ಬೆಂಗಳೂರು: ಬಿಹಾರದಲ್ಲಿ NDA ಬಂದ್ರೆ ಅದು ನಮ್ಮ ದೇಶದ, ಬಿಹಾರ ಜನರ ದುರಾದೃಷ್ಟ ಎಂದು ಸಚಿವ ರಾಮಲಿಂಗಾ ರೆಡ್ಡಿ ಹೇಳಿದ್ದಾರೆ. ಈ ಬಾರಿ ಎಕ್ಸಿಟ್ ಪೋಲ್ ಸಮೀಕ್ಷೆಗಳು ಬಿಹಾರದಲ್ಲಿ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟ (ಎನ್‌ಡಿಎ) ಈ ಬಾರಿ ಸ್ಪಷ್ಟ ಮುನ್ನಡೆಯನ್ನು ಸಾಧಿಸಲಿವೆ ಎಂದು ಭವಿಷ್ಯ ನುಡಿದಿವೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ನಗರದಲ್ಲಿ ಮಾತನಾಡಿದ ಅವರು,
ಒಂದು ವೇಳೆ ಬಿಹಾರದಲ್ಲಿ NDA ಬಂದ್ರೆ ಅದು ನಮ್ಮ ದೇಶದ, ಬಿಹಾರ ಜನರ ದುರಾದೃಷ್ಟ. ಬಿಹಾರದಲ್ಲಿ 20 ವರ್ಷಗಳಿಂದ NDA ಅವರು ಆಡಳಿತ ಮಾಡ್ತಿದ್ದಾರೆ. ಆದರೂ ಬಿಹಾರ ಅಭಿವೃದ್ಧಿ ಆಗಿಲ್ಲ. ಬಿಜೆಪಿ ಬಂದ ಮೇಲೆ ದೇಶದಲ್ಲಿ ನಿರುದ್ಯೋಗ ಸಮಸ್ಯೆ ಜಾಸ್ತಿ ಆಗ್ತಿದೆ. ಕೇಂದ್ರ ಸರ್ಕಾರ ಯಾಕೆ ಗಮನ ಕೊಡ್ತಿಲ್ಲ ಅಂತ ಕಿಡಿಕಾರಿದ್ದಾರೆ.
ಬಿಹಾರದ ಜನರು ಬೆಂಗಳೂರಿಗೆ ಬಂದು ಕೆಲಸ ಮಾಡ್ತಿದ್ದಾರೆ. ಅಲ್ಲಿ ಕೆಲಸ ಸಿಗದೇ ಇರೋದಕ್ಕೆ ಬರ್ತಿದ್ದಾರೆ. ಇದು ಅಭಿವೃದ್ಧಿ ಅಗ್ತಿಲ್ಲ ಅನ್ನೋದಕ್ಕೆ ಉದಾಹರಣೆ. ಬಿಹಾರ ರಾಜ್ಯ ಅಭಿವೃದ್ಧಿ ಆಗಿಲ್ಲ. ನಿರುದ್ಯೋಗ ಜಾಸ್ತಿ ಆಗಿದೆ. ಒಂದು ವೇಳೆ NDA ಅಧಿಕಾರಕ್ಕೆ ಬಂದ್ರೆ ಅದು ಬಿಹಾರ ಜನರ ದುರಾದೃಷ್ಟ ಅಂತ ಲೇವಡಿ ಮಾಡಿದ್ರು.


