ವಿಜಯಸಾಕ್ಷಿ ಸುದ್ದಿ, ಶಿರಹಟ್ಟಿ: ಆಗಸ್ಟ್ 13ರಂದು ಬೆಳ್ಳಟ್ಟಿಯಲ್ಲಿ ಕೂಡಲ ಸಂಗಮದ ವೀರಶೈವ ಲಿಂಗಾಯತ ಪಂಚಮಸಾಲಿ ಪೀಠದ ಪ್ರಥಮ ಜಗದ್ಗುರು ಜಯಮೃತ್ಯುಂಜಯ ಸ್ವಾಮೀಜಿ ಅವರಿಂದ ನಡೆಯುವ ಶ್ರಾವಣ ಮಾಸದ ವಿಶೇಷ ಇಷ್ಟಲಿಂಗ ಪೂಜೆ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಶಿರಹಟ್ಟಿ ತಾಲೂಕಾ ಪಂಚಮಸಾಲಿ ಸಂಘದ ತಾಲೂಕಾಧ್ಯಕ್ಷ ಬಿ.ಡಿ. ಪಲ್ಲೇದ ಹೇಳಿದರು.
ಅವರು ರವಿವಾರ ಶಿರಹಟ್ಟಿಯ ಪ್ರವಾಸಿಮಂದಿರದಲ್ಲಿ ನಡೆದ ಕಾರ್ಯಕ್ರಮದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಆ.12ರಂದು ಶಿರಹಟ್ಟಿಯಲ್ಲಿ ಅಶೋಕ ವರವಿ ಇವರ ಮಹಾಮನೆಯಲ್ಲಿ ಶ್ರೀಗಳು ವಾಸ್ತವ್ಯ ಹೂಡುವರು. ಆ.13ರ ಬೆಳಗಿನ ಜಾವ ಬೆಳ್ಳಟ್ಟಿಯ ಕೊಟ್ರೇಶ ಅಕ್ಕೂರ ಇವರ ಮಹಾಮನೆಯಲ್ಲಿ ಇಷ್ಟಲಿಂಗ ಪೂಜೆ ನೆರವೇರಿಸಿ, 10 ಗಂಟೆ ಸುಮಾರಿಗೆ ನಂದಿಧ್ವಜ, ಸಮ್ಮಾಳ, ಕುಂಭಮೇಳ ಹಾಗೂ ಸಕಲ ವಾದ್ಯಗೋಷ್ಠಿಗಳೊಂದಿಗೆ, ಭವ್ಯ ಮೆರವಣಿಗೆಯೊಂದಿಗೆ ಶ್ರೀಗಳನ್ನು ಎಪಿಎಂಸಿ ಸಭಾಭವನಕ್ಕೆ ಕರೆತಂದು ಅಲ್ಲಿ ಬೃಹತ್ ಇಷ್ಟಲಿಂಗ ಪೂಜೆಯ ನೇತೃತ್ವವನ್ನು ವಹಿಸಲಿದ್ದಾರೆ. ಈ ಕಾರ್ಯಕ್ರಮದಲ್ಲಿ ಸಮಾಜ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು.
ತಾಲೂಕಾ ಕಮಿಟಿಗೆ ಉಪಾಧ್ಯಕ್ಷರಾಗಿ ಚಂದ್ರು ಕೂಸ್ಲಾಪೂರ, ಸದಸ್ಯರಾಗಿ ಮಹೇಶ ವರವಿ, ಶಿವಪುತ್ರಪ್ಪ ನೆಲಗುಡ್ಡದ, ಶ್ರೀಕಾಂತ ಯಲಿಶಿರುಂದ, ತಾಲೂಕಾ ಮಹಿಳಾ ಘಟಕದ ಅಧ್ಯಕ್ಷೆಯಾಗಿ ನಂದಾ ಪ್ರಕಾಶ ಪಲ್ಲೇದ, ಯುವಘಟಕದ ಅಧ್ಯಕ್ಷರಾಗಿ ವಿಶ್ವನಾಥ ದಲಾಲಿ, ಕಾರ್ಯದರ್ಶಿಯಾಗಿ ನಾಗರಾಜ ಗಡ್ಡಿ, ರೈತ ಘಟಕದ ಅಧ್ಯಕ್ಷರಾಗಿ ವಸಂತಗೌಡ ಪಾಟೀಲ ಇವರುಗಳನ್ನು ಆಯ್ಕೆ ಮಾಡಲಾಗಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಕೊಟ್ರೇಶ ಅಕ್ಕೂರ, ಬಸವರಾಜ ಸಾಲಿ, ಅಶೋಕ ಬಳ್ಳಾರಿ, ಕಾಶಣ್ಣ ಗಿಡ್ಡವೀರಪ್ಪನವರ, ಅಶೋಕ ವರವಿ, ಶೇಖರ ಹುಡೇದ, ಚನ್ನಬಸವನಗೌಡ ಪಾಟೀಲ, ಸುರೇಶ ವರವಿ, ಬಸವರಾಜ ಕಲ್ಯಾಣಿ, ಫಕ್ಕೀರೇಶ ಕಲ್ಯಾಣಿ, ಶ್ರೀಕಾಂತ ಯಲಿಶಿರುಂದ, ಶಿವಪುತ್ರಪ್ಪ ನೆಲಗುಡ್ಡದ, ಚನ್ನಪ್ಪ ಕೊಡ್ಲಿವಾಡ, ದೇವರಾಜ ಮೇಟಿ, ಎಸ್.ಎಸ್. ಪಾಟೀಲ, ಸಿ.ಆರ್. ಪಾಟೀಲ, ಬಸವನಗೌಡ ಪಾಟೀಲ, ನಾಗರಾಜ ಗಡ್ಡಿ, ಚನ್ನವೀರಗೌಡ ತೆಗ್ಗಿನಮನಿ ಮುಂತಾದವರು ಉಪಸ್ಥಿತರಿದ್ದರು.



