ಅಪ್ರಾಪ್ತ ಬಾಲಕಿ ರೇಪ್ & ಮರ್ಡರ್ ಕೇಸ್: 19 ಬಾರಿ ಚಾಕು ಇರಿದು ಬರ್ಬರವಾಗಿ ಕೊಲೆಗೈದ ಪಾಪಿ !

0
Spread the love

ಮೈಸೂರು: ದಸರಾ ಹಬ್ಬದ ಸಂದರ್ಭದಲ್ಲಿ ಬಲೂನ್‌ಗಳನ್ನು ಮಾರಾಟ ಮಾಡಲು ಕಲಬುರಗಿಯಿಂದ ಮೈಸೂರಿಗೆ ಬಂದಿದ್ದ ಬಡ ವಲಸೆ ಕುಟುಂಬವೊಂದರ ಬಾಲಕಿ ದುರಂತ ಅಂತ್ಯ ಕಂಡಿದ್ದಾಳೆ. ಹೌದು ಬಲೂನು ಮಾರಾಟ ಮಾಡಲು ಬಂದಿದ್ದ 9 ವರ್ಷದ ಬಾಲಕಿ ಮೇಲೆ ಅತ್ಯಾಚಾರ ಎಸಗಿ ಹತ್ಯೆಯಾಗಿದ್ದು, ಈ ಸಂಬಂಧ ಪೊಲೀಸರು ಸಿಸಿಟಿವಿ ಆಧರಿಸಿ ಆರೋಪಿಯನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

Advertisement

ಇನ್ನೂ ಪ್ರಕರಣ ಸಂಬಂಧ ಪೊಲೀಸರು ತನಿಖೆ ನಡೆಸುತ್ತಿದ್ದು, ಮರಣೋತ್ತರ ಪರೀಕ್ಷೆಯಲ್ಲಿ ಕೊಲೆಯ ಭೀಕರತೆ ಬಯಲಾಗಿದೆ. ಅತಿಯಾದ ಮದ್ಯದ ನಶೆಯಲ್ಲಿ ಆರೋಪಿ ಕಾರ್ತಿಕ್‌ ಬಾಲಕಿ ಮೇಲೆ ಅತ್ಯಾಚಾರ ಮಾಡಿ ಭೀಕರವಾಗಿ ಕೊಲೆ ಮಾಡಿರುವುದು ವೈದ್ಯಕೀಯ ಪರೀಕ್ಷೆಯಲ್ಲಿ ದೃಢವಾಗಿದೆ. ಬಾಲಕಿ ರಸ್ತೆ ಬದಿಯಲ್ಲಿ ಮಲಗಿದ್ದನ್ನು ಗಮನಿಸಿ, ಗಾಢ ನಿದ್ರೆಯಲ್ಲಿದ್ದಾಗ ಆಕೆಯನ್ನು ಹೊತ್ತುಯ್ದು ರೇಪ್ ಮಾಡಿದ್ದ.

ನಂತರ ಬಾಲಕಿಯ ಕತ್ತು, ಎದೆ ಭಾಗ ಹಾಗೂ ಹೊಟ್ಟೆ ಭಾಗಕ್ಕೆ ಚಾಕುವಿನಿಂದ ಚುಚ್ಚಿದ್ದಾನೆ. ಬಾಲಕಿಯ ಮರ್ಮಾಂಗಕ್ಕೂ ಚಾಕುವಿಂದ ಏಳಂಟು ಬಾರಿ ಚುಚ್ಚಿ ಭೀಕರವಾಗಿ ಕೊಲೆ ಮಾಡಿ ಅಲ್ಲೆ ಸಮೀಪದ ಮೋರಿಗೆ ಶವ ಎಸೆದು ಪರಾರಿ ಆಗಿದ್ದನು.‌ ಅದಲ್ಲದೆ ಬಾಲಕಿಗೆ 19 ಬಾರಿ ಇರಿದು ಭೀಕರವಾಗಿ ಕೊಲೆ ಮಾಡಿದ್ದಾನೆ ಎನ್ನಲಾಗ್ತಿದೆ.

ಬಾಲಕಿ ಹಾಗೂ ಆಕೆಯ ಪೋಷಕರು ದಸರಾ ವೇಳೆ ಬಲೂನ್ ವ್ಯಾಪಾರಕ್ಕಾಗಿ ಮೈಸೂರಿಗೆ ಬಂದಿದ್ದರು. ಕಳೆದ ಬುಧವಾರ ರಾತ್ರಿ 2 ಗಂಟೆ ಸಮಯದಲ್ಲಿ ಮಲಗಿದ್ದಾಗ ಬಾಲಕಿಯನ್ನು ಆರೋಪಿ ಹೊತ್ತೊಯ್ದು ಕೊಲೆ ಮಾಡಿದ್ದ. ಮೈಸೂರಿನ ಅರಮನೆ ಮುಂಭಾಗದ ಇಟ್ಟಿಗೆಗೂಡಿನ ಖಾಲಿ ಜಾಗದಲ್ಲಿ ಈ ಕೊಲೆ ಆಗಿತ್ತು.

ಸದ್ಯ ಕೃತ್ಯ ಎಸಗಿ ಮೈಸೂರು ಬಸ್ ನಿಲ್ದಾಣದಿಂದ ಕೊಳ್ಳೇಗಾಲಕ್ಕೆ ಪರಾರಿಯಾಗಿದ್ದ ಆರೋಪಿಯನ್ನು ಮೈಸೂರು ಪೊಲೀಸರು ಬಂಧಿಸಿದ್ದಾರೆ. ಇನ್ನು ಮೇಟಗಳ್ಳಿ ಬಳಿ ಪೊಲೀಸರಿಂದ ತಪ್ಪಿಸಿಕೊಳ್ಳಲು ಯತ್ನಿಸಿದ ಆರೋಪಿ ಕಾರ್ತಿಕ್ ಕಾಲಿಗೆ ಗುಂಡು ಹಾರಿಸಿದ್ದರೆ. ಹೀಗಾಗಿ ಆರೋಪಿ ತಪ್ಪಿಸಿಕೊಳ್ಳಲು ಸಾಧ್ಯವಾಗಿಲ್ಲ. ತಕ್ಷಣವೇ ಆರೋಪಿಯನ್ನು ಬಂಧಿಸಿದ ಪೊಲೀಸರು, ಆಸ್ಪತ್ರೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ.

Spread the love

LEAVE A REPLY

Please enter your comment!
Please enter your name here