ಗದಗ: ನಾಡಿನ ಹಿರಿಯ ಸಾಹಿತಿ ಎಸ್ಎಲ್ ಬೈರಪ್ಪ ಅವರು ನಿಧನರಾಗಿದ್ದಾರೆ. 94 ವರ್ಷದ ಬೈರಪ್ಪ ಅವರು ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದರು. ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೇ ನಿಧನರಾಗಿದ್ದಾರೆ. ಇನ್ನೂ ಅವರ ನಿಧನಕ್ಕೆ ಸಚಿವ ಎಚ್ ಕೆ ಪಾಟೀಲ್ ಸಂತಾಪ ಸೂಚಿಸಿದ್ದಾರೆ.
ಗದಗನಲ್ಲಿ ಮಾತನಾಡಿದ ಅವರು, ಸುದ್ದಿ ತಿಳಿದು ಸಿಡಿಲು ಬಡಿದಂತಾಗಿದೆ. ಭೈರಪ್ಪನವರು ಶ್ರೇಷ್ಠ ಸಾಹಿತ್ಯವನ್ನು ಸೃಷ್ಟಿ ಮಾಡಿದವರು. ಸತ್ಯವನ್ನು ಹೆಕ್ಕಿ ತೆಗೆದು ಸಮಾಜವನ್ನು ಜಾಗೃತಿಗೊಳಿಸಿದವರಾಗಿದ್ದರು ಎಂದರು.
ಇನ್ನೂ ಸಮುದಾಯಕ್ಕೆ ತಕ್ಕ ತತ್ವ, ಸಿದ್ದಾಂತ, ಸತ್ಯಕ್ಕಾಗಿ ಹೋರಾಟ ಮಾಡಿದವ್ರು, ಭೈರಪ್ಪನವರ ಅಗಲಿಕೆಯಿಂದ ಸಾಹಿತ್ಯ ಲೋಕಕ್ಕೆ ತುಂಬುಲಾರದ ಹಾನಿಯಾಗಿದೆ. ಅವರ ಆತ್ಮಕ್ಕೆ ಚಿರಶಾಂತಿ ಸಿಗಲಿ ಎಂದು ಸಚಿವ ಎಚ್ ಕೆ ಪಾಟೀಲ್ ಸಂತಾಪ ಸೂಚಿಸಿದ್ದಾರೆ.



