ವಿಜಯಸಾಕ್ಷಿ ಸುದ್ದಿ, ಗದಗ: ಗದಗ ಬೈಪಾಸ್ ಮೂಲಕ ಬೆಂಗಳೂರಿನಿಂದ ವಿಜಯಪುರಕ್ಕೆ ಹೋಗುವ ಮಾರ್ಗದ ರೈಲುಗಳು ಗದಗ ಮೇನ್ ಜಂಕ್ಷನ್ ಮೂಲಕ ಸಂಚಾರ ಮಾಡಲು ರೈಲ್ವೆ ಇಲಾಖೆಯ ಮುಖ್ಯ ಅಧಿಕಾರಿಗಳಿಗೆ ಗದಗ ಜಿಲ್ಲಾ ವಿಕಾಸ ವೇದಿಕೆ ಅಧ್ಯಕ್ಷ ವಿಶ್ವನಾಥ ಖಾನಾಪೂರ ಅಗ್ರಹಿಸಿದ್ದಾರೆ.
ಈ ಬಗ್ಗೆ ಪತ್ರಿಕಾ ಹೇಳಿಕೆ ನೀಡಿರುವ ಅವರು, ಗದಗ ಪ್ರವಾಸೋದ್ಯಮ ಕ್ಷೇತ್ರದ ಜೊತೆಗೆ ವಿಜಯಪುರ, ಹೊಸಪೇಟೆ, ಕೊಪ್ಪಳ, ಗಂಗಾವತಿ, ಕುಷ್ಟಗಿಗೆ ಹೋಗುವ ಪ್ರಯಾಣಿಕರ ಜೊತೆಗೆ ಗದಗ ಜಿಲ್ಲೆಯ ಜನರಿಗೆ ಈ ಮಾರ್ಗ ಬಹಳಷ್ಟು ಮಹತ್ವದ್ದಾಗಿದೆ. ಇಂಜಿನ್ ಬದಲಾವಣೆಗೆ ಕೇವಲ 30 ನಿಮಿಷಗಳ ಸಮಯ ಬೇಕಾಗುತ್ತದೆ. ಈ 30 ನಿಮಿಷಗಳ ವಿಳಂಬಕ್ಕೆ ಈ ಭಾಗದ ಬಹಳಷ್ಟು ಜನರಿಗೆ ತೊಂದರೆ ಆಗುತ್ತಿದೆ.
ಈ ಅನಾನುಕೂಲದ ಕುರಿತು ಸಂಬಂಧಿಸಿದ ಅಧಿಕಾರಿಗಳ ಗಮನಕ್ಕೆ ತಂದು ಗದಗ ಮೇನ್ ಜಂಕ್ಷನ್ ಮೂಲಕ ಸಂಚಾರ ಮಾಡುವಂತಾಗಬೇಕು ಎಂದು ಅವರು ಮನವಿ ಮಾಡಿದ್ದಾರೆ.



