿಬಿ ಘರ್ಜನೆ: ಹೆದ್ದಾರಿ ಪಕ್ಕದಲ್ಲಿ ನಿರ್ಮಿಸಿದ್ದ ಬಡವರ ಅಂಗಡಿಗಳು ನೆಲಸಮ, ಅಪಘಾತಗಳ ಆತಂಕಕ್ಕೆ ಬ್ರೇಕ್‌!

ಗದಗದಲ್ಲಿ ಜೆಸಿಬಿ ಘರ್ಜನೆ: ಹೆದ್ದಾರಿ ಪಕ್ಕದಲ್ಲಿ ನಿರ್ಮಿಸಿದ್ದ ಬಡವರ ಅಂಗಡಿಗಳು ನೆಲಸಮ, ಅಪಘಾತಗಳ ಆತಂಕಕ್ಕೆ ಬ್ರೇಕ್‌!

October 23, 2026
Single Post Template – Fast News

ದೇವಸ್ಥಾನದಲ್ಲಿ 3 ಕೊಲೆ: ಹುಂಡಿಗಳ್ಳರ ಅಮಾನುಷ ಕೃತ್ಯ

0
Single Post Template – Fast News

ಕೋಡಿಹಳ್ಳಿಯವರಿಗೆ ಇಷ್ಟೊಂದು ಅಜ್ಞಾನ ಇದೆ ಅಂತ ಗೊತ್ತಿರಲಿಲ್ಲ: ಬಿ.ಸಿ.ಪಾಟೀಲ

0
Single Post Template – Fast News

ಕತ್ತಲಲ್ಲಿ ಕ್ವಾರಂಟೈನ್ ಸೆಂಟರ್; ಪರದಾಡಿದ ಕೊವಿಡ್ ರೋಗಿಗಳು!

0
Single Post Template – Fast News

ನಗರಸಭೆ ಆಯುಕ್ತರ ಕುರ್ಚಿ ಮಾರಾಟವಾಯ್ತೆ?
ಉಸ್ತುವಾರಿ ಸಚಿವರು ತಮ್ಮ ಹಠ ಸಾಧಿಸಿಯೇ ಬಿಟ್ಟರೆ?

0
ಧಾರವಾಡ SDA ಸಾವಿನ ಪ್ರಕರಣಕ್ಕೆ ಸ್ಫೋಟಕ ತಿರುವು: ₹4 ಕೋಟಿ ನೌಕರಿ ಹಗರಣದ ಸುಳಿವು, ಮೃತನ ಬ್ಯಾಗ್ ನಲ್ಲಿ 70 ಚೆಕ್ʼಗಳು, ಡೆತ್ ನೋಟ್ ಪತ್ತೆ!

ಧಾರವಾಡ SDA ಸಾವಿನ ಪ್ರಕರಣಕ್ಕೆ ಸ್ಫೋಟಕ ತಿರುವು: ₹4 ಕೋಟಿ ನೌಕರಿ ಹಗರಣದ ಸುಳಿವು, ಮೃತನ ಬ್ಯಾಗ್ ನಲ್ಲಿ 70 ಚೆಕ್ʼಗಳು, ಡೆತ್ ನೋಟ್ ಪತ್ತೆ!

October 29, 2026
KPSC ಹಗರಣದ ತನಿಖೆಯಲ್ಲಿ ಬಿಗ್ ಟ್ವಿಸ್ಟ್: ಒಂದೇ ವರ್ಷದಲ್ಲಿ ₹10 ಕೋಟಿಗೂ ಅಧಿಕ ವ್ಯವಹಾರ ನಡೆಸಿದ ಶಿವಶಂಕರಪ್ಪ?

KPSC ಹಗರಣದ ತನಿಖೆಯಲ್ಲಿ ಬಿಗ್ ಟ್ವಿಸ್ಟ್: ಒಂದೇ ವರ್ಷದಲ್ಲಿ ₹10 ಕೋಟಿಗೂ ಅಧಿಕ ವ್ಯವಹಾರ ನಡೆಸಿದ ಶಿವಶಂಕರಪ್ಪ?

October 29, 2026
ಕಾಲೇಜು ಮುಗಿಸಿ ಕೆರೆಯಲ್ಲಿ ಈಜಲು ಹೋದ ಇಬ್ಬರು ವಿದ್ಯಾರ್ಥಿಗಳು ನೀರುಪಾಲು!

ಕಾಲೇಜು ಮುಗಿಸಿ ಕೆರೆಯಲ್ಲಿ ಈಜಲು ಹೋದ ಇಬ್ಬರು ವಿದ್ಯಾರ್ಥಿಗಳು ನೀರುಪಾಲು!

October 29, 2026
ನಟ ಧನ್ವೀರ್‌ಗೆ ಮತ್ತಷ್ಟು ಸಂಕಷ್ಟ: ಎರಡು ಠಾಣೆಗಳಲ್ಲಿ ಎಫ್‌ಐಆರ್ ದಾಖಲು!

ನಟ ಧನ್ವೀರ್‌ಗೆ ಮತ್ತಷ್ಟು ಸಂಕಷ್ಟ: ಎರಡು ಠಾಣೆಗಳಲ್ಲಿ ಎಫ್‌ಐಆರ್ ದಾಖಲು!

October 29, 2026

Recent News

We bring you the best Premium WordPress Themes that perfect for news, magazine, personal blog, etc. Check our landing page for details.

Browse by Category

Recent News

ಧಾರವಾಡ SDA ಸಾವಿನ ಪ್ರಕರಣಕ್ಕೆ ಸ್ಫೋಟಕ ತಿರುವು: ₹4 ಕೋಟಿ ನೌಕರಿ ಹಗರಣದ ಸುಳಿವು, ಮೃತನ ಬ್ಯಾಗ್ ನಲ್ಲಿ 70 ಚೆಕ್ʼಗಳು, ಡೆತ್ ನೋಟ್ ಪತ್ತೆ!

ಧಾರವಾಡ SDA ಸಾವಿನ ಪ್ರಕರಣಕ್ಕೆ ಸ್ಫೋಟಕ ತಿರುವು: ₹4 ಕೋಟಿ ನೌಕರಿ ಹಗರಣದ ಸುಳಿವು, ಮೃತನ ಬ್ಯಾಗ್ ನಲ್ಲಿ 70 ಚೆಕ್ʼಗಳು, ಡೆತ್ ನೋಟ್ ಪತ್ತೆ!

October 29, 2026
KPSC ಹಗರಣದ ತನಿಖೆಯಲ್ಲಿ ಬಿಗ್ ಟ್ವಿಸ್ಟ್: ಒಂದೇ ವರ್ಷದಲ್ಲಿ ₹10 ಕೋಟಿಗೂ ಅಧಿಕ ವ್ಯವಹಾರ ನಡೆಸಿದ ಶಿವಶಂಕರಪ್ಪ?

KPSC ಹಗರಣದ ತನಿಖೆಯಲ್ಲಿ ಬಿಗ್ ಟ್ವಿಸ್ಟ್: ಒಂದೇ ವರ್ಷದಲ್ಲಿ ₹10 ಕೋಟಿಗೂ ಅಧಿಕ ವ್ಯವಹಾರ ನಡೆಸಿದ ಶಿವಶಂಕರಪ್ಪ?

October 29, 2026
  • About
  • Advertise
  • Privacy & Policy
  • Contact

Vijaya Sakshi 2026 CREATED BY Kalahamsa Infotech. PREMIUM WEBSITE SOLUTIONS.

error: Content is protected !!
Join WhatsApp ▤ Read E-Paper