ಗದಗ: ಸ್ವಾತಂತ್ರ್ಯೋತ್ಸವದ ಹಿನ್ನೆಲೆಯಲ್ಲಿ ಹಮ್ಮಿಕೊಂಡಿರುವ ಹರ್ ಘರ್ ತಿರಂಗಾ ಅಭಿಯಾನದಲ್ಲಿ ಸಂಸದ ಬಸವರಾಜ ಬೊಮ್ಮಾಯಿ ಅಭಿಮಾನಿ ಬಳಗದಿಂದ ಗುರುವಾರ ಪಟ್ಟಣದಲ್ಲಿ ಸ್ವಾತಂತ್ರ್ಯ ಹೋರಾಟಗಾರ ಸಂಗೊಳ್ಳಿ ರಾಯಣ್ಣನ ಮೂರ್ತಿಗೆ ಮಾಲಾರ್ಪಣೆ ಸಲ್ಲಿಸುವ ಮೂಲಕ ಜನರಿಗೆ ತ್ರಿವರ್ಣ ಧ್ವಜ ನೀಡಿ ಮನೆಗಳ ಮೇಲೆ ಹಾರಿಸುವಂತೆ ಸೂಚಿಸಲಾಯಿತು. ಈ ವೇಳೆ ಮಂಜುನಾಥ ಮಾಗಡಿ, ಹೊನ್ನಪ್ಪ ವಡ್ಡರ, ಸುರೇಶ ಹಟ್ಟಿ, ನಾಗರಾಜ ಚಿಂಚಲಿ, ಮಂಜು ಮುಳಗುಂದ, ಬಸವರಾಜ ಜಾಲಗಾರ, ಭರಮಣ್ಣ ಶರಸೂರಿ, ನಾಗಯ್ಯ ಮಠಪತಿ, ಪವನ ಬಂಕಾಪುರ, ರಮೇಶ ಶಿರಬಡಗಿ, ಸಾಗರ ಕಲಾಲ್, ಮುತ್ತು ಕರ್ಜೆಕಣ್ಣವರ, ಸಿದ್ದಪ್ಪ ನೆನಗನಹಳ್ಳಿ, ನಿಂಗಪ್ಪ ಪ್ಯಾಟಿ ಮುಂತಾದವರಿದ್ದರು.



