IND vs PAK ಹೈವೋಲ್ಟೇಜ್ ಮ್ಯಾಚ್: ಇಂಡಿಯಾ ಗೆಲುವಿಗೆ ವಿಶ್ವ ಹಿಂದೂ ರಕ್ಷಾ ಪರಿಷತ್‌ʼನಿಂದ ಹೋಮ-ಹವನ

0
Spread the love

ಲಕ್ನೋ: ಇನ್ನೇನು ದುಬೈ ಇಂಟರ್​ನ್ಯಾಷನಲ್​ ಸ್ಟೇಡಿಯಂನಲ್ಲಿ ನಡೆಯುವ ಭಾರತ vs ಪಾಕಿಸ್ತಾನ ಹೈವೋಲ್ಟೇಜ್​ ಪಂದ್ಯಕ್ಕೆ ಕೆಲವೇ ಗಂಟೆಗಳು ಬಾಕಿಯಿದೆ. ಇದರ ಮದ್ಯೆ ಟೀಂ ಇಂಡಿಯಾ ಗೆಲುವಿಗಾಗಿ ವಿಶ್ವ ಹಿಂದೂ ರಕ್ಷಾ ಪರಿಷತ್ ವಿಶೇಷ ಹೋಮ-ಹವನ, ಪೂಜೆ ಮಾಡಿ ಪ್ರಾರ್ಥಿಸಿದೆ.

Advertisement

ಪಹಲ್ಗಾಮ್ ಭಯೋತ್ಪಾದಕ ದಾಳಿಯ ನಂತರ ಮೊದಲ ಬಾರಿಗೆ ಪಾಕಿಸ್ತಾನದೊಂದಿಗೆ ಮುಖಾಮುಖಿಯಾಗಲು ಸಜ್ಜಾಗಿರುವ ಭಾರತ ಕ್ರಿಕೆಟ್ ತಂಡದೊಂದಿಗೆ ನಿಲ್ಲುವ ಸಮಯ ಇದೀಗ ಬಂದಿದೆ ಎಂದು ವಿಶ್ವ ಹಿಂದೂ ರಕ್ಷಾ ಪರಿಷತ್ ರಾಷ್ಟ್ರೀಯ ಅಧ್ಯಕ್ಷ ಗೋಪಾಲ್ ರೈ ಹೇಳಿದ್ದಾರೆ.

ಭಾರತ ಯಾವಾಗಲೂ ಗೆದ್ದಿದೆ. ಭಾರತ ಯಾವಾಗಲೂ ಗೆಲ್ಲುತ್ತದೆ. ಪಹಲ್ಗಾಮ್‌ನಲ್ಲಿ ಅಮಾಯಕ ಜನರನ್ನು ಕೊಂದಿದ್ದಕ್ಕೆ ನಮ್ಮ ಪ್ರಧಾನಿ ಆಪರೇಷನ್ ಸಿಂಧೂರ ಮೂಲಕ ಪಾಕಿಸ್ತಾನದ ಮೇಲೆ ಸೇಡು ತೀರಿಸಿಕೊಂಡರು. ಕೆಲವರು ಪಂದ್ಯದ ವಿರುದ್ಧ ಪ್ರತಿಭಟಿಸುತ್ತಿದ್ದಾರೆ.

ಆದರೆ ವಿಶ್ವ ಹಿಂದೂ ರಕ್ಷಾ ಪರಿಷತ್ ನಂಬುವುದೇನೆಂದರೆ, ನಾವು ಆಡದಿದ್ದರೆ ಭಾರತವು ಪಾಕಿಸ್ತಾನವನ್ನು ಒಂದೇ ಬಾರಿಗೆ ಸೋಲಿಸುವ ಸಾಮರ್ಥ್ಯವನ್ನು ಹೊಂದಿದೆ ಎಂದು ಜಗತ್ತಿಗೆ ಹೇಗೆ ತಿಳಿಯುತ್ತದೆ? ನಾವು ನಮ್ಮ ಭಾರತೀಯ ಕ್ರಿಕೆಟಿಗರ ಜೊತೆ ನಿಲ್ಲುತ್ತೇವೆ ಎಂದು ಸ್ಪಷ್ಟಪಡಿಸಿದ್ದಾರೆ.

 


Spread the love

LEAVE A REPLY

Please enter your comment!
Please enter your name here