ಬೆಳಗಾವಿ:- ಬೆಳಗಾವಿ ಜಿಲ್ಲೆ ರಾಮದುರ್ಗ ತಾಲೂಕಿನ ಮುಳ್ಳೂರ ಗುಡ್ಡದ ಘಾಟ್ ರಸ್ತೆಯಲ್ಲಿ ಸರಕು ತುಂಬಿಕೊಂಡು ಚಲಿಸುತ್ತಿದ್ದ ಲಾರಿ ಪಟ್ಟಿಯಾಗಿ ಚಾಲಕ ಸ್ಥಳದಲ್ಲಿ ಮೃತಪಟ್ಟಿರುವ ಘಟನೆ ನಡೆದಿದೆ. ಅಂದಾಜು 28 ವರ್ಷದ ಸುಜಾದ್ ಪಾಷಾ ಮೃತ ಚಾಲಕ.
ಕೊಪ್ಪಳದಿಂದ ಕಬ್ಬಿಣದ ಅದಿರು ತುಂಬಿಕೊಂಡು ಮಹಾರಾಷ್ಟ್ರದ ಕಡೆಗೆ ಹೊರಟಿದ್ದ ಲಾರಿ ಇದಾಗಿದ್ದು ರಾಮದುರ್ಗ ಪಟ್ಟಣದ ಸಮೀಪ ಮುಳ್ಳೂರ ಬೆಟ್ಟದ ಘಾಟ ರಸ್ತೆಯ ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿ ಲಾರಿ ರಸ್ತೆ ಪಕ್ಕಾ ಪಲ್ಟಿಯಾಗಿದೆ ಈ ಅವಘಡದಿಂದ ಚಾಲಕ ಸ್ಥಳದಲ್ಲೇ ಮೃತಪಟ್ಟಿದ್ದಾನೆ.
ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು. ರಾಮದುರ್ಗ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.



