HomeGadag Newsಇ-ಕೆವೈಸಿ ಶೀಘ್ರ ಪೂರ್ಣಗೊಳಿಸಿ: ವಿಶ್ವನಾಥ ಹೊಸಮನಿ

ಇ-ಕೆವೈಸಿ ಶೀಘ್ರ ಪೂರ್ಣಗೊಳಿಸಿ: ವಿಶ್ವನಾಥ ಹೊಸಮನಿ

For Dai;y Updates Join Our whatsapp Group

ವಿಜಯಸಾಕ್ಷಿ ಸುದ್ದಿ, ಮುಂಡರಗಿ: ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ ಅಡಿಯಲ್ಲಿ ನೋಂದಾಯಿತವಾಗಿರುವ ತಾಲೂಕಿನ ಎಲ್ಲ ಗ್ರಾಮೀಣ ಕುಟುಂಬಗಳ ಉದ್ಯೋಗ ಚೀಟಿ ಇ-ಕೆವೈಸಿ ಪ್ರಕ್ರಿಯೆಯನ್ನು ಶೀಘ್ರಗತಿಯಲ್ಲಿ ಪೂರ್ಣಗೊಳಿಸಲು ತಾಲೂಕು ಪಂಚಾಯಿತಿ ನರೇಗಾ ಸಿಬ್ಬಂದಿಗಳಿಗೆ ತಾ.ಪಂ ಇಓ ವಿಶ್ವನಾಥ ಹೊಸಮನಿ ತಿಳಿಸಿದರು.

ತಮ್ಮ ಕಚೇರಿಯಲ್ಲಿ ನರೇಗಾ ಸಿಬ್ಬಂದಿಗಳ ಸಭೆ ನಡೆಸಿ ಮಾತನಾಡಿದ ಅವರು, ಗ್ರಾಮೀಣಾಭಿವೃದ್ಧಿ ಆಯುಕ್ತಾಲಯದಿಂದ ಇ-ಕೆವೈಸಿ ಪ್ರಕ್ರಿಯೆ ಕಡ್ಡಾಯವಾಗಿ ಮಾಡಬೇಕಿರುವ ಕುರಿತು ಆದೇಶವಿರುವುದರಿಂದ ನರೇಗಾ ಕೂಲಿಕಾರರನ್ನು ಮನೆ ಮನೆಗೆ ಸಂಪರ್ಕಿಸಿ ಸಕ್ರಿಯವಾಗಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ಸೂಚಿಸಿದರು.

ತಾಲೂಕಿನ 19 ಗ್ರಾ.ಪಂಗಳು ಮಟ್ಟದಲ್ಲಿ ಮನರೇಗಾ ಸಿಬ್ಬಂದಿಗಳಾದ ಗ್ರಾಮ ಕಾಯಕ ಮಿತ್ರ, ಬಿಎಫ್‌ಟಿ, ತಾಂತ್ರಿಕ ಸಹಾಯಕರಿಗೆ ಇ-ಕೆವೈಸಿ ಕುರಿತು ತರಬೇತಿ ನೀಡಲಾಗಿದೆ. ಗ್ರಾ.ಪಂಗಳ ಇತರ ಸಿಬ್ಬಂದಿಗಳನ್ನು ಬಳಸಿಕೊಂಡು ಸಕ್ರಿಯ ಕೂಲಿಕಾರರ ಜಾಬ್ ಕಾರ್ಡ್‌ಗಳನ್ನು ಇ-ಕೆವೈಸಿ ಮೂಲಕ ಪರಿಶೀಲಿಸುವ ಕಾರ್ಯ ತುರ್ತಾಗಿ ನಡೆಯಲಿ ಎಂದರು.

ನರೇಗಾ ತಾಂತ್ರಿಕ ಸಹಾಯಕರು ಕೃಷಿ ಇಲಾಖೆ ಅಡಿಯ ಕೃಷಿ ಹೊಂಡ ಕಾಮಗಾರಿಗಳನ್ನು ಶೀಘ್ರವೇ ಆರಂಭಿಸಿ, ಕೂಲಿಕಾರರಿಗೆ ಉದ್ಯೋಗ ನೀಡಲು ಸೂಚಿಸಿ. ಇದರಿಂದ ಮಾನವ ದಿನಗಳ ಸೃಜನೆಯು ಸಾಧ್ಯವಾಗಲಿದೆ. ಈ ಬಗ್ಗೆ ಗಮನಹರಿಸಿ ಎಂದು ತಿಳಿಸಿದರು.

ಚಾಲ್ತಿ ಕಾಮಗಾರಿಗಳನ್ನು ಮುಕ್ತಾಯಗೊಳಿಸಿ ಹೊಸ ಕಾಮಗಾರಿಗಳ ಮೂಲಕ ಗ್ರಾಮೀಣ ಭಾಗದಲ್ಲಿ ಕೂಲಿಕಾರರಿಗೆ ಉದ್ಯೋಗ ನೀಡಿ. 2026-27ನೇ ನರೇಗಾ ಕ್ರಿಯಾಯೋಜನೆಗೆ ಈಗಾಗಲೇ ಸುತ್ತೋಲೆ ಬಂದಿದ್ದು, ಕ್ರಿಯಾಯೋಜನೆ ಸಿದ್ಧಪಡಿಸುವ ಕಾರ್ಯ ನಡೆಯಲಿ ಎಂದರು.

ಈ ವೇಳೆ ಟಿಸಿ ಪ್ರವೀಣ ಸೂಡಿ, ಟಿಎಂಐಎಸ್ ಬಸವರಾಜ ಮಣ್ಣಮ್ಮನವರ, ತಾಂತ್ರಿಕ ಸಹಾಯಕರು, ಬಿಎಫ್‌ಟಿಗಳು ಇದ್ದರು.

Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img