ವಿಜಯಸಾಕ್ಷಿ ಸುದ್ದಿ, ಗದಗ: ಕಾರ್ತಿಕ ಮಾಸದ ನಿಮಿತ್ತ ಗದಗ ಶಹರದ ಹಳೇ ಸರಾಫ್ ಬಜಾರ ಕರೂಗಲ್ ಓಣಿಯ ಶ್ರೀ ಶಿರಡಿ ಸಾಯಿಬಾಬಾ ದೇವಸ್ಥಾನದಲ್ಲಿ ಶ್ರೀ ಸಾಯಿ ಸೇವಾ ಸಮಿತಿ ವತಿಯಿಂದ ಕಾರ್ತಿಕೋತ್ಸವ ಕಾರ್ಯಕ್ರಮ ಜರುಗಿತು.
ಗದಗ-ಬೆಟಗೇರಿ 24ನೇ ವಾರ್ಡ್‌ನ ನಗರಸಭೆ ಸದಸ್ಯರಾದ ನಾಗರಾಜ ಹುಲೀಗೆಪ್ಪ ತಳವಾರ ಕಾರ್ತಿಕೋತ್ಸವ ಉದ್ಘಾಟಿಸಿ ಮಾತನಾಡಿ, ಕಾರ್ತೀಕ ಮಾಸದಲ್ಲಿ ಜರುಗುವ ಕಾರ್ತಿಕೋತ್ಸವವು ನಮ್ಮಲ್ಲಿರುವ ಅಂಧಕಾರವನ್ನು ತೊಡೆದು ಜ್ಯೋತಿಯ ಹಾಗೆ ಪ್ರಜ್ವಲಿಸುವಂತೆ ಮಾಡುತ್ತದೆ. ನಮ್ಮಲ್ಲಿರುವ ಅಹಂನ್ನು ಸುಟ್ಟು ನಾವೆಲ್ಲರೂ ಒಂದು ಎಂಬ ಭಾವನೆಯನ್ನು ಮೂಡಿಸುತ್ತದೆ ಎಂದರು.
ಶ್ರೀ ಸಾಯಿ ಸೇವಾ ಸಮಿತಿ ಅಧ್ಯಕ್ಷ ಸಂತೋಷ ಕಬಾಡರ್, ಮಾತನಾಡಿ ಶ್ರೀ ಸಾಯಿ ಸೇವಾ ಸಮಿತಿ ವತಿಯಿಂದ ಪ್ರತಿ ವರ್ಷ ವಿಜೃಂಭಣೆಯಿಂದ ಕಾರ್ತಿಕೋತ್ಸವವನ್ನು ಆಚರಣೆ ಮಾಡುತ್ತಾ ಬರುತ್ತಿದ್ದೇವೆ ಎಂದು ಹೇಳಿದರು.
ಸಾಯಿ ಸೇವಾ ಸಮಿತಿ ಕಾರ್ಯದರ್ಶಿ ಮಂಜುನಾಥ ಮಜ್ಜಿಗುಡ್ಡ, ಸಹಕಾರ್ಯದರ್ಶಿ ಸುನೀಲ ಮುಳ್ಳಾಳ, ಖಜಾಂಚಿ ಮಹೇಶ ಕೋರಿ, ಬಾಬು ಸುಲಾಖೆ, ಬಸವರಾಜ ಕರುಗಲ್, ಮಂಜುನಾಥ ಕರುಗಲ್, ಕಿರಣ ಕರುಗಲ್, ಕೇದಾರ ಅಬ್ಬಿಗೇರಿ, ಕುನಾಲ್ ಪವಾರ, ಓಣೆಯ ಪ್ರವೀಣ ವಾರಕರ, ವಿಜಯ ಅಬ್ಬಿಗೇರಿ, ಅಂಕಿತ ಸಾಹುಕಾರ್, ಅಪ್ಪು ಕೊಟಗಿ, ಮಂಜು ಲಕ್ಕುಂಡಿ, ಪ್ರಸಾದ ಅಬ್ಬಿಗೇರಿ, ಸುರೇಶ್ ಚಿತ್ರಗಾರ, ರವಿ ಮಡಿವಾಳರ ಪಾಲ್ಗೊಂಡಿದ್ದರು. ಪ್ರಸಾದ ಸೇವೆಯನ್ನು ಮಲ್ಲಣ್ಣ ಚಿಂಚಲಿ ವಹಿಸಿದ್ದರು.



