ಶಿಕ್ಷಣ ಸಚಿವರ ವಿರುದ್ಧ ಭುಗಿಲೆದ್ದ ಆಕ್ರೋಶ!

0
Spread the love

ವಿಜಯಸಾಕ್ಷಿ ಸುದ್ದಿ, ಬೆಂಗಳೂರು

Advertisement

ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರನ್ನು ನಾರಾಯಣ ಇ- ಟೆಕ್ನೊ ಶಾಲಾ ಮಕ್ಕಳ ಪೋಷಕರು ಇಂದು ತೀವ್ರವಾಗಿ ತರಾಟೆಗೆ ತೆಗೆದುಕೊಂಡ ಘಟನೆ ನಡೆದಿದೆ.

ನಮ್ಮ ರಾಜ್ಯದ ಶಿಕ್ಷಣ ಸಚಿವರ ಪಂಚೇಂದ್ರಿಯಗಳೇ ಸತ್ತು ಹೋಗಿವೆ. ಹೀಗಾಗಿ ಅವರ ತೇವಲನ್ನು ತೀರಿಸಿಕೊಳ್ಳಲು ಈ ರೀತಿ ಮಾಡುತ್ತಿದ್ದಾರೆ. ಶಿಕ್ಷಣ ಇಲಾಖೆ ಅಧಿಕಾರಿಗಳು ಖಾಸಗಿ ಶಾಲೆಗಳ ಗುಲಾಮರಾಗಿದ್ದಾರೆ. ಶುಲ್ಕ ಸಮಸ್ಯೆ ಬಗೆಹರಿಸುವುದಿಲ್ಲ ಎಂದರೆ ಸಚಿವ ಸ್ಥಾನದಲ್ಲಿ ಏಕೆ ಮುಂದುವರೆದಿದ್ದೀರಿ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನಿಮಗೆ ಸಚಿವ ಸ್ಥಾನ ನಿಭಾಯಿಸಲು ಆಗುವುದಿಲ್ಲ ಎಂದರೆ ಕಳಗೆ ಇಳಿಯಿರಿ. ಸಮಸ್ಯೆಯನ್ನ ಪೋಷಕರು ಮತ್ತು ಖಾಸಗಿ ಶಾಲೆಗಳೇ ಬಗೆಹರಿಸಿಕೊಳ್ಳಬೇಕು ಎಂದು ಹೇಳುತ್ತಿದ್ದೀರಿ. ನೀವೇನು ಗೆಣಸು ಕೀಳೋಕೆ ಇದ್ದೀರಾ? ಎಂದು ಶಿಕ್ಷಣ ಸಚಿವರ ವಿರುದ್ಧ ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಶಿಕ್ಷಣ ಸಚಿವರಿಗೆ ಕಿವಿ ಇಲ್ಲದಾಗಿದೆ. ಸಚಿವರು ಜವಾಬ್ದಾರಿಯುತ ನಿರ್ಧಾರ ಕೈಗೊಳ್ಳಬೇಕು. ಪೋಷಕರ ಸಮಸ್ಯೆ ಬಗೆಹರಿಸಲು ಶಿಕ್ಷಣ ಸಚಿವರು ವಿಫಲರಾಗಿದ್ದಾರೆ. ಕೂಡಲೇ ಆನ್ ಲೈನ್ ಕ್ಲಾಸ್ ವ್ಯವಸ್ಥೆ ಮಾಡಿಸಬೇಕು. ಪೂರ್ಣ ಶುಲ್ಕ ಕಟ್ಟುವುದಕ್ಕೆ ಒತ್ತಾಯಿಸದಂತೆ ಶಾಲೆಗೆ ಸೂಚನೆ ನೀಡಬೇಕು ಎಂದು ಕ್ಷೇತ್ರ ಶಿಕ್ಷಣಾಧಿಕಾರಿಗೆ ಆಗ್ರಹಿಸಿ ಬೆಂಗಳೂರಿನ ಲಗ್ಗೆರೆಯಲ್ಲಿರುವ ನಾರಾಯಣ ಇ-ಟೆಕ್ನೊ ಶಾಲೆ ಎದುರು ಪೋಷಕರು ಪ್ರತಿಭಟನೆ ನಡೆಸಿದ್ದಾರೆ.


Spread the love

LEAVE A REPLY

Please enter your comment!
Please enter your name here