ವಿಜಯಸಾಕ್ಷಿ ಸುದ್ದಿ, ಬೆಟಗೇರಿ: ಬೆಟಗೇರಿ ಬಸ್ ನಿಲ್ದಾಣದ ಹತ್ತಿರ ಶ್ರೀರಾಮ ಸೇನೆ ಹಾಗೂ ಆಟೋ ಸೇನೆ ವತಿಯಿಂದ ಕರ್ನಾಟಕದ ಕುಲತಿಲಕ, ಕನ್ನಡ ನಾಡಿನ ಬಾದಾಮಿ ಚಾಲುಕ್ಯರ ದೊರೆ ಇಮ್ಮಡಿಯ ಪುಲಕೇಶಿ ಜನ್ಮದಿನಾಚರಣೆಯನ್ನು ಆಚರಿಸಲಾಯಿತು.
ಈ ಸಂದರ್ಭದಲ್ಲಿ ಆಳೆತ್ತರದ ಪುಲಕೇಶಿ ಹಾಗೂ ವಿಜಯನಗರದ ದೊರೆಯ ಭಾವಚಿತ್ರವನ್ನು ಪೂಜಿಸಲಾಯಿತು. ಮುಖ್ಯ ಅತಿಥಿಯಾಗಿ ಆಗಮಿಸಿದ್ದ ನಗರಸಭಾ ಸದಸ್ಯ ರಾಘವೇಂದ್ರ ಮಾತನಾಡಿ, ಕನ್ನಡ ನಾಡಿನ ಇತಿಹಾಸದ ಕಣ್ಮಣಿ ಇಮ್ಮಡಿಯ ಪುಲಕೇಶಿ ಸುಮಾರು 1600 ವರ್ಷಗಳ ಹಿಂದೆ ಸಮೃದ್ಧ ಕನ್ನಡ ನಾಡನ್ನು ಕಟ್ಟಿದ ದೊರೆಯಾಗಿದ್ದಾರೆ ಎಂದರು.
ಸಾಮಾಜಿಕ ಕಾರ್ಯಕರ್ತ ಶ್ರೀನಿವಾಸ್ ಹುಬ್ಬಳ್ಳಿ ಮಾತನಾಡಿ, ಇಮ್ಮಡಿ ಪುಲಕೇಶಿಯ ಕಾಲಘಟ್ಟ 5ನೇ ಶತಮಾನ. ಇಮ್ಮಡಿ ಪುಲಕೇಶಿ ಸಾಮರ್ಥ್ಯ ಇಡೀ ಭಾರತ ಸ್ಮರಿಸುತ್ತದೆ. ನೌಕಾ ನೆಲೆಯ ಪಿತಾಮಹ ಎಂದು ಇಮ್ಮಡಿ ಪುಲಕೇಶಿಯ ಪುತ್ಥಳಿಯನ್ನು ನೌಕಾ ನೆಲೆಯಲ್ಲಿ ಅನಾವರಣಗೊಳಿಸಿ ಭಾರತ ಸರ್ಕಾರ ಗೌರವ ನೀಡಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಸಂತೋಷ ಸಣ್ಣಕ್ಕಿ, ನಾಗರಾಜ ಕುಣಗೇರಿ, ವಿನಾಯಕ ಓರಕಲ್, ಶ್ರೀನಿವಾಸ ನೀಲಗುಂದ, ಗಣೇಶ ಪಿಂಡಕೂರ, ರಾಮಕೃಷ್ಣ ನಾರೊಲ್, ಗಣೇಶ ಕಲಗಡಗಿ, ವೆಂಕಟೇಶ ಹಡಗಲಿ, ಹೆಚ್.ಎಮ್. ರಾಯಬಾಗಿ, ಅಭಿಷೇಕ ಕಾಂಬ್ಳೇಕರ, ಹನಮಂತಪ್ಪ ಭಜಂತ್ರಿ, ಮಂಜುನಾಥ ಬೋಳಾನವರ, ವೀರೇಶ ಗುಜಮಾಗಡಿ, ಶಿವು ಹೊನ್ನಳ್ಳಿ, ಮಲ್ಲಿಕಾರ್ಜುನ ಚಕ್ಕಣ್ಣವರ, ಮೈಲಾರಿ ತುರಕಾಣಿ, ಸಿದ್ಧು ಪಿಂಡಕೂರ, ಶ್ರೀಧರ ಹಾಳಕೇರಿ, ಅಶೋಕ ಭಜಂತ್ರಿ, ಮಂಜು ಜಟ್ಟಿ, ಸಂಜು ಚಟ್ಟಿ ಸೇರಿದಂತೆ ಶ್ರೀರಾಮ ಸೇನಾ, ಆಟೋ ಸೇನಾ ಪದಾಧಿಕಾರಿಗಳು ಉಪಸ್ಥಿತರಿದ್ದರು.



