HomeGadag Newsಬೆಂಬಲ ಬೆಲೆ ಖರೀದಿ ಕೇಂದ್ರವನ್ನು ಕೂಡಲೇ ಆರಂಭಿಸಲು ಒತ್ತಾಯಿಸಿ ಬಿಜೆಪಿಯಿಂದ ಪ್ರತಿಭಟನೆ

ಬೆಂಬಲ ಬೆಲೆ ಖರೀದಿ ಕೇಂದ್ರವನ್ನು ಕೂಡಲೇ ಆರಂಭಿಸಲು ಒತ್ತಾಯಿಸಿ ಬಿಜೆಪಿಯಿಂದ ಪ್ರತಿಭಟನೆ

For Dai;y Updates Join Our whatsapp Group

Spread the love

ವಿಜಯಸಾಕ್ಷಿ ಸುದ್ದಿ, ಗದಗ: ಭಾರತೀಯ ಜನತಾ ಪಾರ್ಟಿ ಗದಗ ನಗರ, ಗದಗ ಗ್ರಾಮೀಣ ಮಂಡಲದ ವತಿಯಿಂದ ಮೆಕ್ಕೆಜೋಳ, ಈರುಳ್ಳಿ, ಶೇಂಗಾ ಬೆಳೆಗಳ ಬೆಂಬಲ ಬೆಲೆ ಖರೀದಿ ಕೇಂದ್ರವನ್ನು ಕೂಡಲೇ ಆರಂಭಿಸಬೇಕೆಂದು ಆಗ್ರಹಿಸಿ ಪ್ರತಿಭಟಿಸಲಾಯಿತು.

ಬಿಜೆಪಿ ಗದಗ ಜಿಲ್ಲಾಧ್ಯಕ್ಷ ತೋಟಪ್ಪ (ರಾಜು) ಕುರುಡಗಿ ಮಾತನಾಡಿ, ರಾಜ್ಯದಲ್ಲಿ ಈ ವರ್ಷ ಅತಿವೃಷ್ಟಿ–ಅನಾವೃಷ್ಟಿ ಕಾರಣದಿಂದಾಗಿ ಮುಂಗಾರು ಮತ್ತು ಹಿಂಗಾರು ಬೆಳೆಗಳು ಅತಿ ಹೆಚ್ಚಿನ ಪ್ರಮಾಣದಲ್ಲಿ ನಷ್ಟಗೊಂಡಿವೆ. ಸಮೀಕ್ಷೆಯ ನೆಪದಲ್ಲಿ ವಿಳಂಬನೀತಿ ಅನುಸರಿಸಿದ ರಾಜ್ಯ ಸರ್ಕಾರ ಈವರೆಗೂ ಬೆಳೆಹಾನಿಗೆ ಸಮರ್ಪಕ ಪರಿಹಾರ ಒದಗಿಸುವ ಪ್ರಾಮಾಣಿಕ ಪ್ರಯತ್ನ ಮಾಡಿಲ್ಲ. ಮುಂಗಾರು ಹಂಗಾಮಿನ ಹೆಸರು ಬೆಳೆಯಂತೂ ಸಂಪೂರ್ಣ ನಷ್ಟವಾಗಿದ್ದು, ಅಳಿದುಳಿದ ಹೆಸರು ಖರೀದಿಗೂ ರಾಜ್ಯ ಸರ್ಕಾರ ಮುಂದಾಗಲಿಲ್ಲ. ಗುಣಮಟ್ಟದ ನೆಪವೊಡ್ಡಿ ಬೆಂಬಲ ಬೆಲೆ ಖರೀದಿ ಕೇಂದ್ರಗಳಿಂದ ಸದ್ಯ ಹೆಸರನ್ನು ಖರೀದಿಸುತ್ತಿಲ್ಲ. ಈ ಕಾರಣದಿಂದಾಗಿ ರೈತರು ಮಾರುಕಟ್ಟೆಯಲ್ಲಿ ಅತ್ಯಂತ ಕಡಿಮೆ ಬೆಲೆಗೆ ಹೆಸರು ಮಾರಾಟ ಮಾಡುತ್ತಿದ್ದು, ಕೃಷಿಗೆ ತೊಡಗಿಸಿದ ಹಣವು ಮರಳಿ ಬಾರದಂತಾಗಿ ರಾಜ್ಯದ ರೈತರು ಸಂಕಷ್ಟಕ್ಕೆ ಒಳಗಾಗಿದ್ದಾರೆ ಎಂದರು.

ಗದಗ ಗ್ರಾಮೀಣ ಮಂಡಲ ಅಧ್ಯಕ್ಷ ಬೂದಪ್ಪ ಹಳ್ಳಿ, ಗದಗ ನಗರ ಮಂಡಲ ಅಧ್ಯಕ್ಷ ಸುರೇಶ ಮರಳಪ್ಪನವರ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಲಿಂಗರಾಜ ಪಾಟೀಲ ಮಾತನಾಡಿದರು.

ಪ್ರತಿಭಟನೆಯಲ್ಲಿ ಮುಖಂಡರಾದ ಎಂ.ಎಸ್. ಕರಿಗೌಡ್ರ, ಎಂ.ಎ. ಹಿರೇಮಠ, ಜಗನ್ನಾಥಸಾ ಭಾಂಡಗೆ, ವಿಜಯಕುಮಾರ ಗಡ್ಡಿ, ಬಿ.ಎಸ್. ಲದ್ವಾ, ಉಸ್ತುವಾರಿಗಳಾದ ಬಸವರಾಜ ಯಂಕಾಚಿ, ಶಶಿಮೌಳಿ ಕುಲಕರ್ಣಿ, ಎಲ್.ಟಿ. ರಾಜೊಳ್ಳಿ, ಭದ್ರೇಶ ಕುಸ್ಲಾಪೂರ, ರವಿ ದಂಡಿನ, ರಾಮಣ್ಣ ಕಮ್ಮಾರ, ಅಶೋಕ ಸಂಕಣ್ಣವರ, ರಾಘವೇಂದ್ರ ಯಳವತ್ತಿ, ಅನಿಲ ಅಬ್ಬಿಗೇರಿ, ಸುಧೀರ ಕಾಟಿಗರ, ಚಂದ್ರು ತಡಸದ, ಪ್ರಕಾಶ ಅಂಗಡಿ, ನಿರ್ಮಲಾ ಕೊಳ್ಳಿ, ಶಿವು ಹಿರೇಮನಿಪಾಟೀಲ, ಇರ್ಷಾದ ಮಾನ್ವಿ, ಶೇಖಣ್ಣ ಕನ್ಯಾಳ, ಮಾಂತೇಶ ನಲವಡಿ, ಮಹಾದೇವಪ್ಪ ಚಿಂಚಲಿ, ಅಪ್ಪಣ್ಣ ಟೆಂಗಿನಕಾಯಿ, ಶಶಿಧರ ದಿಂಡೂರ, ಲಕ್ಷ್ಮಣ ದೊಡ್ಮನಿ, ಅರವಿಂದ ಕೆಲೂರ, ಸುರೇಶ ಚಿತ್ತರಗಿ, ಶಂಕರ ಕಾಕಿ, ರಮೇಶ ಸಜ್ಜಗಾರ, ಸುಭಾಸ ಸುಂಕದ, ಛಗನ ರಾಜಪುರೋಹಿತ, ಉಡಚಪ್ಪ ಹಳ್ಳಿಕೇರಿ, ಅಶ್ವಿನಿ ಜಗತಾಪ್, ವಿಜಯಲಕ್ಷ್ಮಿ ಮಾನ್ವಿ, ಸ್ವಾತಿ ಅಕ್ಕಿ, ಜಯಶ್ರೀ ಅಣ್ಣಿಗೇರಿ, ಪಾರ್ವತಿ ಪಟ್ಟಣಶೆಟ್ಟಿ, ಸುಮಂಗಲಾ ಕೊನೆವಾಲ್, ಕಮಲಾಕ್ಷಿ ತಕ್ಕಲಕೋಟಿ, ಶಿವಲೀಲಾ ಉಮಚಗಿ, ಲಕ್ಷ್ಮಿ ಕಾಕಿ, ವಾಯ್.ಪಿ. ಅಡ್ನೂರ, ಸಿದ್ದಪ್ಪ ಜೊಂಡಿ, ರಾಚಯ್ಯ ಹೊಸಮಠ, ದೇವಪ್ಪ ಹೂಗಾರ, ರಾಜು ರೊಟ್ಟಿ, ಸುರೇಶ ಹೆಸಬೂರ, ಪಂಚಾಕ್ಷರಿ ಅಂಗಡಿ, ಅವಿನಾಶ ಹೊನಗುಡಿ, ಸಂಜೀವ ಖಟವಟೆ, ಮಹಾದೇವಪ್ಪ ಹಡಪದ, ರಾಜು ಕುಲಕರ್ಣಿ, ಜಗದೀಶ ಚಿಂಚಲಿ, ಶಂಕರ ಮಲ್ಲಸಮುದ್ರ, ಸುರೇಶ ಚವ್ಹಾಣ, ಡಿ.ಬಿ. ಕರೀಗೌಡ್ರ, ಮುತ್ತು ಇಟಗಿಮಠ, ಹನುಮಂತಪ್ಪ ದಿಂಡಣ್ಣವರ, ಮಂಜುನಾಥ ತಳವಾರ, ನಾಗರಾಜ ಮದ್ನೂರ, ಶಿವಾನಂದ ಅಕ್ಕಿ, ಸುರೇಶ ಬಶೆಟ್ಟಿ, ಮಂಜು ವಡ್ಡರ, ಮಾಂತೇಶ ಬಾತಾಖಾನಿ, ಸುರೇಶ ಕುರ್ತಕೋಟಿ, ರಾಚಪ್ಪ ನವಲಿ, ಅರವಿಂದ ಅಣ್ಣಿಗೇರಿ, ಮಾಂತೇಶ ಹಳ್ಳಿ, ಶೇಖಪ್ಪ ಶಿರಹಟ್ಟಿ, ಉಮೇಶ ಹಡಪದ, ಸಂತೋಷ ಕಲ್ಯಾಣಿ, ಸಿದ್ದಪ್ಪ ಈರಗಾರ, ಶರಣು ಚಿಂಚಲಿ, ಮಲ್ಲಪ್ಪ ಕರಿಬಿಷ್ಠಿ, ರುದ್ರಪ್ಪ ಕಲ್ಬಂಡಿ, ಮಹಾದೇವಪ್ಪ ಹೊಂಬಳ, ರಾಮಣ್ಣ ಜಡಿ, ನಾರಾಯಣಿ ಸೊರಟೂರ, ಹನುಮಂತಪ್ಪ ಜಡಿ, ಅಂಬಾಜಿ ಬೈರವಾಡೆ, ಲಕ್ಷ್ಮಣ ಅಂಜೆಖಾನಿ, ಯಮನಪ್ಪ ಬೈರವಾಡೆ, ಅಂಬಾಜಿ ಅಂಜೆಖಾನಿ, ಪ್ರತಾಪ ಹತಾಡೆ, ಬಾಳು ಹಂಸ್ಕರ, ಮಾರುತಿ ಮಿಸಾಳ, ಮಂಜುನಾಥ, ವಿನೋದ ಹಂಸನೂರ ಮುಂತಾದವರಿದ್ದರು.

ರೈತ ಮೋರ್ಚಾ ಜಿಲ್ಲಾಧ್ಯಕ್ಷ ಬಸವರಾಜ ಇಟಗಿ, ನಗರ ಮಂಡಲ ರೈತ ಮೋರ್ಚಾ ಅಧ್ಯಕ್ಷ ಶಂಕರ ಕರಿಬಿಷ್ಠಿ ಮಾತನಾಡಿ, ಗೋವಿನ ಜೋಳ ಖರೀದಿಗೆ ಕೇಂದ್ರ ಸರ್ಕಾರ ನವೆಂಬರ್ 13ರಂದೇ ಅನುಮತಿ ನೀಡಿದ್ದರೂ ರಾಜ್ಯ ಸರ್ಕಾರ ನಿರ್ಲಕ್ಷ್ಯ ಧೋರಣೆ ಅನುಸರಿಸುತ್ತಿದ್ದು, ಈವರೆಗೂ ಖರೀದಿ ಕೇಂದ್ರ ಪ್ರಾರಂಭಿಸದಿರುವುದು ಸರ್ಕಾರದ ಬೇಜವಾಬ್ದಾರಿತನಕ್ಕೆ ಸಾಕ್ಷಿಯಾಗಿದೆ ಎಂದರು.


Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!