ಕೋಲ್ಕತ್ತಾದಲ್ಲಿ ನಡೆಯುತ್ತಿರುವ ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಟೀಮ್ ಇಂಡಿಯಾದ ಸ್ಟಾರ್ ಆಲ್‌ರೌಂಡರ್ ವಿಶೇಷ ಸಾಧನೆ ಮಾಡಿದ್ದಾರೆ. ಸ್ಟಾರ್ ಆಲ್‌ರೌಂಡರ್ ರವೀಂದ್ರ ಜಡೇಜಾ ಟೆಸ್ಟ್ ಕ್ರಿಕೆಟ್‌ನಲ್ಲಿ 4,000 ರನ್‌ಗಳ ಮೈಲಿಗಲ್ಲನ್ನು ತಲುಪಿ ವಿಶೇಷ ದಾಖಲೆ ನಿರ್ಮಿಸಿದರು.
ಈ ಮೂಲಕ ಟೆಸ್ಟ್‌ಗಳಲ್ಲಿ 4,000 ರನ್‌ಗಳೊಂದಿಗೆ 300 ವಿಕೆಟ್‌ಗಳನ್ನು ಪಡೆದ ನಾಲ್ಕನೇ ಕ್ರಿಕೆಟಿಗರಾಗಿರುವ ಗೌರವಕ್ಕೆ ಪಾತ್ರರಾದರು. ಈ ಹಿಂದೆ ಇಯಾನ್ ಬೋಥಮ್, ಕಪಿಲ್ ದೇವ್ ಮತ್ತು ಡೇನಿಯಲ್ ವೆಟ್ಟೋರಿ ಮಾತ್ರ ಈ ಸಾಧನೆ ಮಾಡಿದ್ದಾರೆ.
ಜಡೇಜಾ ಈ ಸಾಧನೆ ಮಾಡಿದ ಎರಡನೇ ಭಾರತೀಯ ಆಟಗಾರರು. ಅವರಿಗೆ 4,000 ರನ್‌ಗಳನ್ನು ಮುಟ್ಟಲು ಕೇವಲ 10 ರನ್‌ಗಳ ಅಗತ್ಯವಿತ್ತು ಮತ್ತು ಎರಡನೇ ದಿನದ ಪಂದ್ಯದಲ್ಲಿ ಅದನ್ನು ಸಾಧಿಸಿದರು. ಜಡೇಜಾ ಈಗಾಗಲೇ ಟೆಸ್ಟ್ ಕ್ರಿಕೆಟ್‌ನಲ್ಲಿ 6 ಶತಕಗಳು, 27 ಅರ್ಧಶತಕಗಳು ಮತ್ತು 331 ವಿಕೆಟ್‌ಗಳನ್ನು (ಸರಾಸರಿ 25.25) ಪಡೆದಿದ್ದಾರೆ. ಇದರಲ್ಲಿ 15 ಐದು ವಿಕೆಟ್‌ಗಳ ಗೊಂಚಲು ಸೇರಿವೆ. ಆದರೆ ಮೊದಲ ಟೆಸ್ಟಿನಲ್ಲಿ ಜಡೇಜಾ ಕೇವಲ 27 ರನ್ ಗಳಿಸಿ ಔಟಾದರು.



